 : ಬರೋಬ್ಬರಿ 174 ವಜ್ರಗಳಿರುವ ಕಾಸ್ಟ್ಲೀ ವಾಚ್‌ ಇದು! ಸಲ್ಲು ಕೈಗಡಿಯಾರದ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ
ಮುಂಬೈ: ನೇಮ್‌, ಫೇಮ್‌ ಬರ್ತಿದ್ದಂತೆ ಸೆಲೆಬ್ರಿಟಿಗಳಿಗೆ ಕೆಲವೊಂದು ದುಬಾರಿ ವಸ್ತುಗಳ ಕೇಜ್‌ ಹುಟ್ಟಿಕೊಳ್ಳುತ್ತದೆ. ಅತ್ಯಂತ ಸರಳವಾಗಿ ಬದುಕುವ ನಟ ನಟಿಯರು ಸಂಖ್ಯೆ ಬಹಳ ವಿರಳ. ಕೆಲವರಿಗೆ ಕಾರಗಳ ಶೋಕಿ ಇದ್ದರೆ ಇನ್ನೂ ಕೆಲವರಿಗೆ ಚಿನ್ನ, ಬಟ್ಟೆ, ವಾಚ್‌ ಹೀಗೆ ಕಾಸ್ಟ್ಲಿ ವಸ್ತುಗಳ ಕಲೆಕ್ಷನ್‌ಗಳ ಕ್ರೇಜ್‌ ಇರುತ್ತದೆ.  ಇದೀಗ ಅಂತಹ ಸಾಲಿಗೆ ಬಾಲಿವುಡ್‌ ಬಾಯ್‌ಜಾನ್‌ ಸಲ್ಮಾನ್‌ ಖಾನ್‌( ) ಸೇರಿದ್ದಾರೆ. ಅವರು ಧರಿಸಿದ ದುಬಾರಿ ವಾಚ್‌ ( ) ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಯಾವ ವಾಚ್‌ ಇದು? ಯಾಕಿಷ್ಟು ಸುದ್ದಿಯಾಗ್ತಿದೆ ಅಂತ ತಿಳಿಯೋಕೆ ಈ ಸುದ್ದಿ ಓದಿ.
ನಟ ಸಲ್ಮಾನ್ ಖಾನ್  ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರು. ಸಿನಿಮಾ ಜತೆ ಜತೆಗೆ ಹಲವು ಉದ್ಯಮಗಳಲ್ಲೂ ಬ್ಯುಸಿಯಾಗಿರುವ ಸಲ್ಲು ಭಾಯ್‌ ಬಳಿ ವಾಚ್‌ಗಳ ಕಲೆಕ್ಷನ್‌ ಇದೆ.  ನಟ ಸಾಕಷ್ಟು ದುಬಾರಿ ವಾಚ್​ಗಳನ್ನು ಧರಿಸಿ ಎಲ್ಲರ ಗಮನ ಸೆಳೆದಿದ್ದೂ ಇದೆ. ಅದರೆ ಅವರು ಇತ್ತೀಚೆಗೆ ಧರಿಸಿದ್ದ ಒಂದು ವಾಚ್‌ ಬೆಲೆ ಕೇಳಿದ್ರೆ ಬಹುತೇಕರು ಹೌಹಾರೋದು ಗ್ಯಾರಂಟಿ.
700ಕ್ಕೂ ಹೆಚ್ಚು ವಜ್ರ ಖಚಿತ ವಾಚ್‌
ಈ ವಾಚ್ ಅಂತಿಂಥಾ ವಾಚ್ ಅಲ್ಲವೇ ಅಲ್ಲ. ಬದಲಾಗಿ ಬರೋಬ್ಬರಿ 700ಕ್ಕೂ ಹೆಚ್ಚು ವಜ್ರಗಳನ್ನು ಪೋಣಿಸಲಾಗಿರುವ ವಾಚ್ ಇದಾಗಿದ್ದು ಈ ವಜ್ರಖಚಿತ  ಕೈಗಡಿಯಾರದ ಸಲ್ಲು ಕೈಯಲ್ಲಿ ರಾರಾಜಿಸಿತ್ತು.  ಲಕ್ಷುರಿ ಜ್ಯುವೆಲ್ಲರಿ ಹಾಗೂ ವಾಚ್ ಬ್ರ್ಯಾಂಡ್ ಜಾಕಬ್  ಕಂಪನಿ ಸಂಸ್ಥಾಪಕ ಜಾಕಬ್ ಅರಬೊ ಅವರು ಇನ್​ಸ್ಟಾಗ್ರಾಮ್​ನಲ್ಲಿ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಟ ಸಲ್ಮಾನ್ ಖಾನ್ ಅವರು ವಜ್ರಗಳನ್ನು ಪೋಣಿಸಲಾಗಿರುವ ಈ ಕಾಸ್ಟ್ಲಿಯೆಸ್ಟ್‌ ವಾಚ್ ಧರಿಸಿದ್ದನ್ನು ಕಾಣಬಹುದಾಗಿದೆ. ಪರಸ್ಪರ ಹಗ್ ಮಾಡಿಕೊಂಡ ಸೆಲೆಬ್ರಿಟಿಗಳು ವಿಡಿಯೋಗೆ ಪೋಸ್ ಕೊಟ್ಟಿದ್ದಾರೆ.
