2023ರ ಬಹು ನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿ ಬಿಡುಗಡೆ ಮಾಡಿದ ಐಎಂಡಿಬಿ
2023ರ ಬಹುನಿರೀಕ್ಷಿತ ಚಿತ್ರ, ಬಾಲಿವುಡ್‌ ಸೂಪರ್‍ ಸ್ಟಾರ್‍ ಶಾರುಖ್‌ ಖಾನ್‌ ನಟನೆಯ ಚಿತ್ರ ಪಠಾಣ್‌ತಿಂಗಳಿಗೆ 200 ದಶಲಕ್ಷಕ್ಕೂ ಹೆಚ್ಚು ಬಾರಿ ಐಎಂಡಿಬಿ ತಾಣಕ್ಕೆ ಭೇಟಿ ನೀಡಿದ ಬಳಕೆದಾರರ ವೀಕ್ಷಣೆ ಆಧರಿಸಿದ ಪಟ್ಟಿ
ಬೆಂಗಳೂರು:ಸಿನಿಮಾ, ಟಿವಿ ಶೋ ಹಾಗೂ ಸಿನಿಮಾ ತಾರೆಯರ ಅಧಿಕೃತ ಮಾಹಿತಿ ಮೂಲವೆನಿಸಿಕೊಂಡಿರುವ ವಿಶ್ವ ಪ್ರಸಿದ್ಧ ತಾಣ ಐಎಂಡಿಬಿ, (..)ಇಂದು 2023ರ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಐಎಂಡಿಬಿ 2022ಲ್ಲಿ ಬಳಕೆದಾರರು ತಾಣಕ್ಕೆ ಭೇಟಿ ನೀಡಿದ ವೀಕ್ಷಣೆಯನ್ನು ಆಧರಿಸಿ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯನ್ನು ಸಿದ್ಧಪಡಿಸಿದೆ.
ಐಎಂಡಿಬಿಯ 2023ರ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳು1. ಪಠಾಣ್‌2. ಪುಷ್ಪ: ದಿ ರೂಲ್ – ಭಾಗ 23. ಜವಾನ್4. ಆದಿಪುರುಷ್5. ಸಲಾರ್6. ವಾರಿಸು7. ಕಬ್ಜಾ8. ದಳಪತಿ 679. ದಿ ಆರ್ಚಿಸ್10. ಡಂಕಿ11. ಟೈಗರ್ 312. ಕಿಸಿ ಕ ಭಾಯ್‌ ಕಿಸಿ ಕಿ ಜಾನ್13. ತುನಿವು14. ಅನಿಮಲ್15. ಏಜೆಂಟ್16. ಇಂಡಿಯನ್ 217. ವಾಡಿವಾಸಲ್18. ಶೆಹಜಾದ19. ಬಡೇ ಮಿಯಾ ಛೋಟೆ ಮಿಯಾ20. ಭೋಲಾ
* 2023ರಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿರುವ ಭಾರತದ ಸಿನಿಮಾಗಳ ಪೈಕಿ ಈ 20 ಚಿತ್ರಗಳು ಐಎಂಡಿಬಿ ಬಳಕೆದಾರರಲ್ಲಿ ಸತತವಾಗಿ ಜನಪ್ರಿಯವಾಗಿದ್ದು, 2020ರ ಉದ್ದಕ್ಕೂ ಪ್ರತಿ ತಿಂಗಳು ಸುಮಾರು 200 ದಶಲಕ್ಷ ಪೇಜ್ ವ್ಯೂಗಳನ್ನು ಪಡೆದಿವೆ. ಈ ಜನಪ್ರಿಯತೆ ಆಧರಿಸಿ ಪಟ್ಟಿಯನ್ನು ರೂಪಿಸಲಾಗಿದೆ. ಐಎಂಡಿಬಿ ಬಳಕೆದಾರರು ಈ ಸಿನಿಮಾ ಶೀರ್ಷಿಕೆಗಳನ್ನು ಹಾಗೂ ಇತರೆ ಚಿತ್ರಗಳ ಶೀರ್ಷಿಕೆಗಳನ್ನು ತಮ್ಮ ಐಎಂಡಿಬಿ ವಾಚ್‌ಲಿಸ್ಟ್‌ಗೆ ಸೇರಿಸಿಕೊಂಡರೆ, ಸಿನಿಮಾ ಬಿಡುಗಡೆಯಾದಾಗ ಮಾಹಿತಿ ಪಡೆದು ಕೊಳ್ಳಬಹುದು.
