ಇಂದು ಕಿಚ್ಚನ ಪಂಚಾಯಿತಿ: ಯಾವ ಯಾವ ವಿಚಾರಕ್ಕೆ ಕ್ಲಾಸ್ ತೆಗೋತಾರೆ ಸುದೀಪ್?
ಬಿಗ್ ಬಾಸ್ಕನ್ನಡ ಸೀಸನ್ 11 (  ) ಶುರುವಾಗಿ ಒಂದು ವಾರ ಆಗುತ್ತಾ ಬಂದಿದೆ. ಇಂದು ಮೊದಲ ವಾರದ ಕಿಚ್ಚನ ಪಂಚಾಯಿತಿ ನಡೆಯಲಿದೆ. ಸೂಪರ್ ಸಟರ್ಡೆ ವಿಥ್ ಸುದೀಪ್ () ಎಪಿಸೋಡ್​ಗೆ ಕರ್ನಾಟಕದ ಜನತೆ ಕಾದು ಕುಳಿತಿದ್ದು, ಮೊದಲ ಪಂಚಾಯಿತಿಯಲ್ಲಿ ಏನೆಲ್ಲ ಆಗುತ್ತೆ ಎಂಬುದು ಕುತೂಹಲ ಕೆರಳಿದೆ. ಮೊದಲ ವಾರ ಬಿಗ್ ಬಾಸ್ ಮನೆ ಹೆಚ್ಚು ಜಗಳಗಳಿಂದಲೇ ಕೂಡಿತ್ತು. ಅದರಲ್ಲೂ ಲಾಯರ್ ಜಗದೀಶ್ ಆಡಿದ ಮಾತುಗಳು ಅನೇಕ ಸ್ಪರ್ಧಿಗಳಿಗೆ ನೋವು ತರಿಸಿದ್ದು ಈ ಕುರಿತು ಕಿಚ್ಚ ಏನು ಹೇಳುತ್ತಾರೆ ನೋಡಬೇಕಿದೆ.
ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಚೈತ್ರಾ ಕುಂದಾಪುರ ಸ್ವರ್ಗ ವಾಸಿಗಳ ಜೊತೆ ಕಿರಿಕ್ ಮಾಡಿಕೊಂಡಿದ್ದರು. ಮಂಜು ಕೈಯಿಂದ ಹಣ್ಣು ಕಿತ್ತು ತಿಂದಿದ್ದು ಹಾಗೂ ತಮಗೆ ಕೊಟ್ಟ ಕೆಲಸವನ್ನು ಸರಿಯಾಗಿ ಮಾಡದೆ ಇದ್ದಿದ್ದರು. ಈ ಕುರಿತು ಸುದೀಪ್ ಮಾತನಾಡಬಹುದು. ಹಾಗೆಯೆ ಧನರಾಜ್ ಆಚಾರ್ ಟಾಸ್ಕ್ ಒಂದರಲ್ಲಿ ರೆಫ್ರಿ ಆಗಿದ್ದರು. ಆದರೆ, ತಮ್ಮ ಜವಾಬ್ದಾರಿ ಮರೆತು ಜಗದೀಶ್ ಜೊತೆ ಜಗಳವಾಡಿದ್ದರು. ಈ ವಿಚಾರಕ್ಕೆ ಕಿಚ್ಚ ಧನರಾಜ್​ಗೆ ನಿಯಮದ ಕುರಿತು ಹೇಳಬಹುದು.
ಎಲ್ಲರ ಕಣ್ಣು ಲಾಯರ್ ಜಗದೀಶ್ ಮೇಲೆ:
ಇಂದಿನ ಎಪಿಸೋಡ್​ನಲ್ಲಿ ಕಿಚ್ಚ ಸುದೀಪ್ ಅವರು ಲಾಯರ್ ಜಗದೀಶ್ ಅವರಿಗೆ ಯಾವ ರೀತಿ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಸ್ಪರ್ಧಿಗಳ ಜೊತೆಗಿನ ಜಗಳ ಒಂದುಕಡೆಯಾದರೆ ಮತ್ತೊಂದೆಡೆ ಇವರು ಬಿಗ್ ಬಾಸ್​ಗೆನೇ ಧಮ್ಕಿ ಹಾಕಿದ್ದರು. ‘ಈ ಪ್ರೊಗ್ರಾಂ ಹಾಳು ಮಾಡಿಲ್ಲ ನನ್ನ ಹೆಸರು ಬೇರಿ ಇಡಿ. ಯಾವನೂ ಕಾಲಿಡಬಾರದು ಇಲ್ಲಿಗೆ. ಬಿಗ್ ಬಾಸ್ ನಿಮ್ಮನ್ನು ಎಕ್ಸ್​ಪೋಸ್ ಮಾಡುತ್ತೇನೆ. ನಮ್ಮನ್ನ ಎದುರು ಹಾಕಿಕೊಂಡು ಕರ್ನಾಟಕದಲ್ಲಿ ಬಿಗ್ ಬಾಸ್ ಓಡಿಸ್ತೀರಾ?’ ಎಂದು ಜಗದೀಶ್ ನಾಲಿಗೆ ಹರಿಬಿಟ್ಟಿದ್ದರು. ಮುಂದಿನ ದಿನ ಈ ಮಾತಿಗೆ ಕ್ಷಮೆ ಕೇಳಿದ್ದರೂ ಸುದೀಪ್ ಈ ವಿಚಾರವನ್ನು ಎತ್ತುವುದು ಖಚಿತ.
ಹಾಗೆಯೆ ಹೆಣ್ಣು ಮಕ್ಕಳ ವಿಚಾರಕ್ಕೆ ಹೋದರೆ ಕಿಚ್ಚ ಸುದೀಪ್‌ ಸುಮ್ನೆ ಬಿಡೋದಿಲ್ಲ. ಲಾಯರ್ ಜಗದೀಶ್ ಅವರು ಮಾನಸಾ ಅವರಿಗೆ ‘ಯಾವ ಸೀಮೆ ಹೆಂಗಸು ಅವಳು’ ಎಂದು ಹೇಳಿದ್ದರು. ಅಲ್ಲದೆ ಏಕವಚನದಲ್ಲಿ ಮಾತನಾಡಿದ್ದರು. ಇದರ ಬಗ್ಗೆ ಇಂದಿನ ಎಪಿಸೋಡ್​ನಲ್ಲಿ ದೊಡ್ಡ ಡಿಸ್ಕಷನ್ ಆಗುವುದು ಖಚಿತ. ಅತ್ತ ಧರ್ಮ ಕೀರ್ತಿರಾಜ್ ಹಾಗೂ ಐಶ್ವರ್ಯ ನಡುವೆ ಪ್ರೀತಿ ಹುಟ್ಟಿದಂತಿದೆ. ಇವರನ್ನು ಕಿಚ್ಚ ಕೂಡ ಕಾಲೆಳಯಬಹುದು.
 11: ಒಂದೇ ವಾರಕ್ಕೆ ನಿಲ್ಲುತ್ತಾ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ?: ಯಾಕೆ?, ಏನಾಯಿತು?