      (@)
ಈ ವಾಚ್‌ ಬೆಲೆ ಎಷ್ಟು ಗೊತ್ತಾ?
ಜಾಕೋಬ್ ವಾಚ್ & ಕೋ ವೆಬ್‌ಸೈಟ್ ಪ್ರಕಾರ, ಈ ವಾಚ್‌ನ ಒಳಗಿನ ಭಾಗದಲ್ಲಿ ಒಟ್ಟು 152 ಬಿಳಿವೈಟ್ ಗ್ರೀನ್-ಕಟ್ ವಜ್ರಗಳು, ಪ್ರತಿ ಸೆಗ್ಮೆಂಟ್‌ನಲ್ಲಿ 76 ವಜ್ರಗಳಿವೆ.  ವಾಚ್ ಚೈನ್ ಭಾಗವನ್ನು 504 ವೈಟ್ ಗ್ರೀನ್-ಕಟ್ ವಜ್ರಗಳಿಂದ ಅಲಂಕರಿಸಲಾಗಿದೆ. 57 ಬ್ಯಾಗೆಟ್-ಕಟ್ ವಜ್ರಗಳನ್ನು ಬಳಸಿ ಚೈನ್ ಅಲಂಕರಿಸಲಾಗಿದೆ. ಒಟ್ಟು ಇದರಲ್ಲಿ 714 ವಜ್ರಗಳನ್ನು ಪೋಣಿಸಲಾಗಿದೆ. ವೆಬ್​ಸೈಟ್ ಪ್ರಕಾರ ಈ ವಾಚ್ ಬೆಲೆ ಬರೋಬ್ಬರಿ 41.98 ಕೋಟಿ ರೂಪಾಯಿ ಆಗಿದೆ.
ನೆಟ್ಟಿಗರು ರಿಯಾಕ್ಷನ್‌ ಹೇಗಿತ್ತು ?
ದುಬಾರಿ ವಾಚ್‌ ಧರಿಸಿದ್ದ ಸಲ್ಮಾನ್‌ ಅವರ ವಿಡಿಯೋ ನೋಡಿದ ನೆಟ್ಟಿಗರೊಬ್ಬರು, ವಾಚ್‌ ದುಬಾರಿಯಾಗಿಲ್ಲ..ಬದಲಾಗಿ ಸಲ್ಮಾನ್‌ ಖಾನ್‌ ಅದನ್ನು ಧರಿಸಿದ ಕಾರಣ ವಾಚ್‌ ದುಬಾರಿಯಾಗಿದ್ದು ಎಂದು ಕಮೆಂಟ್‌ ಮಾಡಿದ್ದಾರೆ. ಸಲ್ಮಾನ್ ಖಾನ್ ಕೈಯಲ್ಲಿ ಮಿಂಚಿದ ಕಾರಣ ಆ ವಾಚ್​ಗೆ ಗೌರವ ಬಂತು ಎಂದಿದ್ದಾರೆ. ಇನ್ನೊಬ್ಬರು ಕಮೆಂಟ್ ಮಾಡಿ ನಿಮ್ಮ ವಾಚ್​​ಗೆ ಇನ್ನು ಡಿಮ್ಯಾಂಡ್ ಜಾಸ್ತಿ ಆಗಲಿದೆ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:  : ರಾಜ್ ಪ್ರವೀಣ್‌ ನಟನೆಯ ʼರಾವುತʼ ಸಿನಿಮಾದ ಹಾಡುಗಳು ಬಿಡುಗಡೆ