ಅನಧಿಕೃತ ಸ್ಟ್ರೀಮಿಂಗ್‌: ನಟಿ ತಮನ್ನಾಗೆ ಸಮನ್ಸ್
ನವದೆಹಲಿ:2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಅನಧಿಕೃತ ಸ್ಟ್ರೀಮಿಂಗ್ಗೆ ಸಂಬಂಧಿಸಿದ ವಿಚಾರಣೆಗಾಗಿ ನಟಿ ತಮನ್ನಾ ಭಾಟಿಯಾ ಅವರಿಗೆ ಮಹಾರಾಷ್ಟ್ರ ಸೈಬರ್ ಸಮನ್ಸ್ ನೀಡಿದೆ.
ಈ ಘಟನೆಯು ಐಪಿಎಲ್ ಅಧಿಕೃತ ಪ್ರಸಾರ ಹಕ್ಕುಗಳನ್ನು ಹೊಂದಿರುವ ವಯಾಕಾಮ್‌ಗೆ ಗಣನೀಯ ಆರ್ಥಿಕ ನಷ್ಟವನ್ನುಂಟು ಮಾಡಿದೆ ಎಂದು ವರದಿಯಾಗಿದೆ.
ನಟಿ ತಮನ್ನಾ ಭಾಟಿಯಾ ಏಪ್ರಿಲ್ 29 ರಂದು ಅಧಿಕಾರಿಗಳ ಮುಂದೆ ಹಾಜರಾಗಬೇಕಾಗಿದೆ ಎಂದು ವರದಿಯಾಗಿದೆ.