 : ಧರ್ಮೇಂದ್ರ ಅವರನ್ನು ಪ್ರೀತಿಸುತ್ತಿದ್ದೆ ಎಂದ ಜಯಾ; ಹೇಮಾ ಪ್ರತಿಕ್ರಿಯೆ ಹೇಗಿತ್ತು ನೋಡಿ
ನೇರವಾದ ನಡೆ ನುಡಿಯಿಂದ ಹೆಸರುಗಳಿಸಿರುವ ಬಾಲಿವುಡ್ ನಟಿ, ರಾಜಕಾರಣಿ ( , ) ಜಯಾ ಬಚ್ಚನ್ ( ) ಅವರು ಇತ್ತೀಚೆಗೆ ನಟ ಧರ್ಮೇಂದ್ರ ( ) ಅವರೊಂದಿಗಿನ ಪ್ರೀತಿಯನ್ನು ನೆನಪಿಸಿಕೊಂಡರು. ಈ ಸಂದರ್ಭದಲ್ಲಿ ನಟಿ ಹೇಮಾ ಮಾಲಿನಿ (  ) ಕೂಡ ಜೊತೆ ಇದ್ದರು. 2007ರ ಕಾಫಿ ವಿತ್ ಕರಣ್ ಸೀಸನ್ 2 ನಲ್ಲಿ (    2) ಕಾಣಿಸಿಕೊಂಡಿದ್ದ ಅವರು ಈ ಸಂದರ್ಭದಲ್ಲಿ ಧರ್ಮೇಂದ್ರ ಮೇಲಿನ ತಮ್ಮ ಪ್ರೀತಿಯನ್ನು ಹೇಳಿಕೊಂಡರು. ಇದರ ವಿಡಿಯೋ ಈಗ ಇನ್ ಸ್ಟಾ ಗ್ರಾಮ್ ನಲ್ಲಿ ವೈರಲ್ ಆಗಿದೆ.
ಧರ್ಮೇಂದ್ರ ಅವರನ್ನು ಮೊದಲ ಬಾರಿಗೆ ನೋಡಿದಾಗ ನಾನು ತುಂಬಾ ಹೆದರಿದ್ದೆ. ಹೀಗಾಗಿ ಸೋಫಾದ ಹಿಂದೆ ಹೋಗಿ ಅಡಗಿದ್ದೆ ಎಂಬುದನ್ನು ಅವರು ಈ ವೇಳೆ ನೆನಪಿಸಿಕೊಂಡಿದ್ದಾರೆ. ಇದಕ್ಕೆ ಹೇಮಾ ಮಾಲಿನಿ ಸೇರಿ ಕರಣ್ ಜೋಹರ್ ಕೂಡ ನಕ್ಕರು.
ಜಯಾ ಬಚ್ಚನ್ ತಮ್ಮ ಮಾತು ಮುಂದುವರಿಸುತ್ತಾ, ನಾನು ಬಸಂತಿ ಪಾತ್ರ ಮಾಡಬೇಕಿತ್ತು. ಏಕೆಂದರೆ ನಾನು ಧರ್ಮೇಂದ್ರನನ್ನು ಪ್ರೀತಿಸುತ್ತಿದ್ದೆ. ಮೊದಲ ಸಲ ಅವರ ಪರಿಚಯವಾದಾಗ ಸೋಫಾದ ಹಿಂದೆ ಹೋಗಿ ಅಡಗಿಕೊಂಡೆ. ನನಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಅವರು ಅದ್ಭುತವಾಗಿ ಕಾಣಿಸುತ್ತಿದ್ದರು ಎಂದರು.
ಧರ್ಮೇಂದ್ರ ಅವರ ‘ದೊಡ್ಡ ಅಭಿಮಾನಿ’ ಜಯಾ ಬಚ್ಚನ್ ಎಂದು ಹೇಮಾ ಮಾಲಿನಿ ಹೇಳುತ್ತಿದ್ದಂತೆ, ಜಯಾ ಆ ದಿನ ನನಗೆ ಇನ್ನೂ ನೆನಪಿದೆ. ಧರ್ಮೇಂದ್ರ ಬಿಳಿ ಉಡುಪನ್ನು ಧರಿಸಿದ್ದರು. ಅದರಲ್ಲಿ ಅವರು ಗ್ರೀಕ್ ದೇವರಂತೆ ಕಾಣುತ್ತಿದ್ದರು ಎಂದರು.