2023ರ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳ ಐಎಂಡಿಬಿ ಪಟ್ಟಿ ಕುರಿತು :
● ಬಹುನಿರೀಕ್ಷಿತ ಭಾರತೀಯ ಸಿನಿಮಾಗಳ ಈ ಪಟ್ಟಿಯಲ್ಲಿ 11 ಹಿಂದಿ ಸಿನಿಮಾಗಳಿದ್ದರೆ, 5 ತಮಿಳು, 3 ತೆಲುಗು ಹಾಗು ಕನ್ನಡದ 1 ಚಿತ್ರವಿದೆ.● ಮೂರು ವರ್ಷಗಳ ಅಂತರದ ನಂತರ ಬಾಲಿವುಡ್‌ ಚೇತರಿಸಿಕೊಳ್ಳುತ್ತಿದ್ದು, ಸೂಪರ್‍ ಸ್ಟಾರ್‍ ಶಾರುಖ್‌ ಖಾನ್‌ ಮುಖ್ಯ ಪಾತ್ರದಲ್ಲಿರುವ ಪಠಾಣ್‌, ಜವಾನ್ ಮತ್ತು ಡಂಕಿ ಚಿತ್ರಗಳು ತೆರೆಗೆ ಬರುತ್ತಿವೆ. ಶಾರುಖ್‌ ಖಾನ್ ಮಗಳು ಸುಹಾನಾ ಖಾನ್‌ ಕೂಡ 2023ರಲ್ಲಿ ಜೋಯಾ ಅಖ್ತರ್‍ ಅವರ ದಿ ಆರ್ಚಿಸ್‌ ಚಿತ್ರದ ಮೂಲಕ ನಟಿಯಾಗಿ ಪದರ್ಪಾಣೆ ಮಾಡುತ್ತಿದ್ದಾರೆ. ಈ ಚಿತ್ರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.● ಸೂಪರ್‍ಸ್ಟಾರ್ ಸಲ್ಮಾನ್‌ ಖಾನ್ ನಟನೆಯ 2 ಚಿತ್ರಗಳು, ಕಿಸಿ ಕ ಭಾಯ್ ಕಿಸಿ ಕಿ ಜಾನ್ ಮತ್ತು ಟೈಗರ್‍ 3 ಬಿಡುಗಡೆಯಾಗುತ್ತಿವೆ.● 1996ರಲ್ಲಿ ಬಿಡುಗಡೆಯಾದ ಬ್ಲಾಕ್‌ಬಸ್ಟರ್‍ ಚಿತ್ರ ಇಂಡಿಯನ್‌ (ಹಿಂದೂಸ್ತಾನಿ)ಯ ಸೀಕ್ವೆಲ್‌ ಇಂಡಿಯನ್‌-2 ಬಿಡುಗಡೆಯಾಗುತ್ತಿದ್ದು, ಈ ಚಿತ್ರದ ಮೂಲಕ ಕಮಲ್‌ಹಾಸನ್‌ ಮತ್ತು ನಿರ್ದೇಶಕ ಶಂಕರ್‍ ಮತ್ತೆ ಒಂದಾಗಿದ್ದಾರೆ.● ಕಾರ್ತಿಕ್ ಆರ್ಯನ್‌ ನಟನೆಯ ಶೆಹಜಾದ ಮತ್ತೊಂದು ಬಹುನಿರೀಕ್ಷಿತ ಚಿತ್ರವಾಗಿದ್ದು, ಇದು ತೆಲುಗಿನ ಸೂಪರ್‍ ಹಿಟ್ ಚಿತ್ರ, ಅಲ್ಲು ಅರ್ಜುನ್‌ ನಟನೆ ಅಲಾ ವೈಕುಂಠಪುರಮ್‌ಲೊದ ರೀಮೇಕ್‌ ಆಗಿದೆ. ಅಜಯ್‌ ದೇವಗನ್‌ ನಟನೆಯ ಭೋಲಾ ಚಿತ್ರವು 2019ರ ತಮಿಳು ಚಿತ್ರ ಕೈದಿಯ ರೀಮೇಕ್‌ ಆಗಿದೆ.
