ʼಫೈಟರ್‌ʼ ಸಿನಿಮಾ ರಿಲೀಸ್‌ ಗೆ ಅಡೆತಡೆ: ಗಲ್ಫ್‌ ರಾಷ್ಟ್ರಗಳಲ್ಲಿ ಬ್ಯಾನ್‌
ಮುಂಬಯಿ:ಬಾಲಿವುಡ್‌ ಸಿನಿರಂಗದ ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಹೃತಿಕ್‌ ರೋಷನ್‌ , ದೀಪಿಕಾ ಪಡುಕೋಣೆ ಅಭಿನಯದ ʼಫೈಟರ್‌ʼ ಸಿನಿಮಾ ರಿಲೀಸ್‌ ಗೆ ದಿನಗಣನೆ ಬಾಕಿ ಇರುವಾಗಲೇ ಅಡೆತಡೆ ಉಂಟಾಗಿದೆ.
ʼಪಠಾಣ್‌ʼ ಬಳಿಕ‌ ನಿರ್ದೇಶಕ ಸಿದ್ದಾರ್ಥ್‌ ಆನಂದ್ ʼಫೈಟರ್‌ʼ ಮೂಲಕ ಮತ್ತೊಂದು ದೇಶ ಪ್ರೇಮ ಸಾರುವ ಕಥೆಯನ್ನು ಹೇಳಲಿದ್ದಾರೆ. ಸಿನಿಮಾದ ಟೀಸರ್‌, ಟ್ರೇಲರ್‌ ಗೆ ಮೆಚ್ಚುಗೆ ವ್ಯಕ್ತವಾಗಿದೆ.
ಯುಎಇ ಹೊರತುಪಡಿಸಿ ಉಳಿದ ಗಲ್ಫ್‌ ರಾಷ್ಟ್ರಗಳಲ್ಲಿ ಸಿನಿಮಾ ರಿಲೀಸ್‌ ತಡೆ ಹಿಡಿಯಲಾಗಿದೆ.
ಇತ್ತೀಚೆಗೆ ಮಮ್ಮುಟ್ಟಿ ಅವರ ʼಕಾತಲ್ – ದಿ ಕೋರ್’, ದಳಪತಿ ವಿಜಯ್ ವಿ ಅವರ ‘ಬೀಸ್ಟ್’, ‘ಸೀತಾ ರಾಮಂ’, ತಮಿಳು ಚಿತ್ರ ‘ಎಫ್‌ಐಆರ್’ ಮತ್ತು ಮೋಹನ್ ಲಾಲ್ ಅವರ ‘ಮಾನ್ ಸ್ಟರ್’ ‌ಸಿನಿಮಾಗಳು ಬ್ಯಾನ್‌ ಆಗಿದ್ದವು.
ಸಿನಿಮಾದಲ್ಲಿ ಸ್ಕ್ವಾಡ್ರನ್ ಲೀಡರ್ ಶಂಶೇರ್ ಪ್ಯಾಟಿ ಪಠಾನಿಯಾ ಆಗಿ ಹೃತಿಕ್‌ ಕಾಣಿಸಿಕೊಳ್ಳಲಿದ್ದು, ದೀಪಿಕಾ ಸ್ಕ್ವಾಡ್ರನ್ ಲೀಡರ್ ಮಿನಲ್ ಮಿನ್ನಿ ರಾಥೋಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ, ಅನಿಲ್ ಕಪೂರ್ ಗ್ರೂಪ್ ಕ್ಯಾಪ್ಟನ್ ರಾಕೇಶ್ ಜೈ ರಾಕಿ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.