  : “ಲಂಗೋಟಿ ಮ್ಯಾನ್” ಚಿತ್ರ ಸೆ.20ಕ್ಕೆ ರಿಲೀಸ್‌
ಬೆಂಗಳೂರು:ತನು ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಸಂಜೋತ ಭಂಡಾರಿ ನಿರ್ದೇಶನದ, “ಲಂಗೋಟಿ ಮ್ಯಾನ್” ( ) ಚಿತ್ರವು ಸೆಪ್ಟೆಂಬರ್ 20ರಂದು ಬಿಡುಗಡೆಯಾಗಲಿದೆ. ಸಿನಿಮಾದ (  ) ಟ್ರೇಲರ್ ಬಿಡುಗಡೆ, ಹಾಡಿನ ಪ್ರದರ್ಶನ ಮತ್ತು ಪತ್ರಿಕಾಗೋಷ್ಠಿ ಈಚೆಗೆ ನಡೆಯಿತು. ಈ ವೇಳೆ ಚಿತ್ರತಂಡ “ಲಂಗೋಟಿ ಮ್ಯಾನ್ ” ಬಗ್ಗೆ ಮಾಹಿತಿ ಹಂಚಿಕೊಂಡಿತು.
ಚಿತ್ರದ ನಿರ್ದೇಶಕಿ ಸಂಜೋತ ಭಂಡಾರಿ ಮಾತನಾಡಿ, ‘ಲಂಗೋಟಿ ಮ್ಯಾನ್’ ಚಿತ್ರ ಅನಗತ್ಯ ಕಾರಣಕ್ಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಚಿತ್ರ ನೋಡಿದ ಮೇಲೆ ಶೀರ್ಷಿಕೆ ಸೂಕ್ತ ಅಂತ ಗೊತ್ತಾಗಲಿದೆ. ಯಾವ ಸಮಯದಾಯವನ್ನು ಅವಮಾನ ಮಾಡುವ ಮತ್ತು ನೋಯಿಸುವ ಉದ್ದೇಶ ಹೊಂದಿಲ್ಲ. ಸೆಪ್ಟೆಂಬರ್ 20 ರಂದು ಚಿತ್ರ ಬಿಡುಗಡೆಯಾಗಲಿದ್ದು, ಎಲ್ಲರಿಗೂ ಇಷ್ಟವಾಗಲಿದೆ ಎಂದು ತಿಳಿಸಿದರು.
ಲಂಗೋಟಿ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ತಾತನಿಗೆ ಸಂಪ್ರದಾಯ ಆಚಾರ ವಿಚಾರ ಪಾಲಿಸಬೇಕು ಎನ್ನುವ ನಂಬಿಕೆ. ಸಂಪ್ರದಾಯ ಹೇರಿಕೆಯಿಂದ ನಾಯಕ ರೆಬೆಲ್ ಆಗುತ್ತಾನೆ. ಕಥೆ ಆಸಕ್ತಿಕರವಾಗಿದೆ. ಇದೊಂದು ಉತ್ತಮ ಕೌಟುಂಬಿಕ ಚಿತ್ರ ಎಂದರು ನಟ ಧರ್ಮೇಂದ್ರ.
ನಟ ಆಕಾಶ್ ರಾಂಬೋ ಮಾತನಾಡಿ, ತಾತ ಮೊಮ್ಮಗನ ಸುತ್ತಮುತ್ತ ನಡೆಯುವ ಕಥೆ. ತಾತನಿಗೆ ಮೊಮ್ಮಗ ಲಂಗೋಟಿ ಹಾಕಿಕೊಳ್ಳಬೇಕು‌ ಎಂಬ ಬಯಕೆ. ಮೊಮ್ಮಗನಿಗೆ ಅಂಡರ್‌ವೇರ್ ಹಾಕಿಕೊಳ್ಳುವ ಆಸೆ. ತಾತಾ ಇರುವವರೆಗೂ ಅಂಡರ್‌ವೇರ್ ಹಾಕಲು ಬಿಡಲ್ಲ. ಅವರು ಸಾಯುತ್ತಿಲ್ಲ. ನಾನು ಅಂಡರ್‌ವೇರ್ ಹಾಕಲು ಆಗುತ್ತಿಲ್ಲ‌ ಎಂಬುದು ಮೊಮ್ಮಗನ ಕೊರಗು. ಈ ರೀತಿಯ ಕಥೆಯನ್ನು ಹಾಸ್ಯ ರೂಪದಲ್ಲಿ ಚಿತ್ರದ ಮೂಲಕ ತೆರೆಗೆ ತರಲಾಗುತ್ತಿದೆ ಎಂದರು.
