 : ಮತ್ತೊಂದು ಬಹು ನಿರೀಕ್ಷಿತ ಚಿತ್ರ ಒಪ್ಪಿಕೊಂಡ ʼಕೆಜಿಎಫ್‌ʼ ಬೆಡಗಿ ಶ್ರೀನಿಧಿ ಶೆಟ್ಟಿ;  ಟಾಲಿವುಡ್‌ ಸೂಪರ್‌ಸ್ಟಾರ್‌ಗೆ ಜೋಡಿ
ಹೈದರಾಬಾದ್‌:ಪ್ರಶಾಂತ್‌ ನೀಲ್‌- ರಾಕಿಂಗ್‌ ಸ್ಟಾರ್‌ ಯಶ್‌ ಕಾಂಬಿನೇಷನ್‌ನ ʼಕೆಜಿಎಫ್‌ʼ () ಸರಣಿ ಚಿತ್ರಗಳ ಮೂಲಕ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಮಿಂಚಿದವರು ಶ್ರೀನಿಧಿ ಶೆಟ್ಟಿ ( ). ಮೊದಲ ಚಿತ್ರದಲ್ಲೇ ದೇಶದ ಗಮನ ಸೆಳೆದ ಅವರು ಇದೀಗ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡ ಜತೆಗೆ ಪರಭಾಷೆಯ ಚಿತ್ರರಂಗದಿಂದಲೂ ಅವರನ್ನು ಅರಸಿಕೊಂಡು ಅವಕಾಶ ಹರಿದು ಬರುತ್ತಿದೆ. ಆದರೆ ಅಳೆದು ತೂಗಿ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುವ ಅವರು ಇದೀಗ ತೆಲುಗಿನ ಬಹು ನಿರೀಕ್ಷಿತ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ.
ಸಿದ್ದು ಜೊನ್ನಾಲಗಡ್ಡ ನಟನೆಯ ʼತೆಲುಸು ಕದಾʼ ತೆಲುಗು ಚಿತ್ರದಲ್ಲಿ ಅಭಿನಯಿಸುತ್ತಿರುವ ಶ್ರೀನಿಧಿ ಶೆಟ್ಟಿ  ಇದೀಗ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಟಾಲಿವುಡ್‌ನ ನ್ಯಾಚುರಲ್‌ ಸ್ಟಾರ್‌ ಸ್ಟಾರ್‌ ನಾನಿ ನಟನೆಯ ʼಹಿಟ್‌ 3; ( 3) ಚಿತ್ರಕ್ಕೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ವಿಚಾರವನ್ನು ಸ್ವತಃ ನಾನಿ ಅವರೇ ಸೋಷಿಯಲ್‌ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.
      🌸 (@srinidhi_shetty)
ಶೈಲೇಶ್‌ ಕೊಲನು ನಿರ್ದೇಶನದ ʼಹಿಟ್‌ 3ʼ ಸಿನಿಮಾವನ್ನು ನಾನಿ ಸಹೋದರಿ ಪ್ರಶಾಂತಿ ಅವರ ವಾಲ್‌ ಪೋಸ್ಟರ್‌ ಸಿನಿಮಾ ಮತ್ತು ಯುನಾನಿಮಸ್‌ ಪ್ರೊಡಕ್ಷನ್ಸ್‌ ನಿರ್ಮಿಸುತ್ತಿದೆ. ಇದು ʼಹಿಟ್‌ʼ ಸರಣಿಯ ಮೂರನೇ ಭಾಗ. ಈ ಹಿಂದೆ ತೆರೆಕಂಡಿದ್ದ ʼಹಿಟ್‌ʼ ಮತ್ತು ʼಹಿಟ್‌ 2ʼ ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಜಿಕ್‌ ಮಾಡಿದೆ. ಜತೆಗೆ ವಿಮರ್ಶಕರಿಂದಲೂ ಮೆಚ್ಚುಗೆ ಪಡೆದುಕೊಂಡಿದೆ. ಇದೇ ಕಾರಣಕ್ಕೆ ಈ ಕ್ರೈಂ ಥ್ರಿಲ್ಲರ್‌ ನಿರೀಕ್ಷೆ ಮೂಡಿಸಿದೆ. ಮುಂದಿನ ವರ್ಷದ ಮೇಯಲ್ಲಿ ʼಹಿಟ್‌ 3ʼ ತೆರೆಗೆ ಬರಲಿದೆ.
