ತೆಲುಗಿನ ‘ಕಣ್ಣಪ್ಪ’ ಚಿತ್ರಕ್ಕೆ ಅಕ್ಷಯ್​ ಕುಮಾರ್..!
‘ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ವಿಷ್ಣು ಮಂಚು ಅವರ ಮಹತ್ವಾಕಾಂಕ್ಷಿ ಸಿನಿಮಾವಾದ ‘ಕಣ್ಣಪ್ಪ’ ಚಿತ್ರದಪಾತ್ರವರ್ಗಕ್ಕೆ ಬಾಲಿವುಡ್​ನ ಸೂಪರ್​ ಸ್ಟಾರ್​ ಅಕ್ಷಯ್​ ಕುಮಾರ್​ ಸೇರ್ಪಡೆ ಆಗಿದ್ದಾರೆ. ಪ್ರಭಾಸ್​, ಪ್ರಭುದೇವ, ಮೋಹನ್​ಲಾಲ್​, ಶರತ್​ಕುಮಾರ್​ ಮುಂತಾ ದವರ ಬಳಿಕ ಅಕ್ಷಯ್​ ಕುಮಾರ್​ ಅವರ ಗ್ರ್ಯಾಂಡ್​ ಎಂಟ್ರಿ ಆಗಿದೆ’ ಎಂದು ಅವರು ಪೋಸ್ಟ್​ ಮಾಡಿ ದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್​ನಲ್ಲಿ ಅಕ್ಷಯ್​ ಕುಮಾರ್​ ಅವರಿಗೆ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿಲ್ಲ. ಹಲವು ಸಿನಿಮಾಗಳು ಸೋಲು ಕಂಡಿವೆ. ಆದ್ದರಿಂದ ಅವರು ದಕ್ಷಿಣ ಭಾರತದ ಸಿನಿಮಾ ಒಪ್ಪಿಕೊಂಡಿರಬಹುದು ಎಂದು ನೆಟ್ಟಿಗರು ಮಾತನಾಡಿ ಕೊಳ್ಳುತ್ತಿದ್ದಾರೆ. ಅಕ್ಷಯ್​ ಕುಮಾರ್​ ಅಭಿನಯಿಸಿರುವ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ ಏ.10ರಂದು ಈದ್​ ಹಬ್ಬದ ಪ್ರಯುಕ್ತ ಬಿಡುಗಡೆ ಆಗಲಿದೆ.