ಮನೆಯ ನಿಯಮ ಮೀರಿದ ಕ್ಯಾಪ್ಟನ್​ಗೆ ಕಿಚ್ಚನ ಕ್ಲಾಸ್: ಮೊದಲ ಪಂಚಾಯಿತಿಯಲ್ಲಿ ಏನೆಲ್ಲ ಆಯಿತು?
ಬಿಗ್ ಬಾಸ್ಕನ್ನಡ ಸೀಸನ್ 11ರ (  ) ಮೊದಲ ಪಂಚಾಯಿತಿಯ ಮೊದಲ ಎಪಿಸೋಡ್​ನಲ್ಲಿ ಕಿಚ್ಚ ಸುದೀಪ್ ಕೂಲ್ ಆಗಿ ಎಲ್ಲ ಸ್ಪರ್ಧಿಗಳಿಗೆ ಹೇಳಬೇಕಾಗಿದ್ದನ್ನು ಮನಮುಟ್ಟಿಸಿದ್ದಾರೆ. ಮೊದಲ ವಾರವೇ ಮನೆ ರಣರಂಗವಾಗಿದ್ದರೂ ಸುದೀಪ್ ಎಲ್ಲ ಸದಸ್ಯರಿಗೆ ಹೇಗಿರಬೇಕು ಎಂದು ಮನವರಿಕೆ ಮಾಡಿದ್ದಾರೆ. ಜೊತೆಗೆ ಬಿಗ್ ಬಾಸ್ ನಿಯಮದ ಬಗ್ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದು, ಈ ವಿಚಾರವಾಗಿ ಕ್ಯಾಪ್ಟನ್ ಹಂಸ ಅವರಿಗೂ ಎಚ್ಚರಿಕೆ ನೀಡಿದ್ದಾರೆ.
ಇನ್ನೊಂದು ವಾರ ನರಕ ಹಾಗೂ ಸ್ವರ್ಗವನ್ನು ಕಾಪಾಡಿಕೊಳ್ಳುವುದು ನಿಮ್ಮ ಕರ್ತವ್ಯ ಎಂದು ಕ್ಯಾಪ್ಟನ್​ಗೆ ಸುದೀಪ್ ಹೇಳಿದ್ದಾರೆ. ಅಲ್ಲದೆ ಕ್ಯಾಪ್ಟನ್‌‌ ಆಗಿ ನಿರ್ಧಾರ ತೆಗೆದುಕೊಳ್ಳುವಾಗ ತಪ್ಪಾಗಿದೆ ಎಂದು ನೇರವಾಗಿ ನುಡಿದಿದ್ದಾರೆ. ನಿಮ್ಮ ಸಿಂಪತಿ, ನಿಮ್ಮ ಅಜೆಂಡಾ ಇಟ್ಟುಕೊಂಡು ಕ್ಯಾಪ್ಟನ್‌ ಆಗೋದಲ್ಲ, ವೀಕ್ಷಕರಿಗೆ ಬೇರೆ ರೀತಿ ಮೆಸೆಜ್‌ ಹೋಗುತ್ತೆ ಎಂದರು.
ನಿಯಮದ ಪ್ರಕಾರ, ನರಕ ವಾಸಿಗಳು ಕಾರಣ ಇಲ್ಲದೆ ಸ್ವರ್ಗಕ್ಕೆ ಬರುವಂತಿಲ್ಲ. ಆದರೆ, ಕ್ಯಾಪ್ಟನ್ ಹಂಸ ಅವರು ಇಂದು ನರಕ ವಾಸಿಗಳಿಗೆ ಮೇಕಪ್‌ ಮಾಡಲು ಸ್ವರ್ಗದಲ್ಲಿರುವ ಮೇಕಪ್‌ ರೂಮ್‌ ಬಿಟ್ಟುಕೊಟ್ಟಿದ್ದಾರೆ. ಈ ವಿಚಾರವಾಗಿ ಸುದೀಪ್ ಕೇಳಿದ ಪ್ರಶ್ನೆಗೆ ಹಂಸ ಅವರ ಬಳಿ ಉತ್ತರ ಇರಲಿಲ್ಲ. ಹಾಗೇ ನಿಮ್ಮ ಎದುರೇ ರೂಲ್ಸ್‌ ಬುಕ್ ಇದೆ, ಅದನ್ನು ಓದಿ ನಡೆಯಿರಿ ಎಂದು ಹೇಳಿದ್ದಾರೆ.
ಇನ್ನು ಜಗದೀಶ್ ಅವರಿಗೆ ಸುದೀಪ್ ತಮ್ಮದೇ ಶೈಲಿಯಲ್ಲಿ ಮನಮುಟ್ಟುವಂತೆ ಎಲ್ಲವನ್ನೂ ವಿವರಿಸಿದ್ದಾರೆ. ನ್ಯಾಯ, ನಿಯಮ ಎಂದು ಹೇಳುವ ನೀವೇ ನಿಯಮ ಮೀರಿ ನರಕ ವಾಸಿಗಳಿಗೆ ಸಹಾಯ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಬಿಗ್ ಬಾಸ್​ಗೆ ಧಮ್ಕಿ ಹಾಕಿದ ವಿಚಾರವನ್ನೂ ಎತ್ತಿದ ಸುದೀಪ್, ಇದು ನನಗೆ ಜೋಕ್​ನಂತೆ ಕಂಡಿತು ಎಂದು ಹೇಳಿ ಮುಟ್ಟಿನೋಡಿಕೊಳ್ಳುವಂತೆ ಮಾತನಾಡಿದರು.
ಮೊದಲ ಎಪಿಸೋಡ್​ನಲ್ಲಿ ಮೂವರು ಸೇಫ್:
ಈ ವಾರ ಮನೆಯಿಂದ ಹೊರಹೋಗಲು ಸ್ವರ್ಗದಿಂದ ಜಗದೀಶ್, ಯಮುನ, ಗೌತಮಿ, ಹಂಸ, ಭವ್ಯ ಮತ್ತು ನರಕದಿಂದ ಶಿಶಿರ್, ಮೋಕ್ಷಿತಾ, ಮಾನಸ, ಚೈತ್ರಾ ಕುಂದಾಪುರ ನಾಮಿನೇಟ್​ ಆಗಿದ್ದರು. ಈ ಪೈಕಿ ಮೂವರು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿ ಸೇಫ್ ಆಗಿದ್ದಾರೆ. ಮೊದಲನೆಯವರಾಗಿ ಭವ್ಯ ಬಳಿಕ ಗೌತಮಿ ಮತ್ತು ನರಕದಿಂದ ಮಾನಸಾ ಸೇಫ್ ಆಗಿದ್ದಾರೆ. ಉಳಿದವರ ಭವಿಷ್ಯ ನಾಳೆ (ಅ. 6) ಸೂಪರ್ ಸಂಡೇ ವಿಥ್ ಸುದೀಪ ಎಪಿಸೋಡ್​ನಲ್ಲಿ ನಿರ್ಧಾರವಾಗಲಿದೆ.
 11: ಈ ಶೋ ಹಾಳು ಮಾಡೋಕೆ ನಿಮ್ ಅಪ್ಪನಾಣೆಗೂ ಸಾಧ್ಯವಿಲ್ಲ: ಲಾಯರ್ ಜಗದೀಶ್ ಮೈಚಳಿ ಬಿಡಿಸಿದ ಸುದೀಪ್