‘ ’  : ಒಟಿಟಿಗೆ ಲಗ್ಗೆಯಿಟ್ಟ ʼಮಿಸ್ಟರ್‌ ಬಚ್ಚನ್ʼ ಸಿನಿಮಾ
ಬೆಂಗಳೂರು:ಇದೇ ಆಗಸ್ಟ್‌15ರಂದು ತೆರೆ ಕಂಡಿದ್ದ ತೆಲುಗು ನಟ ರವಿತೇಜ( ) ಅಭಿನಯದ ಮಿಸ್ಟರ್‌ ಬಚ್ಚನ್ ಸಿನೆಮಾ( ) ಇದೀಗ ಒಟಿಟಿ ಪ್ಲಾಟ್​ಫಾರ್ಮ್‌ಗೆ(‘ ’  ) ಲಗ್ಗೆಯಿಟ್ಟಿದೆ. ನೆಟ್‌ಪ್ಲಿಕ್ಸ್‌ನಲ್ಲಿ ಪ್ರಸಾರಗೊಳ್ಳುತ್ತಿದೆ. ಮಾಸ್ ಮಹಾರಾಜ ರವಿತೇಜ ಮತ್ತು ನಿರ್ದೇಶಕ ಹರಿಶಂಕರ್ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ಸಿನಮಾ ಇದಾಗಿತ್ತು. ರವಿತೇಜ ಅಭಿಮಾನಿಗಳಲ್ಲಿ ತೀವ್ರ ಕೂತುಹಲ ಕೆರಳಿಸಿತ್ತು. ಆದರೆ ನಿರೀಕ್ಷೆಯಂತೆ ಈ ಸಿನೆಮಾ ಸದ್ದು ಮಾಡುವಲ್ಲಿ ವಿಫಲವಾಗಿತ್ತು. ಇದೀಗ ಒಟಿಟಿ ಪ್ರೇಕ್ಷಕರು ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಈ ಸಿನಿಮಾ ಆಗಸ್ಟ್‌15ರಂದು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿತ್ತು. 85 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರ ಅರ್ಧ ಭಾಗದಷ್ಟು ಕಲೆಕ್ಷನ್ ಮಾಡುವಲ್ಲಿ ಸೋಲು ಕಂಡಿತ್ತು. ಇದರಿಂದ ನಿರ್ಮಾಣ ಸಂಸ್ಥೆ ನಷ್ಟ ಅನುಭವಿಸಿತ್ತು. ಈ ಹಿನ್ನೆಲೆ ತಾವು ಪಡೆದುಕೊಂಡ ಸಂಭಾವನೆಯಲ್ಲಿ 4 ಕೋಟಿ ರೂ. ನಟ ರವಿತೇಜ ಹಿಂದಿರುಗಿಸಿದ್ದರು. ಮತ್ತೊಂದೆಡೆ ನಿರ್ದೇಶಕ ಹರೀಶ್ ಕೂಡ 2 ಕೋಟಿ ರೂ.ವನ್ನು ನಿರ್ಮಾಪಕರಿಗೆ ನೀಡಿದ್ದರು.
ರಾಮ್ ಪೋತಿನೇನಿ ನಟನೆಯ `ಇಸ್ಮಾರ್ಟ್ ಶಂಕರ್’ ಮುಂದೆ ‘ಮಿಸ್ಟರ್ ಬಚ್ಚನ್’ ಚಿತ್ರ ಆ.15ರಂದು ರಿಲೀಸ್ ಆಗಿತ್ತು. ರವಿತೇಜಗೆ ನಾಯಕಿಯಾಗಿ ಭಾಗ್ಯಶ್ರೀ ನಟಿಸಿದ್ದರು. ಇದು ಬಾಲಿವುಡ್‌ನ ‘ರೈಡ್’ ಸಿನಿಮಾದ ರಿಮೇಕ್ ಆಗಿದೆ.