ಈ ಸುದ್ದಿಯನ್ನೂ ಓದಿ | : ಗಣೇಶ ವಿಸರ್ಜನಾ ಮೆರವಣಿಗೆ; ಸೆ.14, 15ರಂದು ಬೆಂಗಳೂರಿನ ಈ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ
ಈ ಚಿತ್ರದಲ್ಲಿ ನನ್ನದು ಪೊಲೀಸ್ ಅಧಿಕಾರಿಯ ಪಾತ್ರ. ಜತೆಗೆ ಇನ್ನೊಂದು ಪ್ರಮುಖ ಪಾತ್ರ ಚಿತ್ರದಲ್ಲಿದೆ. ಅದು ಏನು ಎನ್ನುವುದನ್ನು ಚಿತ್ರದಲ್ಲಿಯೇ ನೋಡಬೇಕು. ಚಿತ್ರ ನೋಡದೆ ಯಾರೂ ಕೂಡ ಅನಗತ್ಯವಾಗಿ ಹೇಳಿಕೆ ನೀಡುವುದು ಸರಿಯಲ್ಲ. ಚಿತ್ರ ನೋಡಿದ ಮೇಲೆ ಚಿತ್ರಕ್ಕೆ ಶೀರ್ಷಿಕೆ ಏಕೆ ಇಟ್ಟಿದ್ದೇವೆ ಎನ್ನುವುದು ತಿಳಿಯಲಿದೆ ಎಂದು ನಟಿ ಸಂಹಿತ ವಿನ್ಯಾ ತಿಳಿಸಿದರು.
ನಟ ಹುಲಿ ಕಾರ್ತಿಕ್ ಮಾತನಾಡಿ, ‘ನೀನೇನು ಪುಟಗೋಸಿ ಮಾಡಿದ್ದೀಯಾ ಅಂತ ಯಾರು ಕೇಳುವ ಹಾಗಿಲ್ಲ. ಲಂಗೋಟಿ ಮ್ಯಾನ್ ಸಿನಿಮಾ ಮಾಡಿದ್ದೇನೆ ಎಂದು ಧೈರ್ಯವಾಗಿ ಹೇಳುತ್ತೇನೆ. ಚಿತ್ರದಲ್ಲಿ ಪ್ರಮುಖ ಪಾತ್ರ ಸಿಕ್ಕಿದೆ. ಕಾಮಿಡಿಯಾಗಿ ಹಲವು ಗಂಭೀರವಾದ ವಿಷಯವನ್ನು ಚಿತ್ರದ ಮೂಲಕ ಹೇಳಿದ್ದೇವೆ. ಟೀಸರ್‌ನಲ್ಲಿ ನನ್ನ ದೃಶ್ಯಗಳು ಇಲ್ಲ. ಮೊದಲೇ ನಿರ್ದೇಶಕರು ಮಾತನಾಡಿ ಪಾತ್ರವನ್ನು ಜನರು ಸಿನಿಮಾದಲ್ಲಿ ಎಂಜಾಯ್ ಮಾಡಲಿ ಎನ್ನುವುದು’ ನಮ್ಮ ಉದ್ದೇಶ ಎಂದರು.
ಈ ಸುದ್ದಿಯನ್ನೂ ಓದಿ | : ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌; ರಿಲಯನ್ಸ್‌ ಫೌಂಡೇಷನ್‌ನಿಂದ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನ
ಮತ್ತೊಬ್ಬ ನಟಿ ಸ್ನೇಹ ಖುಷಿ ಮಾತನಾಡಿ, ಒಳ್ಳೆಯ ಪಾತ್ರ ಸಿಕ್ಕಿದೆ. ನಿರ್ದೇಶಕರು ಕಥೆ ಹೇಳಿದಾಗ ಹೇಗೆ ಸಿನಿಮಾ ಮಾಡ್ತಾರೆ ಅಂದುಕೊಂಡಿದ್ದೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ಹೇಳಿದರು. ಕಲಾವಿದರಾದ ಪಲ್ಟಿ ಗೋವಿಂದ್, ಸಾಯಿ ಪವನ್ ಕುಮಾರ್ ಮುಂತಾದವರು ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು.