 ‌: ಬೆಂಗಳೂರಲ್ಲಿ ಬಂಧನವಾಗಿದ್ದ ಜರ್ಮನ್ ಯೂಟ್ಯೂಬರ್ ಯೂನೆಸ್‌ ಜರೂ, ಪುನೀತ್‌ ರಾಜ್‌ಕುಮಾರ್‌ ಅಭಿಮಾನಿ!
ಬೆಂಗಳೂರು:ನಗರದಲ್ಲಿ ಇತ್ತೀಚೆಗೆ ಬಂಧನವಾಗಿದ್ದ ಜರ್ಮನಿಯ ಖ್ಯಾತ ಯೂಟ್ಯೂಬರ್ ಯೂನೆಸ್‌ ಜರೂ( ‌), ಕನ್ನಡದ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಅಭಿಮಾನಿ ಎಂದು ತಿಳಿದುಬಂದಿದೆ. ಜನರಿಗೆ ವಿವಿಧ ಪ್ರಶ್ನೆಗಳನ್ನು ಕೇಳಿ, ಸರಿಉತ್ತರ ನೀಡಿದವರಿಗೆ ದುಬಾರಿ ಬೆಲೆಯ ಐಫೋನ್​ ಗಿಫ್ಟ್​ ನೀಡುತ್ತಿದ್ದ ಯ್ಯೂಟೂಬರ್, ಬೆಂಗಳೂರಿನ ಎಂಜಿ ರಸ್ತೆಗೆ ಇತ್ತೀಚೆಗೆ ಆಗಮಿಸಿದ್ದಾಗ ಪುನೀತ್‌ ರಾಜ್‌ಕುಮಾರ್‌ ( ) ಅವರ ಫೋಟೊ ಬಿಡುಗಡೆ ಮಾಡಿದ್ದರು.
ಖ್ಯಾತ ಇನ್​ಸ್ಟಾಗ್ರಾಮ್ ಸ್ಟಾರ್, ಜರ್ಮನ್‌ ಕಂಟೆಂಟ್‌ ಕ್ರಿಯೇಟರ್‌ ಯೂನೆಸ್‌ ಜರೂ ಎಂಜಿ ರಸ್ತೆಗೆ ಬಂದಿದ್ದ ಹಿನ್ನೆಲೆಯಲ್ಲಿ ಆ ವಿಚಾರ ತಿಳಿದು ನೂರಾರು ಅಭಿಮಾನಿಗಳು ನಡು ರಸ್ತೆಯಲ್ಲಿಯೇ ಗುಂಪು ಸೇರಿದ ಹಿನ್ನೆಲೆ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಅನುಮತಿ ಪಡೆಯದೆ ಜನರ ಗುಂಪು ಸೇರಿಸಿದ್ದ ಹಿನ್ನೆಲೆ  ಯೂಟ್ಯೂಬರ್‌ನ ಅಶೋಕನಗರ ಪೊಲೀಸರು ವಶಕ್ಕೆ ಪಡೆದಿದ್ದರು.
   ## ❤️#DrPuneethRajKumar𓃵#../mwlpP92wYu
ಪೊಲೀಸರು ವಶಕ್ಕೆ ಪಡೆದ ಬಳಿಕ ಹೊಯ್ಸಳ ವಾಹನದ ಒಳಗೆ ಕೂತು ವಿಡಿಯೊ ಮಾಡಿದ್ದ ಯೂನೆಸ್‌ ಜರೂ, ಸ್ಟೇಷನ್ ಒಳಗಿದ್ದ ಫೋಟೊ ಹಾಕಿ ತೊಂದರೆಯಲ್ಲಿದ್ದಿನಿ ಎಂದು ಮೆಸೇಜ್ ಕಳಿಸಿದ್ದರು. ಬಳಿಕ ಅವರಿಗೆ ಎಚ್ಚರಿಕೆ ನೀಡಿ ಪೊಲೀಸರು ಬಿಟ್ಟು ಕಳಿಸಿದ್ದರು.
      (@)
ಯೂನೆಸ್ ಜರೂ, ಬೇರೆ ಬೇರೆ ದೇಶಗಳಿಗೆ ತೆರಳಿ ಜನರಿಗೆ ಸರ್ಪ್ರೈಸ್ ಗಿಫ್ಟ್​ಗಳನ್ನು ಕೊಡುತ್ತಾರೆ. ವಿವಿಧ ಪ್ರಶ್ನೆಗಳನ್ನು ಕೇಳಿ ಅದಕ್ಕೆ ಸರಿಯಾದ ಉತ್ತರ ನೀಡಿದವರಿಗೆ ಬೆಲೆ ಬಾಳುವ ಗಿಫ್ಟ್‌ಗಳನ್ನು ನೀಡಿ, ಅದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡುತ್ತಾರೆ. ಇವರಿಗೆ ಇನ್‌ಸ್ಟಾಗ್ರಾಂನಲ್ಲಿ 15 ಮಿಲಿಯನ್‌(1.5 ಕೋಟಿ) ಫಾಲೋವರ್ಸ್‌ ಇದ್ದಾರೆ.