2020ರಲ್ಲಿ ಬಿಡುಗಡೆಯಾದ ʼಹಿಟ್‌: ದಿ ಫಸ್ಟ್‌ ಕೇಸ್‌ʼನಲ್ಲಿ ವಿಶ್ವಕ್‌ ಸೇನ್‌ ಮತ್ತು ರುಹಾನಿ ಶರ್ಮಾ ಮತ್ತಿತರರು ನಟಿಸಿದ್ದರು. ಇದರ ಯಶಸ್ಸಿನ ಬೆನ್ನಲ್ಲೇ 2022ರಲ್ಲಿ ʼಹಿಟ್‌: ದಿ ಸೆಕೆಂಡ್‌ ಕೇಸ್‌ʼ ತೆರೆಗೆ ಬಂದಿತ್ತು. ಅಡ್ವಿ ಶೇಷ್‌ ಮತ್ತು ಮೀನಾಕ್ಷಿ ಚೌಧರಿ ಅಭಿನಯದ ಈ ಚಿತ್ರವೂ ಹಿಟ್‌ ಆಗಿತ್ತು. ಈ ಚಿತ್ರದ ಕೊನೆಯಲ್ಲಿ ನಾನಿಯ ಪಾತ್ರವನ್ನು ಪರಿಚಯಿಸಲಾಗಿತ್ತು. ಅರ್ಜುನ್‌ ಹೆಸರಿನ ಈ ಪಾತ್ರದ ಸುತ್ತ 3ನೇ ಸರಣಿಯ ಕಥೆ ಸಾಗಲಿದೆ. ಈ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿಗೂ ಮಹತ್ವದ ಪಾತ್ರ ಇರಲಿದೆ ಎನ್ನಲಾಗಿದೆ. ಕಥೆಗೆ ಬಹುಮುಖ್ಯ ತಿರುವು ನೀಡುವ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.
@               #HIT3pic../7x7pkbX5TC
ಈ ಸುದ್ದಿಯನ್ನೂ ಓದಿ: : ‘ಕೆಜಿಎಫ್‌’ ಬೆಡಗಿ ಶ್ರೀನಿಧಿ ಶೆಟ್ಟಿಯ ಎಸ್‌ಎಸ್‌ಎಲ್‌ಸಿ ಮಾರ್ಕ್ಸ್‌ ಕಾರ್ಡ್‌ ವೈರಲ್‌; ಕನ್ನಡದಲ್ಲಿ ಪಡೆದ ಅಂಕ ಎಷ್ಟು?
ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ ʼಕೆಜಿಎಫ್‌ʼ ಸರಣಿ ಚಿತ್ರಗಳ ಬಳಿಕ ಶ್ರೀನಿಧಿ ಶೆಟ್ಟಿ ತಮಿಳಿನ ʼಕೋಬ್ರಾʼ ಸಿನಿಮಾದಲ್ಲಿ ಕಾಣಿಸಿಕೊಂಡೊದ್ದರು. 2022ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಅವರು ಚಿಯಾನ್‌ ವಿಕ್ರಂಗೆ ನಾಯಕಿಯಾಗಿದ್ದರು. ಬಹು ನಿರೀಕ್ಷೆಯೊಂದಿಗೆ ತೆರೆಕಂಡ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಮುಗ್ಗರಿಸಿತ್ತು. ಅದಾದ ಬಳಿಕ ಕಿಚ್ಚ ಸುದೀಪ್‌ ನಟನೆಯ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ನಟಿಸುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ನಂತರ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಸದ್ಯ ಅವರು ಬ್ಯಾಕ್‌ ಟು ಬ್ಯಾಕ್‌ ತೆಲುಗು ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಜತೆಗೆ ಜಾಹೀರಾತುಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.