  : ಮಿಲನಾ-ಅನೀಶ್‌ ಜೋಡಿಯ ʼಆರಾಮ್ ಅರವಿಂದ ಸ್ವಾಮಿʼ ಚಿತ್ರತಂಡದಿಂದ ಹೊರ ಬಿತ್ತು ಬಿಗ್‌ ಅಪ್‌ಡೇಟ್‌
ಬೆಂಗಳೂರು:ಸಿನಿಮಾ ಅನ್ನೋದೇ ಒಂದು ಸವಾಲು. ಈ ಸವಾಲನ್ನು ಸ್ವೀಕರಿಸಿ ಅಖಾಡಕ್ಕೆ ಇಳಿದ ಮೇಲೆ ಪ್ರೇಕ್ಷಕರಿಗೆ ಸಿನಿಮಾ ತಲುಪಿಸುವುದು ಮಗದೊಂದು ಸವಾಲು. ತಮ್ಮ ಚಿತ್ರವನ್ನು ಚಿತ್ರಪ್ರೇಮಿಗಳಿಗೆ ತಲುಪಿಸಲು ಪ್ರಚಾರ ಬಹಳ‌ ಮುಖ್ಯ. ಈ ವಿಚಾರದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ʼಆರಾಮ್ ಅರವಿಂದ ಸ್ವಾಮಿʼ (  ) ಚಿತ್ರ ತಂಡಕ್ಕೆ ಶಹಬ್ಬಾಸ್‌ ಹೇಳಲೇಬೇಕು. ವಿಭಿನ್ನ ಆಲೋಚನೆಯೊಂದಿಗೆ ಸಿನಿಮಾ ಪ್ರಚಾರಕ್ಕೆ ಮುಂದಾಗಿದೆ.
ಆರಂಭದಿಂದಲೂ ವಿಭಿನ್ನ ಆಲೋಚನೆ  ಮೂಲಕ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿರುವ ʼಆರಾಮ್ ಅರವಿಂದ ಸ್ವಾಮಿʼ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಎಲ್ಲವೂ ಅಂದುಕೊಂಡಂತಾದರೆ ನವೆಂಬರ್‌ನಲ್ಲಿ ಈ ಅಭಿಷೇಕ್ ಶೆಟ್ಟಿ ಹಾಗೂ ಅನೀಶ್ ತೇಜೇಶ್ವರ್ ಸಿನಿಮಾ ಬಿಡುಗಡೆಯಾಗಲಿದೆ. ಗಣೇಶ ಹಬ್ಬದ ಪ್ರಯುಕ್ತ  ಸಿನಿಮಾ ಬಿಡುಗಡೆ ಬಗ್ಗೆ ಚಿತ್ರತಂಡ ಮಾಹಿತಿ‌ ಹಂಚಿಕೊಂಡಿದೆ. ಪೈಟಿಂಗ್‌ ರೀತಿಯ ಪೋಸ್ಟರ್‌ ಬಿಡುಗಡೆ ಮಾಡಿ ಗಮನ ಸೆಳೆದಿದೆ. ನವೆಂಬರ್‌ನಲ್ಲಿ ಯಾವಾಗ ಸಿನಿಮಾ ಬರಲಿದೆ ಎನ್ನುವುದನ್ನು ಶೀಘ್ರದಲ್ಲೇ ಚಿತ್ರತಂಡ ರಿವೀಲ್ ಮಾಡಲಿದೆ.
ಮಾಸ್ ಸಿನಿಮಾಗಳಲ್ಲಿಯೇ ಹೆಚ್ಚಾಗಿ ನಟಿಸಿರುವ ಅನೀಶ್ ʼಆರಾಮ್ ಅರವಿಂದ್ ಸ್ವಾಮಿʼ ಚಿತ್ರದ ಮೂಲಕ ರೊಮ್ಯಾಂಟಿಕ್ ಕಾಮಿಡಿ ಕಥಾಹಂದರವನ್ನು ಪ್ರೇಕ್ಷಕರಿಗೆ ಉಣಬಡಿಸಲಿದ್ದಾರೆ. ʼನಮ್ ಗಣಿ ಬಿಕಾಂ ಪಾಸ್ʼ ಮತ್ತು ʼಗಜಾನನ ಆ್ಯಂಡ್ ಗ್ಯಾಂಗ್ʼ ಸಿನಿಮಾ ಮೂಲಕ ಭರವಸೆ ಮೂಡಿಸಿರುವ ಅಭಿಷೇಕ್ ಶೆಟ್ಟಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
      (@abhishek_shetty_official)
ಅನೀಶ್‌ಗೆ ಮಿಲನಾ ನಾಗರಾಜ್ ಹಾಗೂ ಹೃತಿಕ ಶ್ರೀನಿವಾಸ್ ಇಬ್ಬರು ನಾಯಕಿಯರು. ‘ಆರಾಮ್ ಅರವಿಂದ್ ಸ್ವಾಮಿ’ ಸಿನಿಮಾಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಟ್ಯೂನ್ ಹಾಕುತ್ತಿದ್ದಾರೆ. ಹೀಗಾಗಿ ಒಳ್ಳೊಳ್ಳೆ ಹಾಡುಗಳನ್ನು ನಿರೀಕ್ಷೆ ಮಾಡಬಹುದು. ‘ಅಕಿರ’ ಸಿನಿಮಾ ನಿರ್ಮಿಸಿದ್ದ ಶ್ರೀಕಾಂತ್ ಪ್ರಸನ್ನ ಹಾಗೂ ‘ಗುಳ್ಟು’ ಸಿನಿಮಾ ನಿರ್ಮಾಪಕ ಪ್ರಶಾಂತ್ ರೆಡ್ಡಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ವೈವಿಬಿ ಶಿವಸಾಗರ್ ಛಾಯಾಗ್ರಹಣ, ಉಮೇಶ್ ಆರ್. ಬಿ. ಸಂಕಲನ ಈ ಸಿನಿಮಾಗಿದೆ.
ಈ ಸುದ್ದಿಯನ್ನೂ ಓದಿ: : ಚಿತ್ರ ನಿರ್ಮಾಣಕ್ಕೆ ಮುಂದಾದ ತನಿಷಾ ಕುಪ್ಪಂಡ; ಕೋಮಲ್‌ ಅಭಿನಯದ ‘ಕೋಣ’ ಸಿನಿಮಾದ ಟೀಸರ್‌ ಔಟ್‌
ಎರಡು ದಿನಗಳ ಹಿಂದೆಯಷ್ಟೇ ಮಗುವಿಗೆ ಜನ್ಮ ನೀಡಿದ ಖುಷಿಯಲ್ಲಿರುವ ಮಿಲನಾ ನಾಗ್‌ರಾಜ್‌ ಅವರೂ ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮಲಯಾಳಂ ಮೂಲದ ಯುವತಿ ಪಾತ್ರದಲ್ಲಿ ಅವರು ಮಿಂಚಿದ್ದಾರೆ. ಮತ್ತೊಂದು ವಿಶೇಷ ಎಂದರೆ ಅನೀಶ್‌ ಮತ್ತು ಮಿಲನಾ ನಟನೆಯ ಮೊದಲ ಸಿನಿಮಾ ಇದಾಗಿದೆ. ಹೀಗಾಗಿ ಸೆಟ್ಟೇರಿದ ದಿನದಿಂದಲೇ ಈ ಚಿತ್ರ ಗಮನ ಸೆಳೆದಿದೆ.