ವಯನಾಡ್ ಭೂಕುಸಿತ ಸಂತ್ರಸ್ತರಿಗೆ ಭಾರಿ ಕೊಡುಗೆ ನೀಡಿದ ನಟ ಪ್ರಭಾಸ್
ವಯನಾಡ್:ಭೂಕುಸಿತದಿಂದ ಹಾನಿಗೊಳಗಾದ ಜನರಿಗೆ ಸಹಾಯ ಮಾಡಲು ಅವರು ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ 2 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ೪೦೦ ಕ್ಕೂ ಹೆಚ್ಚು ದಾಟಿದೆ ಮತ್ತು ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.
ಜುಲೈ 30 ರಂದು ಕೇರಳದ ವಯನಾಡ್ನಲ್ಲಿ ಮೂರು ಭೂಕುಸಿತಗಳು ಸಂಭವಿಸಿದ್ದು, ಇದು ಅನೇಕ ಹಳ್ಳಿಗಳ ಮೇಲೆ ಪರಿಣಾಮ ಬೀರಿದೆ.
ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ ಮೊದಲ ಸೆಲೆಬ್ರಿಟಿಗಳಲ್ಲಿ ಚಿಯಾನ್ ವಿಕ್ರಮ್ ಒಬ್ಬರು. ಪ್ರವಾಹ ಪೀಡಿತ ಜನರಿಗೆ ಅವರು ೨೦ ಲಕ್ಷ ರೂ. ನೀಡಿದರು. ಸೂರ್ಯ, ಜ್ಯೋತಿಕಾ ಮತ್ತು ಕಾರ್ತಿ ಒಟ್ಟಾಗಿ ವಯನಾಡ್ನಲ್ಲಿ ಭೂಕುಸಿತ ಸಂತ್ರಸ್ತರಿಗೆ 50 ಲಕ್ಷ ರೂ. ನೀಡಿದ್ದಾರೆ. ಪ್ರಭಾಸ್ 2 ಕೋಟಿ ರೂ ದೇಣಿಗೆ ನೀಡಿದ್ದಾ.