- : ‘ಮನಸಿಲಾಯೋ’ ಹಾಡಿನೊಂದಿಗೆ ಮನಸೂರೆಗೊಂಡ ರಜನಿಕಾಂತ್; ಮಂಜು ವಾರಿಯರ್
ಸೂಪರ್ ಸ್ಟಾರ್ ರಜನಿಕಾಂತ್ ( ) ನಾಯಕನಾಗಿ ನಟಿಸಿರುವ, ಟಿ.ಜೆ. ಜ್ಞಾನವೇಲ್ (.. ) ನಿರ್ದೇಶನದ ‘ ವೆಟ್ಟೈಯಾನ್‌- ದಿ ಹಂಟರ್’ (- ) ಚಿತ್ರ ಅಕ್ಟೋಬರ್ 10ರಂದು ವಿಶ್ವದಾದ್ಯಂತ ತೆರೆಕಾಣಲಿದ್ದು, ಇದಕ್ಕೂ ಮುನ್ನವೇ ಇದರ ಹಾಡೊಂದು ಎಲ್ಲರ ಮನಸೂರೆಗೊಳಿಸಿದೆ. ಮಾಸ್ ಬೀಟ್ ನೊಂದಿಗೆ ವೈರಲ್ ಆಗುತ್ತಿರುವ ಹೆಣ್ಣಿನ ಧ್ವನಿಯ ‘ಮನಸಿಲಯೋ..’ ಹಾಡು ಕೇಳುತ್ತಿದ್ದರೆ ಎಲ್ಲರೂ ಹೆಜ್ಜೆ ಹಾಕಲು ಪ್ರಾರಂಭಿಸುವುದು ಗ್ಯಾರಂಟಿ.
ರಜನಿಕಾಂತ್ ಮತ್ತು ಮಂಜು ವಾರಿಯರ್ ಅವರು ಮನಸಿಲಾಯೋ ಹಾಡಿನ ಮೂಲಕ ಸಖತ್ ಸ್ಟೆಪ್ ಹಾಕಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ರಜನಿಕಾಂತ್ ತಮ್ಮ ವರ್ಚಸ್ಸಿನಿಂದ ಎಲ್ಲರ ಮನ ಗೆದ್ದರೆ ಹೆಚ್ಚು ಕಸೂತಿ ಹೊಂದಿರುವ ಕುಪ್ಪಸ ಮತ್ತು ಕೆಂಪು ಸೀರೆಯಲ್ಲಿ ಮಂಜು ವಾರಿಯರ್ ತಮ್ಮ ನೋಟ ಮತ್ತು ನೃತ್ಯದಿಂದ ಮೋಡಿ ಮಾಡಿದ್ದಾರೆ.
ಮನಸಿಲಾಯೊ ಹಾಡಿನ ಸಾಹಿತ್ಯವು ತಮಿಳು ಮತ್ತು ಮಲಯಾಳಂ ಪದಗಳ ಸಂಯೋಜನೆಯಾಗಿದೆ. ಎಕ್ಸ್ ಬಳಕೆದಾರರು ಹಾಡಿನ ಕ್ಲಿಪ್ ಅನ್ನು ಹಂಚಿಕೊಂಡಿದ್ದು ಸಾಕಷ್ಟು ವೈರಲ್ ಆಗಿದೆ.
ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಬಿಗ್ ಬಜೆಟ್ ಚಿತ್ರ ಇದಾಗಿದ್ದು, ಈಗಾಗಲೇ ಸಾಮಾಜಿಕ ಜಾಲತಾಣದ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಬ್ಲಾಕ್‌ಬಸ್ಟರ್ ಚಿತ್ರಗಳಾದ 2.0, ದರ್ಬಾರ್, ಲಾಲ್ ಸಲಾಮ್ ಅನಂತರ ರಜನಿಕಾಂತ್ ಮತ್ತು ಲೈಕಾ ಪ್ರೊಡಕ್ಷನ್ಸ್‌ನ ನಾಲ್ಕನೇ ಚಿತ್ರ ಇದಾಗಿದೆ.
ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರು ಪೇಟಾ, ದರ್ಬಾರ್, ಜೈಲರ್ ಚಿತ್ರದ ಬಳಿಕ ಇದೀಗ ನಾಲ್ಕನೇ ಬಾರಿಗೆ ರಜನಿಕಾಂತ್ ಅಭಿನಯದ ವೆಟ್ಟೈಯಾನ್‌ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಮಾತ್ರವಲ್ಲದೇ ‘ಮನಸಿಲಯೋ..’ ಹಾಡಿನಲ್ಲಿ ರಜನೀಕಾಂತ್ ಜೊತೆ ಹೆಜ್ಜೆಯನ್ನೂ ಹಾಕಿದ್ದಾರೆ.
    .          🔥../J2ltn17MBH
ಶ್ರೀನಿವಾಸ ಮೌಳಿ ಬರೆದಿರುವ ಹಾಡನ್ನು ನಕಾಶ್ ಅಜೀಜ್, ಅರುಣ್ ಕೌಂಡಿನ್ಯ ಮತ್ತು ದೀಪ್ತಿ ಸುರೇಶ್ ಹಾಡಿದ್ದಾರೆ. ಈ ಹಾಡಿನ ತಮಿಳು ಆವೃತ್ತಿಗಾಗಿ ಪ್ರಸಿದ್ಧ ಹಿನ್ನೆಲೆ ಗಾಯಕ ಮಲೇಷ್ಯಾ ವಾಸುದೇವನ್ ಅವರು ಧ್ವನಿ ನೀಡಿದ್ದಾರೆ.
ವೆಟ್ಟೈಯಾನ್‌ ಚಿತ್ರದಲ್ಲಿ ರಜನಿಕಾಂತ್ ಪತ್ನಿಯಾಗಿ ಮಂಜು ವಾರಿಯರ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್, ಫಹಾದ್ ಫಾಜಿಲ್, ರಾಣಾ ದಗ್ಗುಬಾಟಿ, ರಿತಿಕಾ ಸಿಂಗ್, ದುಷಾರ ವಿಜಯನ್, ರೋಹಿಣಿ, ಅಭಿರಾಮಿ ಮೊದಲಾದವರೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ಯಾನ್ ಇಂಡಿಯಾದ ಈ ಸಿನಿಮಾ ತಮಿಳು, ತೆಲುಗು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
  : ಅನನ್ಯಾ ಪಾಂಡೆಗೆ ರಿಯಾನ್ ಪರಾಗ್‌ಗಿಂತ ವಿರಾಟ್‌ ಕೊಹ್ಲಿಯೇ ಫೇವರಿಟ್‌
ಅಕ್ಟೋಬರ್ 10 ರಂದು ಥಿಯೇಟರ್‌ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲು ವೆಟ್ಟೈಯಾನ್‌ ಸಜ್ಜಾಗಿದೆ. ಸೂರ್ಯ ಅಭಿನಯದ ಕಂಗುವ ಚಿತ್ರ ಇದೇ ದಿನ ಬಿಡುಗಡೆಯಾಗಬೇಕಿತ್ತು. ಆದರೆ ಕಂಗುವ ಈಗ ಬಿಡುಗಡೆಯಿಂದ ಹಿಂದೆ ಸರಿದು ವೆಟ್ಟೈಯಾನ್‌ಗೆ ದಾರಿ ಮಾಡಿಕೊಟ್ಟಿದೆ.