ದೃಶ್ಯಂ 2: ನಾಲ್ಕು ದಿನಕ್ಕೆ 76 ಕೋಟಿ ರೂಪಾಯಿ ಕಲೆಕ್ಷನ್
ಮಲಯಾಳಂನಿಂದ ಹಿಂದಿಗೆ ರಿಮೇಕ್​ ಆದ ಸಿನಿಮಾ. ಒಟಿಟಿಯಲ್ಲಿ ಮಲಯಾಳಂ‘ದೃಶ್ಯಂ 2’ಚಿತ್ರವನ್ನು ಪ್ರೇಕ್ಷಕರು ಈ ಮೊದಲೇ ನೋಡಿದ್ದರು. ಹಾಗಿದ್ದರೂ ಹಿಂದಿ ರಿಮೇಕ್​ ನೋಡಲು ಉತ್ತರ ಭಾರತದ ಮಂದಿ ಮುಗಿ ಬಿದ್ದಿದ್ದಾರೆ. ಪರಿಣಾಮ ವಾಗಿ ಈ ಚಿತ್ರಕ್ಕೆ ಭರ್ಜರಿ ಕಲೆಕ್ಷನ್​ ಆಗುತ್ತಿದೆ. 4 ದಿನಕ್ಕೆ ಬರೋಬ್ಬರಿ 76 ಕೋಟಿ ರೂಪಾಯಿ ಹರಿದುಬಂದಿದೆ.
ಶೀಘ್ರವೇ ನೂರು ಕೋಟಿ ರೂಪಾಯಿ ಕ್ಲಬ್​ ಸೇರಲಿದೆ. ಈ ಸಿನಿಮಾದಿಂದ ನಟಅಜಯ್​ ದೇವಗನ್ಮತ್ತೆ ಮೊದಲಿನಚಾರ್ಮ್​ ಪಡೆದುಕೊಂಡಿದ್ದಾರೆ. ಮೊದಲ ವೀಕೆಂಡ್​ನಲ್ಲಿಯೇ ‘ದೃಶ್ಯಂ 2’ ನಿರ್ಮಾಪಕರ ಜೇಬು ತುಂಬಿದೆ.
ನ.18ರಂದು ತೆರೆಕಂಡ ಈ ಚಿತ್ರದಲ್ಲಿ ಅಜಯ್​ ದೇವಗನ್​ ಜೊತೆ ಶ್ರೀಯಾ ಶರಣ್​, ಟಬು, ಅಕ್ಷಯ್​ ಖನ್ನಾ, ಇಶಿತಾ ದತ್ತ ಮುಂತಾದವರು ನಟಿಸಿದ್ದಾರೆ. ಮೊದಲ ದಿನ ಸಂಗ್ರಹ ಆಗಿದ್ದು 15.38 ಕೋಟಿ ರೂಪಾಯಿ. ಎರಡನೇ ದಿನ ಕಲೆಕ್ಷನ್​ ಹೆಚ್ಚಿತು. ಶನಿವಾರ (ನ.19) ಬರೋಬ್ಬರಿ 21.59 ಕೋಟಿ ರೂಪಾಯಿ ಆದಾಯ ಹರಿದು ಬಂತು.
ಭಾನುವಾರ (ನ.20) 27.17 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತು. ಸೋಮವಾರ (ನ.21) 11.87 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಮೂಲಕ ಒಟ್ಟು ನಾಲ್ಕು ದಿನಕ್ಕೆ 76 ಕೋಟಿ ರೂಪಾಯಿ ಸಂಗ್ರಹ ಆಗಿದೆ.