  : ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡಿದ ಗಣೇಶ್‌; ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಗಳಿಕೆ ಎಷ್ಟು?
ಬೆಂಗಳೂರು:ಸೋತು ಸೊರಗಿದ್ದ ಸ್ಯಾಂಡಲ್‌ವುಡ್‌ ಸದ್ಯ ಚೇತರಿಸಿಕೊಳ್ಳುತ್ತಿದೆ. ಗೋಲ್ಡನ್‌ ಸ್ಟಾರ್‌ ಗಣೇಶ್‌ (  ) – ಮಾಳವಿಕಾ ನಾಯರ್‌ ( ) ಕಾಂಬಿನೇಷನ್‌ನ ‘ಕೃಷ್ಣಂ ಪ್ರಣಯ ಸಖಿ’ (  ) ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಆಗಸ್ಟ್‌ 15ರಂದು ತೆರೆಕಂಡ ಈ ಸಿನಿಮಾ ಯಶಸ್ವಿಯಾಗಿ ತನ್ನ ಪ್ರದರ್ಶನ ಮುಂದುವರಿಸಿದೆ. ಹಾಗಾದರೆ ಈ ಚಿತ್ರದ ಒಟ್ಟು ಕಲೆಕ್ಷನ್‌ ಎಷ್ಟು ಎನ್ನುವ ವಿವರ ಇಲ್ಲಿದೆ.
ಈ ಸಿನಿಮಾ ಇತ್ತೀಚೆಗೆ 25 ದಿನ ಪೂರೈಸಿದ ಹಿನ್ನಲೆಯಲ್ಲಿ ಚಿತ್ರತಂಡ ವಿಶೇಷ ಕಾರ್ಯಕ್ರಮ ಆಯೋಜಿಸಿ ಯಶಸ್ಸನ್ನು ಹಂಚಿಕೊಂಡಿದೆ. ಈ ಚಿತ್ರದ ಇದುವರೆಗಿನ ಒಟ್ಟಾರೆ ಗಳಿಕೆ 25 ಕೋಟಿ ರೂಪಾಯಿ ಎನ್ನಲಾಗಿದೆ. ಈ ಮೂಲಕ ಸಿನಿಮಾ ಗೆಲುವು ಸಾಧಿಸಿದೆ. ಮಾತ್ರವಲ್ಲ ಟಿವಿ ಹಕ್ಕು, ಒಟಿಟಿ ಹಕ್ಕಿನಿಂದಲೂ ಒಳ್ಳೆಯ ಆದಾಯ ಹರಿದು ಬಂದಿದೆ. ಈ ಮೂಲಕ ಚಿತ್ರದಿಂದ ನಿರ್ಮಾಪಕರು ದೊಡ್ಡ ಲಾಭ ಕಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಶಾಂತ್ ಜಿ. ರುದ್ರಪ್ಪ ನಿರ್ಮಾಣದ, ಶ್ರೀನಿವಾಸರಾಜು ನಿರ್ದೇಶನದ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದಲ್ಲಿ ಮೊದಲ ಬಾರಿ ಗಣೇಶ್‌ ಮತ್ತು ಬಹುಭಾಷಾ ನಟಿ ಮಾಳವಿಕಾ ನಾಯರ್‌ ಒಂದಾಗಿದ್ದು, ಶರಣ್ಯಾ ಶೆಟ್ಟಿ, ಸಾಧು ಕೋಕಿಲಾ, ರಂಗಾಯಣ ರಘು, ಶ್ರುತಿ, ಶಶಿ ಕುಮಾರ್‌, ಅಶೋಕ್‌, ರಾಮಕೃಷ್ಣ ಮತ್ತಿತರರು ನಟಿಸಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ನಿರ್ದೇಶನದ ಹಾಡುಗಳು ಈಗಾಗಲೇ ಸೂಪರ್‌ ಹಿಟ್‌ ಆಗಿವೆ. ಅದರಲ್ಲಿಯೂ ʼದ್ವಾಪರʼ, ʼಹೇ ಗಗನಾʼ ಮುಂತಾದ ಹಾಡುಗಳು ಸಂಗೀತ ಪ್ರೇಮಿಗಳ ಮನ ಗೆದ್ದಿವೆ. ಜಸ್ಕರಣ್‌ ಸಿಂಗ್‌ ಹಾಡಿರುವ ʼದ್ವಾಪರʼವಂತೂ ರೀಲ್ಸ್‌ಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ.
