’  : ಸಲ್ಮಾನ್‌ ಖಾನ್‌ ಹೆಗಲ ಮೇಲೆ ಕೈ ಹಾಕಿದ ಅನಂತ್‌ ಅಂಬಾನಿ; ವೀಡಿಯೊ ಇಲ್ಲಿದೆ
ಮುಂಬೈ:ದೇಶದೆಲ್ಲೆಡೆ ಅದ್ಧೂರಿಯಾಗಿ ಗಣೇಶ ಚತುರ್ಥಿ ( ) ಆಚರಿಸಲಾಗಿದೆ. ಮುಕೇಶ್‌ ಅಂಬಾನಿ ಕುಟುಂಬ ಸದಸ್ಯರು ಕೂಡ ನಿನ್ನೆ (ಸೆಪ್ಟೆಂಬರ್‌ 7) ರಾತ್ರಿ ತಮ್ಮ ನಿವಾಸ  ಆಂಟಿಲಿಯಾದಲ್ಲಿ ವಿಜೃಂಭಣೆಯಿಂದ ಗಣೇಶನ ಹಬ್ಬವನ್ನು ಕೊಂಡಾಡಿದ್ದಾರೆ. ಈ ಗಣೇಶೋತ್ಸವ ಆಚರಣೆಯಲ್ಲಿ ಬಾಲಿವುಡ್‌ ಸ್ಟಾರ್‌ಗಳು, ಉದ್ಯಮಿಗಳು, ರಾಜಕೀಯ ಮುಖಂಡರು ಸೇರಿ ಗಣ್ಯರು ಭಾಗವಹಿಸಿದ್ದಾರೆ (’  ). ಈ ವೇಳೆ ಸಲ್ಮಾನ್‌ ಖಾನ್‌ ( ) ಹೆಗಲಿಗೆ ಕೈ ಹಾಕಿ ನಿಂತಿರುವ ಅನಂತ್‌ ಅಂಬಾನಿ ( )ಯ ಫೋಟೊ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.
ತಮ್ಮ ಸಹೋದರಿ ಅರ್ಪಿತಾ ಖಾನ್‌ ಅವರ ಮನೆಯಲ್ಲಿ ಆಯೋಜಿಸಿದ್ದ ವಿಶೇಷ ಪೂಜೆಯಲ್ಲಿ ಭಾಗವಹಿಸಿದ ಬಳಿಕ ಸಲ್ಮಾನ್‌ ಖಾನ್‌ ಆಂಟಿಲಿಯಾಕ್ಕೆ ಆಗಮಿಸಿದ್ದರು. ಈ ವೇಳೆ ಅಂಬಾನಿ ಕುಟುಂಬ ಸದಸ್ಯರು ಅವರನ್ನು ಬರಮಾಡಿಕೊಂಡಿದ್ದರು.
      (@)
ಸದ್ಯ ವೈರಲ್‌ ಆಗುತ್ತಿರುವ ವೀಡಿಯೊದಲ್ಲಿ ಸಲ್ಮಾನ್‌ ಖಾನ್‌ ಮತ್ತು ಅನಂತ್‌ ಅಂಬಾನಿ ಆತ್ಮೀಯವಾಗಿ ಮಾತನಾಡುತ್ತಿರುವುದು ಕಂಡುಬಂದಿದೆ. ಈ ವೇಳೆ ಸಲ್ಮಾನ್‌ ಖಾನ್‌ ಹೆಗಲ ಮೇಲೆ ಅನಂತ್‌ ಅಂಬಾನಿ ಸ್ನೇಹದಿಂದ ಕೈ ಹಾಕಿದ್ದಾರೆ. ಹಿಂದಿನಿಂದಲೂ ಇವರಿಬ್ಬರು ಆತ್ಮೀಯರು. ಇಬ್ಬರ ಮಧ್ಯೆ ಒಂದೊಳ್ಳೆ ಸ್ನೇಹ ಸಂಬಂಧ ಇದೆ. ಅನಂತ್‌ ಮದುವೆಯಲ್ಲಿ ಸಲ್ಮಾನ್‌ ಖಾನ್‌ ಸಕ್ರೀಯವಾಗಿ ಭಾಗವಹಿಸಿದ್ದರು. ಅಲ್ಲದೆ ವರ್ಷಾರಂಭದಲ್ಲಿ ನಡೆದ ಪ್ರೀ-ವೆಡ್ಡಿಂಗ್‌ ಸಮಾರಂಭದಲ್ಲಿ ಭಾಗವಹಿಸಿದ್ದ ಸಲ್ಮಾನ್‌ ಖಾನ್‌ ಅವರು ಆಮೀರ್‌ ಖಾನ್‌ ಮತ್ತು ಶಾರುಖ್‌ ಖಾನ್‌ ಜೊತೆ ಹೆಜ್ಜೆ ಹಾಕಿದ್ದರು.
