‘ಪಠಾಣ್​’ ಸಿನಿಮಾ ಮೊದಲ ದಿನ 55 ಕೋಟಿ ರೂಪಾಯಿ ಕಲೆಕ್ಷನ್
‘ಪಠಾಣ್​’ಸಿನಿಮಾಗೆ ಮೊದಲ ದಿನ ನಿರೀಕ್ಷೆಗೂ ಮೀರಿ ಕಲೆಕ್ಷನ್​ ಆಗಿದೆ. ಯಶ್​ ನಟನೆಯ‘ಕೆಜಿಎಫ್​: ಚಾಪ್ಟರ್​ 2’ಚಿತ್ರದ ಹಿಂದಿ ವರ್ಷನ್​ ಮೊದಲ ದಿನ ಮಾಡಿದ್ದ ದಾಖಲೆಯನ್ನು ಈಗ‘ಪಠಾಣ್​’ಮುರಿದಿದೆ. ‘ಪಠಾಣ್​’ ಸಿನಿಮಾ ಬರೋಬ್ಬರಿ 55 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಧೂಳೆಬ್ಬಿಸಿದೆ.
ಪ್ರಶಾಂತ್​ ನೀಲ್​ ನಿರ್ದೇಶನ ಮಾಡಿದ್ದ ‘ಕೆಜಿಎಫ್​ 2’ ಸಿನಿಮಾದ ಹಿಂದಿ ವರ್ಷನ್​ಗೆ ಉತ್ತರ ಭಾರತದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಆ ಸಿನಿಮಾ ಮೊದಲ ದಿನ 53.95 ಕೋಟಿ ರೂಪಾಯಿ ಗಳಿಸಿ ಬೀಗಿತ್ತು. ಈಗ ‘ಪಠಾಣ್​’ ಸಿನಿಮಾ ಮೊದಲ ದಿನ 55 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ಮೂಲಕ ಗಮನ ಸೆಳೆದಿದೆ.
ಶಾರುಖ್​ ಖಾನ್​ಗೆ ಜೋಡಿಯಾಗಿ ನಟಿಸಿದ ದೀಪಿಕಾ ಪಡುಕೋಣೆ ಅವರಿಗೂ ಈ ಚಿತ್ರದಿಂದ ಖ್ಯಾತಿ ಹೆಚ್ಚಾಗಿದೆ. ಈ ಚಿತ್ರ ಎಷ್ಟು ಕಲೆಕ್ಷನ್​ ಮಾಡಿದೆ ಎಂಬ ಬಗ್ಗೆ ಟ್ರೇಡ್​ ವಿಶ್ಲೇಷಕ ತರಣ್​ ಆದರ್ಶ್​ ಅವರು ಮಾಹಿತಿ ಹಂಚಿಕೊಂಡಿದ್ದಾರೆ.