ಬಾಲಿವುಡ್ ನಟ ವಿಕ್ರಮ್ ಗೋಖಲೆ ಆರೋಗ್ಯ ಸ್ಥಿತಿ ಗಂಭೀರ
ಪುಣೆ :ಬಾಲಿವುಡ್ ಹಿರಿಯ ನಟ ವಿಕ್ರಮ್ ಗೋಖಲೆ ಅವರ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ವರದಿಯಾಗಿದೆ.
ದೀನಂತ್ ಮಂಗೇಶ್ಕರ್ ಆಸ್ಪತ್ರೆಯ ಡಾ ಧನಂಜಯ್ ಕೇಲ್ಕರ್, ವಿಕ್ರಮ್ ಗೋಖಲೆ ಅವರ ನಿಧನದ ವದಂತಿಗಳನ್ನು ನಿರಾ ಕರಿಸಿದ್ದು, ವಿಕ್ರಮ್ ಸ್ಥಿತಿ ಗಂಭೀರವಾಗಿದೆ ಎಂದಿದ್ದಾರೆ.
ವಿಕ್ರಮ್ ಅವರ ಪುತ್ರಿ ʻಅವರು ಇನ್ನೂ ಕ್ರಿಟಿಕಲ್ ಮತ್ತು ಲೈಫ್ ಸಪೋರ್ಟ್‌ನಲ್ಲಿದ್ದಾರೆ. ಅವರು ಇನ್ನೂ ಸಾವನ್ನಪ್ಪಿಲ್ಲ.  ಸಾವನ್ನಪ್ಪಿದ್ದಾರೆ ಎಂಬುದು ಸುಳ್ಳು ಸುದ್ದಿ. ಅವರು ಚೇತರಿಸಿಕೊಳ್ಳಲೆಂದು ಅವರಿಗಾಗಿ ನಾನು ಪ್ರಾರ್ಥಿಸುತ್ತಿದ್ದೇನೆʼ ಎಂದು ಹೇಳಿದ್ದಾರೆ.
ವಿಕ್ರಮ್ ಗೋಖಲೆ ಅವರು ‘ಖುದಾ ಗವಾಹ್’, ‘ಹಮ್ ದಿಲ್ ದೇ ಚುಕೆ ಸನಮ್’, ‘ಭೂಲ್ ಭುಲೈಯಾ’, ‘ಮಿಷನ್ ಮಂಗಲ್’, ‘ದಿಲ್ ಸೇ’, ‘ದೇ ದಾನಾ ದಾನ್, ಹಿಚ್ಕಿ’ ಮುಂತಾದ ಹಲವು ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
2013 ರಲ್ಲಿ, ಅವರು ಮರಾಠಿ ಚಿತ್ರ ‘ಅನುಮತಿ’ಗಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ.