ಮಹಿಳಾ ಕೇಂದ್ರಿತ ಚಿತ್ರದಲ್ಲಿ ನಟಿ ಹನ್ಸಿಕಾ
ಚೆನ್ನೈ:ಬಾಲ ನಟಿಯಾಗಿ ಸಿನಿಮಾ ಪ್ರವೇಶ ಮಾಡಿ, ಹಿರೋಯಿನ್​ ಆಗಿ ಮಿಂಚಿದ ನಟಿ ಕೂಡ ಸೇರಲು ಸಿದ್ದರಾಗಿದ್ದಾರೆ. ಅವರೇ ನಟಿ ಹನ್ಸಿಕಾ ಮೊಟ್ವಾನಿ.
ಇತ್ತೀಚೆಗಷ್ಟೇ ವಿವಾಹ ಬಂಧನಕ್ಕೆ ಒಳಗಾದ ನಟಿ ಹನ್ಸಿಕಾ ಮತ್ತೊಂದು ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಇದರ ಬೆನ್ನಲ್ಲೇ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಈಗಾಗಲೇ ಹಲವು ಹಿಟ್​ ನೀಡಿದ ಈ ಚೆಲುವೆ ವೆಬ್​ ಸಿರೀಸ್​ನಲ್ಲಿ ನಟಿಸಲು ಸಿದ್ದರಾಗಿದ್ದಾರೆ. ಸದ್ಯ ಅವರು ‘ಮ್ಯಾನ್’​​ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಇದು ಮಹಿಳಾ ಪ್ರಧಾನ ಸಿನಿಮಾವಾಗಿದ್ದರೂ, ಚಿತ್ರದ ಹೆಸರು ‘ಮ್ಯಾನ್’​ ಎನ್ನುವುದು ವಿಪರ್ಯಾಸವಾಗಿದೆ. ‘ಎಂವೈ3’ ಎಂಬ ವೆಬ್​ ಸಿರೀಸ್​ನಲ್ಲಿ ಕೂಡ ಅವರು ಕಾಣಿಸಿಕೊಳ್ಳಲಿದ್ದಾರೆ.
ಇದು ರೋಮ್ಯಾಂಟಿಕ್​ ಕಾಮಿಡಿ ಕಥೆಯನ್ನು ಹೊಂದಿದ್ದು, ಕೊರಿಯನ್​ ಡ್ರಾಮಾ ‘ಐ ಅಮ್​ ನಾಟ್​ ಎ ರೊಬೋಟ್’​​ ಕಥೆಯನ್ನು ಇದು ಹೇಳುತ್ತದೆ.
ಇತ್ತೀಚಿಗೆ ತಮ್ಮ ಸಿನಿ ಉದ್ಯಮದಲ್ಲಿನ ತಮ್ಮ ಅನುಭವದ ಕುರಿತು ಮಾತನಾಡಿರುವ ನಟಿ ಹನ್ಸಿಕಾ, ಎರಡು ದಶಕಗಳ ಕಾಲ ಉತ್ತಮವಾದ ಉದ್ಯಮ ದಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ನನ್ನ ವೃತ್ತಿ ಜೀವನದಲ್ಲಿ ಏರು ಪೇರುಗಳನ್ನ ಕಂಡಿದ್ದೇನೆ. ಆದರೆ, ಈ ಪಯಣ ಮಾತ್ರ ಅದ್ಬುತ. ಇದು ನನಗೆ ಸಾಕಷ್ಟು ಸಹನೆಯನ್ನು ಕಲಿಸಿ ಕೊಟ್ಟಿತು. ಜೊತೆಗೆ ಸದಾ ಹೇಗೆ ಮುನ್ನಡೆಯ ಬೇಕು. ಹೇಗೆ ಕಷ್ಟ ಪಟ್ಟು ಕೆಲಸ ಮಾಡಬೇಕು ಎಂದು ಕಲಿಸಿತು. ಇಲ್ಲಿ ಕಲಿತ ಪಾಠಗಳನ್ನು ನಾನು ಬೇರೆ ಕಡೆಯಲ್ಲಿ ಕಲಿಯಲು ಸಾಧ್ಯವಾಗುವುದಿಲ್ಲ ಎಂದರು.
ಇನ್ನು ತಮ್ಮ ಮುಂದಿನ ಚಿತ್ರ ಮ್ಯಾನ್​ ಕುರಿತು ಮಾತನಾಡಿದ ಅವರು, ಈಗೊರ್​​ ನಿರ್ದೇಶನ ಮಾಡುತ್ತಿದ್ದರೆ. ಮಹಿಳಾ ಪ್ರಧಾನ ಕಥೆಯಾಗಿರುವುದರಿಂದ ಚಿತ್ರದಲ್ಲಿನ ಜವಾಬ್ದಾರಿ ಹೆಚ್ಚಿತು ಎಂದಿದ್ದಾರೆ. ನಾನು ಮಹಿಳಾ ಪ್ರಧಾನ ಸಿನಿಮಾ ಮಾಡುವಾಗ, ಹೆಚ್ಚು ಕೇಂದ್ರೀಕೃತ ಪಾತ್ರವನ್ನು ಹೊಂದಿರುತ್ತೇನೆ. ಇದರಿಂದ ಖುಷಿಯಾಗಿದ್ದೇನೆ. ಇದೇ ವೇಳೆ ಜವಾಬ್ದಾರಿ ಕೂಡ ಹಿಂದಿಗಿಂತಲೂ ಹೆಚ್ಚಿರುತ್ತದೆ. ಇಂತಹ ಸವಾಲುಗಳನ್ನು ನಿರ್ವಹಿಸಲು ನಾನು ಕೂಡ ಸಿದ್ದಳಾಗಿರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಮ್ಯಾನ್​​ ಚಿತ್ರದ ಫಸ್ಟ್​ ಲುಕ್​ ಕೂಡ ಬಿಡುಗಡೆಯಾಗಿದ್ದು, ಚಿತ್ರದ ಪೋಸ್ಟರ್​ ನೋಡಿದಾಗ ಇದು ಆಯಕ್ಷ್ಯನ್​ ಥ್ರಿಲ್ಲರ್​​ ಎಂಬುದು ತಿಳಿದು ಬರುತ್ತಿದೆ. ಇನ್ನು ಈ ಚಿತ್ರದ ಪೋಸ್ಟರ್​ ಅನ್ನು ನಟಿ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬೇಟೆಯಾಡಬೇಕು ಅಥವಾ ಬೇಟೆಯಾಗಬೇಕು.