ನಟಿ ಶ್ರೀದೇವಿ ಜೀವನ ಚರಿತ್ರೆ ಪುಸ್ತಕವಾಗಲಿದೆ: ಬೋನಿ ಕಪೂರ್
ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿ ಶ್ರೀದೇವಿ ಅವರು, 50 ವರ್ಷದ ತಮ್ಮ ಸಿನಿ ಜರ್ನಿಯಲ್ಲಿ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿದ್ದ ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 2013ರಲ್ಲಿ ಇಂಗ್ಲೀಷ್ ವಿಂಗ್ಲೀಷ್ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದ್ದರು. 2018ರಲ್ಲಿ ಶ್ರೀದೇವಿ ಅವರು ನಿಧನರಾದರು.