ಇದನ್ನೂ ಓದಿ : ರಾಹುಲ್‌ ಗಾಂಧಿ ವಿರುದ್ಧವೂ ವಿನೇಶ್‌ ಲೈಂಗಿಕ ಕಿರುಕುಳ ಆರೋಪ ಮಾಡಬಹುದು; ಬ್ರಿಜ್‌ ಭೂಷಣ್‌
ನಾಳೆ ʼರಘು ತಾತʼ  ಒಟಿಟಿಗೆ ಲಗ್ಗೆ
ಚೆನ್ನೈ:ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ʼಕೆಜಿಎಫ್‌ʼ ಸರಣಿ, ʼಕಾಂತಾರʼ ಚಿತ್ರಗಳನ್ನು ನಿರ್ಮಿಸಿ ದೇಶಾದ್ಯಂತ ಸಂಚಲನ ಮೂಡಿಸಿದ ಕನ್ನಡದ ಹೊಂಬಾಳೆ ಫಿಲ್ಮ್ಸ್‌ ( )ನ ಮೊದಲ ತಮಿಳು ಚಿತ್ರ ʼರಘು ತಾತʼ ( ). ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ, ಬಹುಭಾಷಾ ಕಲಾವಿದೆ ಕೀರ್ತಿ ಸುರೇಶ್‌ ( ) ನಾಯಕಿಯಾಗಿ ಅಭಿನಯಿಸಿರುವ ಈ ಸಿನಿಮಾ ಇದೀಗ ಒಟಿಟಿಗೆ ಲಗ್ಗೆ ಇಡಲು ಸಜ್ಜಾಗಿದೆ. ಯಾವಾಗ, ಯಾವ ಫ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ ಎನ್ನುವ ವಿವರ ಇಲ್ಲಿದೆ.
‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಯ ವಿಜಯ್​ ಕಿರಗಂದೂರು ( ) ಅವರು ತಮ್ಮ ಬ್ಯಾನರ್‌ ಮೂಲಕ ಕನ್ನಡ ಜೊತೆಗೆ ಇತರ ಭಾಷೆಯ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಅದರ ಭಾಗವಾಗಿ ತಮಿಳಿನಲ್ಲಿ ʼರಘು ತಾತʼ ಚಿತ್ರವನ್ನು ತಯಾರಿಸಿದ್ದಾರೆ. ಸುಮನ್‌ ಕುಮಾರ್‌ ರಚಿಸಿ ಮೊದಲ ಬಾರಿ ಆ್ಯಕ್ಷನ್‌ ಕಟ್‌ ಹೇಳಿರುವ ಈ ಹಾಸ್ಯ ಪ್ರಧಾನ ಸಿನಿಮಾ ಭಾರಿ ನಿರೀಕ್ಷೆಯೊಂದಿಗೆ ಆಗಸ್ಟ್‌ 15ರಂದು ಬಿಡುಗಡೆಯಾಗಿದೆ. ಆದರೆ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಅಂದುಕೊಂಡಷ್ಟು ಕಲೆಕ್ಷನ್‌ ಮಾಡುವಲ್ಲಿ ವಿಫಲವಾಗಿದೆ.
ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿದ ʼರಘು ತಾತʼ ಬಿಡುಗಡೆಗೊಂಡ ಒಂದು ತಿಂಗಳೊಳಗೆ ಒಟಿಟಿಗೆ ಬರಲಿದೆ. ಸೆಪ್ಟೆಂಬರ್‌ 13ರಂದು ಈ ಸಿನಿಮಾ ಸ್ಟ್ರೀಮಿಂಗ್‌ ಆಗಲಿದೆ ಎನ್ನಲಾಗಿದೆ. ಝೀ 5 ಫ್ಲಾಟ್‌ಫಾರ್ಮ್‌ನಲ್ಲಿ ʼರಘು ತಾತʼ ಪ್ರದರ್ಶನಗೊಳ್ಳಲಿದೆ. ಕೀರ್ತಿ ಸುರೇಶ್‌ ಅಭಿನಯಕ್ಕೆ ಪ್ರೇಕ್ಷಕರು ಜೈ ಎಂದಿದ್ದರೂ ಕಥೆ, ಚಿತ್ರಕಥೆ ಹಲವರಿಗೆ ಇಷ್ಟವಾಗಿರಲಿಲ್ಲ.