     (@goldenstar_ganesh)
ಗೆಲುವಿನ ನಗೆ ಬೀರಿದ ಗಣೇಶ್‌
ʼಕೃಷ್ಣಂ ಪ್ರಣಯ ಸಖಿʼ ಸಿನಿಮಾ ಮೂಲಕ ಗಣೇಶ್‌ ಬಹು ದೊಡ್ಡ ಗೆಲುವು ಸಾಧಿಸಿದ್ದಾರೆ. 2022ರಲ್ಲಿ ತೆರೆಕಂಡ ʼಗಾಳಿಪಟ 2ʼ ಬಿಟ್ಟರೆ ಇತ್ತೀಚೆಗೆ ತೆರೆ ಕಂಡಿದ್ದಅವರ ʼಸಖತ್‌ʼ, ʼತ್ರಿಬಲ್‌ ರೈಡಿಂಗ್‌ʼ, ʼಬಾನ ದಾರಿಯಲ್ಲಿʼ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡುವಲ್ಲಿ ವಿಫಲವಾಗಿದ್ದವು. ಇದೀಗ 2 ವರ್ಷಗಳ ಬಳಿಕ ಗಣೇಶ್‌ ಗೆಲುವಿನ ಟ್ರ್ಯಾಕ್‌ಗೆ ಮರಳಿದ್ದಾರೆ. ಸದ್ಯ ಗಣೇಶ್‌ ಅವರು ರಮೇಶ್‌ ಅರವಿಂದ್‌ ಜೊತೆಗೆ ‘’  ರಾಮ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ:   : ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ʼಕೃಷ್ಣಂ ಪ್ರಣಯ ಸಖಿʼ ಚಿತ್ರದ ರಜತ ದಿನೋತ್ಸವ ಸಂಭ್ರಮ
ಮೊದಲ ಚಿತ್ರದಲ್ಲೇ ಗಮನ ಸೆಳೆದ ಮಾಳವಿಕಾ ನಾಯರ್‌
ಇತ್ತೀಚೆಗೆ ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡಿದ್ದ ಪ್ಯಾನ್‌ ಇಂಡಿಯಾ ಚಿತ್ರ ʼಕಲ್ಕಿ 2898 ಎಡಿʼ ಸಿನಿಮಾದಲ್ಲಿ ಮಾಳವಿಕಾ ನಾಯರ್‌ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ಪ್ರಭಾಸ್‌, ಅಮಿತಾಭ್‌ ಬಚ್ಚನ್‌, ದೀಪಿಕಾ ಪಡುಕೋಣೆ, ಕಮಲ್‌ ಹಾಸನ್‌ ಮತ್ತಿತರ ಘಟಾನುಘಟಿ ಕಲಾವಿದರು ಅಭಿನಯಿಸಿದ್ದ ʼಕಲ್ಕಿʼ ಚಿತ್ರದಲ್ಲಿ ಮಾಳವಿಕಾ ನಿರ್ವಹಿಸಿದ್ದ ಉತ್ತರಾ ಪಾತ್ರ ಗಮನ ಸೆಳೆದಿತ್ತು. ಮಲಯಾಳಂ, ತಮಿಳು, ತೆಲುಗು ಬಳಿಕ ʼಕೃಷ್ಣಂ ಪ್ರಣಯ ಸಖಿʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಅವರು ಇದೀಗ ಕನ್ನಡ ಚಿತ್ರ ಪ್ರೇಮಿಗಳ ಗಮನ ಸೆಳೆದಿದ್ದಾರೆ.