ನಟಿ ಜಿಯಾ ಖಾನ್ ನಿಧನ: ಏ.28ರಂದು ತೀರ್ಪು..?
ಮುಂಬೈ:ಬಾಲಿವುಡ್ ನಟಿ ಜಿಯಾ ಖಾನ್ ನಿಧನರಾಗಿ 10 ವರ್ಷಗಳೆ ಕಳೆದಿದ್ದು, ಇದೀಗ ಸಾವಿನ ತೀರ್ಪು ಪ್ರಕಟವಾಗಲಿದೆ.
2013ರ ಜೂನ್​ 3ರಂದು ನಟಿ ಜಿಯಾ ಖಾನ್ ಮೃತದೇಹ ಮುಂಬೈನ ಜುಹೂ ಅಪಾರ್ಟ್​ಮೆಂಟ್​ನಲ್ಲಿ ಪತ್ತೆ ಆಗಿತ್ತು.
ಆದರೆ ಅದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಬಗ್ಗೆ ಸುದೀರ್ಘ ತನಿಖೆ ನಡೆದಿದೆ. ಏಪ್ರಿಲ್​ 20ರಂದು ಜಿಯಾ ಖಾನ್​ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಅಂತಿಮ ವಿಚಾರಣೆ ನಡೆದಿದ್ದು, ನ್ಯಾಯಾಲಯವು ತೀರ್ಪು ಕಾಯ್ದಿರಿಸಿದೆ. ಏ.28ರಂದು ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.
ಜಿಯಾ ಖಾನ್ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಪೊಲೀಸರಿಗೆ ಡೆತ್​ ನೋಟ್ ಸಿಕ್ಕಿದ್ದು, ಅದರಲ್ಲಿ ಸೂರಜ್​ ಪಾಂಚೋಲಿ ಜೊತೆಗಿನ ಸಂಬಂಧದಿಂದ ತಾವು ಅನುಭವಿಸಿದ ಕಷ್ಟಗಳನ್ನು ಎಳೆಎಳೆಯಾಗಿ ವಿವರಿಸಿದ್ದರು. ಇದೀಗ ಪ್ರಕರಣದಲ್ಲಿ ಸೂರಜ್​ ಪಾಂಚೋಲಿ ತಪ್ಪಿತಸ್ಥ ಎಂದು ಸಾಬೀತಾದರೆ ಕಠಿಣ ಶಿಕ್ಷೆ ಆಗುವ ಸಾಧ್ಯತೆ ಇದೆ.