  : ‘ಯಲಾಕುನ್ನಿ’ ಚಿತ್ರದ ಟೀಸರ್ ರಿಲೀಸ್‌; ಕೋಮಲ್‌ರ ವಜ್ರಮುನಿ ಲುಕ್‌ಗೆ ಅಭಿಮಾನಿಗಳು ಫಿದಾ!
ಬೆಂಗಳೂರು:ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ ಅನುಸೂಯ ಕೋಮಲ್ ಕುಮಾರ್, ಸಹನ ಮೂರ್ತಿ ಅವರು ನಿರ್ಮಿಸಿರುವ, ಹೊಸ ಪ್ರತಿಭೆ ಎನ್‌.ಆರ್‌. ಪ್ರದೀಪ್ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶಿಸಿರುವ ಹಾಗೂ ಕೋಮಲ್ ಕುಮಾರ್ ನಾಯಕರಾಗಿ ನಟಿಸಿರುವ “ಯಲಾಕುನ್ನಿ” ಚಿತ್ರದ (  ) ಟೀಸರ್ ಇತ್ತೀಚೆಗೆ ನಡೆದ “ಗಿಚ್ಚಿ ಗಿಲಿಗಿಲಿ” ಫೈನಲ್‌ನಲ್ಲಿ ಬಿಡುಗಡೆಯಾಯಿತು.
ಕೋಮಲ್ ಕುಮಾರ್ ಸ್ಟುಡಿಯೋಸ್ ಯೂಟ್ಯೂಬ್ ಚಾನಲ್ ನಲ್ಲಿ ಈ ಚಿತ್ರದ ಟೀಸರ್ ಲಭ್ಯವಿದೆ. ಟೀಸರ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಈ ಸುದ್ದಿಯನ್ನೂ ಓದಿ |   : ಮಹಿಳೆಯರಿಗೆ ಕ್ಲಾಸಿ ಲುಕ್ ನೀಡುವ ಬಂಗಾರೇತರ ಜಿರ್ಕೊನ್ ಜ್ಯುವೆಲ್ ಸೆಟ್!
ಕೋಮಲ್ ಕುಮಾರ್ ಅವರ ವಜ್ರಮುನಿ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯದಲ್ಲೇ ಈ ಚಿತ್ರ ಬಿಡುಗಡೆಯಾಗಲಿದೆ‌. “ಯಲಾಕುನ್ನಿ” ಚಿತ್ರಕ್ಕೆ ‘ಮೇರಾ ನಾಮ್ ವಜ್ರಮುನಿ’ ಎಂಬ ಅಡಿಬರಹವಿದೆ.