 : ನವರಾತ್ರಿ ಮೊದಲ ದಿನವೇ ‘ಭೈರಾದೇವಿ’ ಆಗಮನ; ಚಿತ್ರದ ಪ್ರಚಾರಕ್ಕೆ ರಾಧಿಕಾ ಕುಮಾರಸ್ವಾಮಿ ಚಾಲನೆ
ಬೆಂಗಳೂರು:ಶಮಿಕ ಎಂಟರ್ ಪ್ರೈಸಸ್ ಲಾಂಛನದಲ್ಲಿ ಕನ್ನಡದ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ನಿರ್ಮಿಸಿರುವ ಹಾಗೂ ನಾಯಕಿಯಾಗೂ ನಟಿಸಿರುವ ಬಹು ನಿರೀಕ್ಷಿತ ‘ಭೈರಾದೃವಿ’ ( ) ಚಿತ್ರ, ಅಕ್ಟೋಬರ್ 3 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ನಾಡಹಬ್ಬ ನವರಾತ್ರಿಯ ಮೊದಲ ದಿನವೇ ಈ ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷ.
ಬಿಡುಗಡೆ ದಿನಾಂಕ ಘೋಷಣೆಯಾಗಿರುವುದರಿಂದ ರಾಧಿಕಾ ಕುಮಾರಸ್ವಾಮಿ ಅವರು, ಇತ್ತೀಚಿಗೆ ಅವರ ನಿವಾಸದ ಬಳಿ “ಭೈರಾದೇವಿ” ಚಿತ್ರದ ಪ್ರಚಾರದ ಮೊದಲ ಹೆಜ್ಜೆಯಾಗಿ ಟ್ಯಾಬ್ಲೊ ಹಾಗೂ ಆಟೋ ಪ್ರಚಾರಕ್ಕೆ ಚಾಲನೆ ನೀಡಿದರು. ರಾಧಿಕಾ ಕುಮಾರಸ್ವಾಮಿ ಅವರು ಸ್ವತಃ ತಾವೇ ಆಟೋ ಚಾಲನೆ ಮಾಡಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ನೂರಾರು ಪುರುಷ ಹಾಗೂ ಮಹಿಳಾ ಆಟೋ ಚಾಲಕರು ಉಪಸ್ಥಿತರಿದ್ದರು. “ಭೈರಾದೇವಿ” ಚಿತ್ರದ ಪೋಸ್ಟರ್ ವುಳ್ಳ ಟ್ಯಾಬ್ಲೊ ಹಾಗೂ ಆಟೋಗಳು ರಾಜ್ಯಾದ್ಯಂತ ಸಂಚರಿಸಲಿದೆ.
ಭೈರಾದೇವಿಗೆ ಸಾರಥಿಗಳ ಸಾಥ್##../k8b65O33Zc
ಶ್ರೀಜೈ ಅವರು ನಿರ್ದೇಶಿಸಿರುವ ಈ ಚಿತ್ರಕ್ಕೆ ರವಿರಾಜ್ ಹಾಗೂ ಯಾದವ್ ಅವರ ಸಹ ನಿರ್ಮಾಣವಿದೆ. ಜೆ.ಎಸ್.ವಾಲಿ ಛಾಯಾಗ್ರಹಣ, ಕೆ.ಕೆ.ಸೆಂಥಿಲ್ ಪ್ರಸಾದ್ ಸಂಗೀತ ನಿರ್ದೇಶನ ಹಾಗೂ ರವಿಚಂದ್ರನ್ ಅವರ ಸಂಕಲನವಿರುವ “ಭೈರಾದೇವಿ” ಚಿತ್ರದ ತಾರಾಬಳಗದಲ್ಲಿ ರಮೇಶ್ ಅರವಿಂದ್, ರಾಧಿಕಾ ಕುಮಾರಸ್ವಾಮಿ, ರವಿಶಂಕರ್, ರಂಗಾಯಣ ರಘು ಮುಂತಾದವರಿದ್ದಾರೆ.