ಭವ್ಯ ಮಂಟಪ
ಆಂಟಿಲಿಯಾದಲ್ಲಿ ಭವ್ಯ ಮಂಟಪ ನಿರ್ಮಿಸಿ ಗಣೇಶನನ್ನು ಕೂರಿಸಲಾಗಿತ್ತು. ಗಣೇಶ ಮಂಟಪದ ಹೊರಗೆ ಭವ್ಯ ಪೆಂಡಾಲ್‌ ಹಾಕಿ ಅತಿಥಿಗಳು ಆಸನದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಬಣ್ಣದ ಹೂವುಗಳು, ಬಟ್ಟೆಗಳಿಂದ ಅಲಂಕೃತಗೊಂಡಿದ್ದ ಮಂಟಪ ನೋಡುಗರ ಕಣ್ಮನ ಸೆಳೆದಿತ್ತು. ಕರೀನಾ ಕಪೂರ್, ಸೈಫ್ ಅಲಿ ಖಾನ್, ಕಿಯಾರಾ ಅಡ್ವಾಣಿ, ಸಿದ್ಧಾರ್ಥ್ ಮಲ್ಹೋತ್ರಾ, ಆಮೀರ್‌ ಖಾನ್‌, ಸಂಜಯ್‌ ದತ್‌, ರಾಜ್‌ಕುಮಾರ್‌, ಸೋನಂ ಕಪೂರ್‌, ಜೆನಿಲಿಯಾ, ರಿತೇಶ್‌ ದೇಶ್‌ಮುಖ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಮೊದಲಾದವರು ಭಾಗವಹಿಸಿದ್ದರು.
ಈ ಸುದ್ದಿಯನ್ನೂ ಓದಿ: : ದೀಪಿಕಾ ಪಡುಕೋಣೆ- ರಣವೀರ್‌ ದಂಪತಿಗೆ ಹೆಣ್ಣು ಮಗು ಜನನ
ಸದ್ಯ ಸಲ್ಮಾನ್‌ ಖಾನ್‌ ಕಾಲಿವುಡ್‌ನ ಖ್ಯಾತ ನಿರ್ದೇಶಕ ಎ.ಆರ್‌.ಮುರುಗದಾಸ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ʼಸಿಕಂದರ್‌ʼ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕನ್ನಡತಿ, ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಮುಂದಿನ ವರ್ಷ ಈದ್‌ ಮಿಲಾದ್‌ಗೆ ತೆರೆ ಕಾಣಲಿದೆ. ಕಳೆದ ವರ್ಷ ತೆರೆಕಂಡ ಸಲ್ಮಾನ್‌ ಖಾನ್‌ ಅಬಿನಯದ ʼಕಿಸಿ ಕ ಭಾಯಿ ಕಿಸಿ ಕಿ ಜಾನ್‌ʼ ಮತ್ತು ʼಟೈಗರ್‌ 3ʼ ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡುವಲ್ಲಿ ವಿಫಲವಾಗಿತ್ತು. ಹೀಗಾಗಿ ʼಸಿಕಂದರ್‌ʼ ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.  ಏತನ್ಮಧ್ಯೆ ಸಲ್ಮಾನ್ ಖಾನ್‌ ಬಿಗ್‌ಬಾಸ್‌ನ ಹೊಸ ಸೀಸನ್‌ಗೆ ನಿರೂಪಕರಾಗಿ ಮರಳಲಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಬಿಗ್‌ಬಾಸ್‌ ಒಟಿಟಿ ಸೀಸನ್ ಅನ್ನು ಸಲ್ಮಾನ್‌ ಖಾನ್‌ ಅನುಪಸ್ಥಿತಿಯಲ್ಲಿ ಅನಿಲ್‌ ಕಪೂರ್‌ ನಿರೂಪಿಸಿದ್ದರು.