ಇದಕ್ಕೆ ಕರಣ್ ಜೋಹರ್, ಹೇಮಾ ಅವರು ಮೊದಲ ಬಾರಿಗೆ ಧರ್ಮೇಂದ್ರ ಅವರನ್ನು ಭೇಟಿ ಆದಾಗ ಇದೇ ಅನುಭವ ಹಂಚಿಕೊಂಡಿದ್ದಾಗಿ ಹೇಳಿದರು.
    LɪᴠᴇLᴏᴠᴇLᴀᴜɢʜ 💫 (@)
ಬಾಲಿವುಡ್‌ನ ಡ್ರೀಮ್ ಗರ್ಲ್ ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಅವರು ತುಮ್ ಹಸೀನ್ ಮೈನ್ ಜವಾನ್ ಚಿತ್ರೀಕರಣದ ಸಮಯದಲ್ಲಿ ಪ್ರೀತಿಸುತ್ತಿದ್ದರು. ಆದರೆ ಈ ವೇಳೆ ಧರ್ಮೇಂದ್ರ ಅವರು ಪ್ರಕಾಶ್ ಕೌರ್ ಅವರನ್ನುಮದುವೆಯಾಗಿದ್ದರು.
ಧರ್ಮೇಂದ್ರ ಅವರ ಮೊದಲ ಪತ್ನಿ ವಿಚ್ಛೇದನಕ್ಕೆ ಒಪ್ಪದ ಕಾರಣ ಅವರಿಬ್ಬರೂ ಮದುವೆಯಾಗಲು ಇಸ್ಲಾಂಗೆ ಮತಾಂತರಗೊಂಡರು. ಧರ್ಮೇಂದ್ರ ತನ್ನ ಹೆಸರನ್ನು ದಿಲಾವರ್ ಖಾನ್ ಎಂದು ಬದಲಾಯಿಸಿಕೊಂಡರು ಮತ್ತು ಹೇಮಾ ಆಯಿಷಾ ಬಿ. ಆಗಿದ್ದರು.
1980ರಲ್ಲಿ ಖಾಸಗಿ ಸಮಾರಂಭದ ಮೂಲಕ ನಿಖಾ ಆದ ಅವರು ಬಳಿಕ ಅಯ್ಯಂಗಾರ್ ಶೈಲಿಯಲ್ಲಿ ವಿವಾಹವಾಗಿದ್ದರು. ಧರ್ಮೇಂದ್ರ ಮತ್ತು ಪ್ರಕಾಶ್ ಕೌರ್ ಅವರಿಗೆ ನಾಲ್ಕು ಮಕ್ಕಳಿದ್ದಾರೆ: ಪುತ್ರರಾದ ಸನ್ನಿ ಮತ್ತು ಬಾಬಿ ಡಿಯೋಲ್ ಮತ್ತು ಪುತ್ರಿಯರಾದ ವಿಜೇತಾ ಮತ್ತು ಅಜಿತಾ. ಹೇಮಾ ಮಾಲಿನಿಯೊಂದಿಗೆ ಅವರಿಗೆಇಶಾ ಮತ್ತು ಅಹಾನಾ ಡಿಯೋಲ್ ಎಂಬ ಪುತ್ರಿಯರಿದ್ದಾರೆ.
ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ 1973ರ ಜೂನ್ 3ರಂದು ಏಕ್ ನಜರ್ ಚಿತ್ರದ ಸಮಯದಲ್ಲಿ ಪ್ರೀತಿಯಲ್ಲಿ ಬಿದ್ದರು. ಬಳಿಕ ಸಣ್ಣ ಖಾಸಗಿ ಸಮಾರಂಭದ ಮೂಲಕ ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳು ಅಭಿಷೇಕ್ ಬಚ್ಚನ್ ಮತ್ತು ಶ್ವೇತಾ ಬಚ್ಚನ್.
ಜಯಾ ಮತ್ತು ಧರ್ಮೇಂದ್ರ ಅವರು ರಣವೀರ್ ಸಿಂಗ್, ಆಲಿಯಾ ಭಟ್ ಮತ್ತು ಶಬಾನಾ ಅಜ್ಮಿ ಅವರೊಂದಿಗೆ 2023ರಲ್ಲಿ ಬಿಡುಗಡೆಯಾದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಈ ಚಿತ್ರವನ್ನು ಕರಣ್ ಜೋಹರ್ ನಿರ್ದೇಶಿಸಿದ್ದಾರೆ.