2023ರ ಐಎಂಡಿಬಿಯ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳ ಕುರಿತು ಇನ್ನಷ್ಟು ತಿಳಿಯಲು ಈ ವಿಡಿಯೋ ನೋಡಿ <> ಮತ್ತು ಪೂರ್ಣ ಪಟ್ಟಿಯಲ್ಲಿ ಇಲ್ಲಿ ಓದಿ: ://..//ls566849656/
ಐಎಂಡಿಬಿ ಕುರಿತುಐಎಂಡಿಬಿಯು ಸಿನಿಮಾ, ಟಿವಿ ಶೋಗಳು ಮತ್ತು ತಾರೆಯರಿಗಿಂತ ಸಂಬಂಧಿಸಿದ ಅಧಿಕೃತ ಹಾಗು ವಿಶ್ವ ಪ್ರಸಿದ್ಧ ಮಾಹಿತಿಯ ಮೂಲವಾಗಿದೆ. ಅಭಿಮಾನಿಗಳು ಏನನ್ನೂ ವೀಕ್ಷಿಸಬೇಕು ಮತ್ತು ಎಲ್ಲಿ ವೀಕ್ಷಿಸಬೇಕು ಎಂಬುದನ್ನು ನಿರ್ಧರಿಸುವುದಕ್ಕೆ ನೆರವಾಗುವ ಉತ್ಪನ್ನ ಮತ್ತು ಸೇವೆಗಳನ್ನು ನೀಡುತ್ತಿದೆ. ಇದರಲ್ಲಿ ಡೆಸ್ಕ್‌ಟಾಪ್‌ ಮತ್ತು ಮೊಬೈಲ್‌ಗೆ ಅನುಕೂಲವಾಗುವ ವೆಬ್‌ಸೈಟ್‌, ಐಒಎಸ್‌ ಮತ್ತು ಆಂಡ್ರಾಯ್ಡ್‌ನ ಮೊಬೈಲ್‌ ಆಪ್ಲಿಕೇಷನ್‌ಗಳು ಮತ್ತು ಫೈರ್‍ ಟಿವಿಗಳಿಗೆ ಐಎಂಡಿಬಿ ಎಕ್ಸ್‌ ರೇ ಸೇರಿವೆ. ಅಲ್ಲದೆ ಐಎಂಡಿಬಿ ಟಿವಿ ಎಂಬ ಉಚಿತವಾದ ಸ್ಟ್ರೀಮಿಂಗ್‌ ಚಾನೆಲ್‌ ಹೊಂದಿದ್ದು,, ಐಎಂಡಿಬಿ ಒರಿಜಿನಲ್‌ ವಿಡಿಯೋ ಸರಣಿಗಳನ್ನೂ ನಿರ್ಮಾಣ ಮಾಡುತ್ತದೆ. ಮನರಂಜನೆ ಉದ್ಯಮದ ವೃತ್ತಿಪರರಿಗೆ, ಐಎಂಡಿಬಿಪ್ರೊ ಮತ್ತು ಬಾಕ್ಸ್‌ ಆಫೀಸ್‌ ಮೊಜೊ ಎಂಬ ಸೇವೆಯನ್ನು ಒದಗಿಸುತ್ತದೆ. ಐಎಂಡಿಬಿ, ಅಮೆಜಾನ್‌ ಕಂಪನಿಯ ಭಾಗಗವಾಗಿದೆ. ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ:://../ ಮತ್ತು ಟ್ವಿಟರ್‍ನಲ್ಲಿ @IMDb_in. ಫಾಲೋ ಮಡಿ