ಬೆಂಗಳೂರು:ನಟಿ ವೇದಿಕಾ ಅಭಿನಯದ ಫಿಯರ್‌ ಚಿತ್ರದ ( ) ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ಸ್ಟಾರ್ ಡೈರೆಕ್ಟರ್ ಹಾಗೂ ಕೊರಿಯೋಗ್ರಾಫರ್ ಪ್ರಭುದೇವ ಬಿಡುಗಡೆ ಮಾಡಿದ್ದಾರೆ. ದತ್ತಾತ್ರೇಯ ಮೀಡಿಯಾ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಎ.ಆರ್. ಅಭಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸುಜಾತಾ ರೆಡ್ಡಿ ಸಹ ನಿರ್ಮಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ನಿರ್ದೇಶಕ ಡಾ. ಹರಿತಾ ಗೋಗಿನೇನಿ ಫಿಯರ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದು, ಅರವಿಂದ್ ಕೃಷ್ಣ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡ , ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಫಿಯರ್‌ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಶ್ವೇತಾ ಶೆಟ್ಟಿಯವರು ಡಬ್ಬಿಂಗ್ ಹೊಣೆಯನ್ನು ನಿಭಾಯಿಸಿದ್ದಾರೆ. ʼಫಿಯರ್ʼ ಬಿಡುಗಡೆಗೂ ಮುನ್ನವೇ ವಿವಿಧ ಅಂತಾರಾಷ್ಟ್ರೀಯ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ 60ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗೆದ್ದು ಹೊಸ ದಾಖಲೆ ಸೃಷ್ಟಿಸಿದೆ.
       #        ! ❤️    # 👍🏻@vedhika4u@##@@sahithidasari7@@../
ಸ್ಟಾರ್ ಡೈರೆಕ್ಟರ್ ಹಾಗೂ ಕೊರಿಯೋಗ್ರಾಫರ್ ಪ್ರಭುದೇವ ʼFEARʼ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣಗಳ ಮೂಲಕ ಬಿಡುಗಡೆ ಮಾಡಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಕುತೂಹಲ ಮೂಡಿಸಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಕತ್ತಲ ಕೋಣೆಯಲ್ಲಿ ನಾಯಕಿ ಭಯಭೀತರಾಗಿ ಕಾಣುತ್ತಿರುವ ಸ್ಟಿಲ್‌ನೊಂದಿಗೆ ಡಿಸೈನ್ ಮಾಡಿರುವ ಫಸ್ಟ್ ಲುಕ್ ಪೋಸ್ಟರ್ ಕುತೂಹಲ ಮೂಡಿಸುತ್ತಿದೆ. ವಿಭಿನ್ನ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನಾಧರಿಸಿದ ʼಫಿಯರ್‌ʼ ಚಿತ್ರ ಶೀಘ್ರದಲ್ಲೇ ರಿಲೀಸ್‌ಗೆ ಸಿದ್ಧವಾಗುತ್ತಿದೆ.
ಈ ಸುದ್ದಿಯನ್ನು ಓದಿ |  : ನಟಿ ಕಾದಂಬರಿ ಜೇಥ್ವಾನಿಗೆ ಕಿರುಕುಳ, ಮೂರು ಐಪಿಎಸ್ ಅಧಿಕಾರಿಗಳು ಅಮಾನತು
ಚಿತ್ರದಲ್ಲಿ ಜೆಪಿ (ಜಯಪ್ರಕಾಶ್ ), ಪವಿತ್ರ ಲೋಕೇಶ್, ಅನೀಶ್ ಕುರುವಿಲ್ಲ, ಸಯಾಜಿ ಶಿಂಧೆ, ಸತ್ಯ ಕೃಷ್ಣ, ಸಾಹಿತಿ ದಾಸರಿ, ಶಾನಿ ಮುಂತಾದವರು ಇದ್ದು, ಚಿತ್ರಕ್ಕೆ ಅನೂಪ್ ರುಬೇನ್ಸ್ ಸಂಗೀತ, ಐ ಆಂಡ್ರ್ಯೂ ಛಾಯಾಗ್ರಹಣ, ಕೃಷ್ಣಕಾಂತ್ ಸಾಹಿತ್ಯ, ವಿಶಾಲ್ ನೃತ್ಯ ಸಂಯೋಜನೆ , ಶ್ವೇತಾ ಶೆಟ್ಟಿ ಅವರು ಕನ್ನಡ ಡೈಲಾಗ್ಸ್ ಬರೆದಿದ್ದಾರೆ.