 : ಮಲಗಿದ್ದಲ್ಲೇ ಹಾರ್ಟ್‌ ಅಟ್ಯಾಕ್‌; ಖ್ಯಾತ ಕಿರುತೆರೆ ನಟ ವಿಧಿವಶ
ಮುಂಬೈ: ಖ್ಯಾತ ಹಿಂದಿ ಕಿರುತೆರೆ ನಟ ವಿಕಾಸ್‌ ಸೇಥಿ( ) ಇಂದು ಹೃದಯಾಘಾತ( )ದಿಂದ ವಿಧಿವಶರಾಗಿದ್ದಾರೆ. ಕ್ಯುಂಕಿ ಸಾಸ್‌ ಭೀ ಕಭೀ ಬಹೂ ಥಿ(     ), ಕಹೀತೋ ಹೋಗಾ(  ) ಮತ್ತು ಕಸೌತಿ ಜಿಂದಗಿ ಕೇ ಸೇರಿದಂತೆ ಹಲವಾರು ಫೇಮಸ್‌ ಧಾರಾವಾಹಿಗಳ ಮೂಲಕ ಖ್ಯಾತಿ ಪಡೆದಿದ್ದ ವಿಕಾಸ್‌(48) ವಿಧಿವಶರಾಗಿದ್ದು, ಪತ್ನಿ ಜಾಹ್ನವಿ ಮತ್ತು ಇಬ್ಬರು ಅವಳಿ ಜವಳಿ ಮಕ್ಕಳನ್ನು ಅಗಲಿದ್ದಾರೆ ಎನ್ನಲಾಗಿದೆ.
ಅವರ ಅತ್ಯಂತ ಜನಪ್ರಿಯ ಧಾರಾವಾಹಿಗಳಾದ ಕಹಿನ್ ಟು ಹೋಗಾದಲ್ಲಿ ಸ್ವಯಂ ಶೆರ್ಗಿಲ್ ಪಾತ್ರ ಹಾಗೂ  ಕಸೌತಿ ಜಿಂದಗಿ ಕೇ ನಲ್ಲಿ ಪ್ರೇಮ್ ಬಸು ಪಾತ್ರವನ್ನು ನಿರ್ವಹಿಸಿ ಜನಮನ್ನಣೆ ಗಳಿಸಿದ್ದರು. ನಿನ್ನೆ ರಾತ್ರಿ ಮಲಗಿದ್ದ ವಿಕಾಸ್‌ ಸೇಥಿಗೆ ಅಲ್ಲೇ ಹೃದಯಾಘಾತವಾಗಿದ್ದು, ಬೆಳಗ್ಗೆ ಏಳಲೇ ಇಲ್ಲ. ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅವರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.
                                 ######…../HGB9YKbu9u
2021 ರಲ್ಲಿ, ವಿಕಾಸ್ ಅವರು ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಅವರ ಇನ್ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಅಪ್ಲೋಡ್ ಮಾಡಿದರು. ವೈದ್ಯರು ಒಂದೂವರೆ ತಿಂಗಳು ಬೆಡ್‌ ರೆಸ್ಟ್‌ಗೆ ಸಲಹೆ ನೀಡಿದ್ದರೂ  ವಿಕಾಸ್‌ ನಿರೀಕ್ಷೆಗೂ ಮೀರಿ ಬಹಳ ಬೇಗ ಚೇತರಿಸಿಕೊಂಡಿದ್ದರು. ಅವರು ತಮ್ಮ ಸ್ನೇಹಿತರೊಂದಿಗೆ, ಅಭಿಮಾನಿಗಳ ಜತೆ ವಿಡಿಯೋ ಮಾಡುತ್ತಾ ಸೋಶಿಯಲ್‌ ಮೀಡಿಯಾದಲ್ಲಿ ಬಹಳ ಅಕ್ಟಿವ್‌ ಆಗಿದ್ದರು.
2021ರಲ್ಲಿ ವಿಕಾಸ್‌ ಮತ್ತು ಜಾಹ್ನವಿ ದಂಪತಿಗೆ ಅವಳಿ ಜವಳಿ ಗಂಡು ಮಕ್ಕಳಾಗಿದ್ದವು. ಮಕ್ಕಳ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ವಿಕಾಸ್‌ ಸಂಸತ ವ್ಯಕ್ತಪಡಿಸಿದ್ದರು. ಅದೂ ಅಲ್ಲದೇ ಬಾಡಿ ಫಿಟ್‌ನೆಸ್‌ ಬಗ್ಗೆ ಭಾರೀ ಆಸಕ್ತಿ ಹೊಂದಿದ್ದ ವಿಕಾಸ್‌ ಆಗಾಗ ತಮ್ಮ ವರ್ಕ್‌ ಔಟ್‌ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದರು. ಇನ್ನು ವಿಕಾಸ್‌ ಸೇಥಿ ಸಾವಿಗೆ ಕಿರುತೆರೆ ಕಂಬನಿ ಮಿಡಿದಿದೆ. ಅನೇಕ ಸಹ ನಟ ನಟಿಯರು  ವಿಕಾಸ್‌ ಅಗಲಿಕೆ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:ನಟ ಸಯಾಜಿ ಶಿಂಧೆಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು