ಕಾಂತಾರ ಚಿತ್ರದ ಸಪ್ತಮಿ ಗೌಡ ಬಾಲಿವುಡ್‌ಗೆ ಪಾದಾರ್ಪಣೆ
‘ನಾನು ‘ಕಾಂತಾರ’ ಸಿನಿಮಾವನ್ನುನೋಡಿದ್ದೆ. ಅದರಲ್ಲಿ ಲೀಲಾ ಪಾತ್ರದಲ್ಲಿ ಸಪ್ತಮಿ ಗೌಡ ಅವರ ನಟನೆಯು ನನಗೆ ತುಂಬ ಇಷ್ಟವಾಗಿತ್ತು. ಹಾಗಾಗಿ, ಅವರನ್ನು ಸಿನಿಮಾಕ್ಕೆ ನಮ್ಮ ಆಯ್ಕೆ ಮಾಡಬೇಕು ಎಂದು ನಿರ್ಧರಿಸಿದೆ. ನಾನು ಈ ಬಗ್ಗೆ ಸಪ್ತಮಿಗೆ ಕರೆಮಾಡಿ, ಅಪ್ರೋಚ್ ಮಾಡಿದೆ. ಕೂಡಲೇ ಅವರು ನಟಿಸಲು ಒಪ್ಪಿಕೊಂಡರು. ಅವರು ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದ ಭಾಗವಾಗಿರುವುದು ನನಗೆ ಖುಷಿ ನೀಡಿದೆ..’ ಎಂದು ಹೇಳಿದ್ದಾರೆ.