 : ಕನ್ನಡ ಚಿತ್ರರಂಗದ ಬಗ್ಗೆ ಹೆಮ್ಮೆ ಇದೆ; ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಜೆರ್ಸಿ ಅನಾವರಣಗೊಳಿಸಿದ ಸುದೀಪ್‌ ಮನದಾಳ
ಬೆಂಗಳೂರು:ಸ್ಯಾಂಡಲ್‌ವುಡ್‌ ಕಪ್‌ ಬ್ಯಾಡ್ಮಿಂಟನ್ ಟೂರ್ನಮೆಂಟ್‌ (   )ನ ಜೆರ್ಸಿ ಅನಾವರಣ ಹಾಗೂ ಪ್ಲೇಯರ್ಸ್ ಸೆಲೆಕ್ಷನ್ ಶನಿವಾರ ಬೆಂಗಳೂರಿನ ಬನಶಂಕರಿಯ ಖಾಸಗಿ ಕ್ಲಬ್‌ನಲ್ಲಿ ನಡೆಯಿತು. ಕಿಚ್ಚ ಸುದೀಪ್ ( ) ಅತಿಥಿಯಾಗಿ ಆಗಮಿಸಿ ಜೆರ್ಸಿ ಅನಾವರಣಗೊಳಿಸಿ ಇಡೀ ತಂಡಗಳಿಗೆ ಶುಭಾಶಯ ಕೋರಿದರು. ಈ ಟೂರ್ನಿಯಲ್ಲಿ ಸ್ಯಾಂಡಲ್‌ವುಡ್ ತಾರೆಯರು, ಕಿರುತೆರೆ ಕಲಾವಿದರು, ಮಾಧ್ಯಮದವರು ಹಾಗೂ ಟೆಕ್ನೀಷಿಯನ್‌ ಆಡಲಿದ್ದು, ಸೆಪ್ಟೆಂಬರ್ 28-29ರಂದು ನಡೆಯಲಿದೆ.
ಕಿಚ್ಚ ಸುದೀಪ್ ಮಾತನಾಡಿ, “ನಮ್ಮ ಇಂಡಸ್ಟ್ರೀಯಲ್ಲಿ ತುಂಬಾ ಜನ ಕಲಾವಿದರು, ತಂತ್ರಜ್ಞರು ಇಷ್ಟು ಜನ ಬ್ಯಾಡ್ಮಿಂಟನ್‌ ಆಡಲಿದ್ದಾರೆ ಎಂದು ಗೊತ್ತಿರಲಿಲ್ಲ. ನಾನು ಇಲ್ಲಿ ಇರುವುದಕ್ಕೆ ಖುಷಿಯಾಗುತ್ತಿದೆ. ನಮ್ಮ ಚಿತ್ರರಂಗ ಇವತ್ತು ಬೇಡದ ವಿಷಯಗಳಿಗೆ ಹೆಚ್ಚು ಸದ್ದು ಮಾಡುತ್ತಿದೆ. ಓಳ್ಳೆ ಸುದ್ದಿಗಳಿಂದ ಸದ್ದು ಮಾಡುತ್ತಿಲ್ಲ. ಬರೀ ಕೆಟ್ಟ ಸುದ್ದಿಯಿಂದಲೇ ಸದ್ದು ಮಾಡುತ್ತಿದೆ. ಅಂತಹದ್ದರ ಮಧ್ಯೆ ಅವಿಸ್ಮರಣೀಯ ಕ್ಷಣ ಇದು. ಇಲ್ಲಿ ಎಲ್ಲರೂ ಒಟ್ಟಿಗೆ ಸೇರಿ ನಮ್ಮ ಚಿತ್ರರಂಗದ ಬಗ್ಗೆ ತಪ್ಪು ತಿಳಿದುಕೊಂಡವರಿಗೆ ಒಳ್ಳೆಯ ಸಂದೇಶವನ್ನು ಕಳುಹಿಸಿದ್ದೇವೆ. ನಮ್ಮ ಕನ್ನಡ ಚಿತ್ರರಂಗದ ಬಗ್ಗೆ ನಮಗೆ ಹೆಮ್ಮೆ ಇದೆ. ಎಲ್ಲರಿಗೂ ಒಳ್ಳೆದಾಗಲಿ” ಎಂದು ತಿಳಿಸಿದರು.
ಹಿರಿಯ ನಟ ಹಾಗೂ ಮಾಜಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, “ತುಂಬಾ ಸಂತೋಷವಾಗ್ತಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘ ಸ್ಯಾಂಡಲ್‌ವುಡ್ ಕಪ್-2024 ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಹಮ್ಮಿಕೊಂಡಿದೆ. ಇಡೀ ಚಿತ್ರರಂಗವನ್ನು ಒಂದೇ ವೇದಿಕೆಯಲ್ಲಿ ಸೇರಿಸಿದ್ದಾರೆ. ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗಿಯಾಗುತ್ತಿರುವ ಇಡೀ ತಂಡಗಳಿ ಒಳ್ಳೆಯದಾಗಲಿ” ಎಂದು ಹಾರೈಸಿದರು.
ಜೆಡಿಎಸ್ ಮುಖಂಡ ಟಿ.ಎ.ಶರವಣ ಮಾತನಾಡಿ, “ನಾವು ಈ ಹಿಂದೆ ಅಪ್ಪು ಕಪ್ ಎಂದು ಮಾಡಿದ್ದೆವು. ತುಂಬ ಚೆನ್ನಾಗಿ ಅದರ ಎರಡು ಎಡಿಷನ್ ಮುಗಿದಿದೆ. ಬರುವ ವರ್ಷ ದುಬೈನಲ್ಲಿ ಮಾಡೋಣ ಎಂದುಕೊಂಡಿದ್ದೇವೆ. ಅದೇ ರೀತಿ ಸ್ಯಾಂಡಲ್‌ವುಡ್ ಕಪ್-2024 ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಡೆಯಬೇಕು. ನಾನು ನಿಮ್ಮ ಜತೆ ನಿಲ್ಲಲು ಬಂದಿದ್ದೇವೆ. ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು.
ಸ್ಯಾಂಡಲ್‌ವುಡ್ ಕಪ್-2024 ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಅನ್ನು ಕೇವಲ ಮನರಂಜನೆ ಉದ್ದೇಶದಿಂದ ಆರಂಭಿಸಿಲ್ಲ. ಬದಲಾಗಿ ಕಷ್ಟದಲ್ಲಿರುವ ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರು, ವಿತರಕರು, ನಿರ್ಮಾಪಕರು, ಕಷ್ಟದಲ್ಲಿರುವ ಸಹಾಯ ಮಾಡುವುದು ಈ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಪ್ರಮುಖ ಧ್ಯೇಯ.
ಹಿರಿಯ ನಿರ್ಮಾಪಕರಾದ ಸಾ.ರಾ ಗೋವಿಂದ್, ಭಾ.ಮಾ ಹರೀಶ್, ಭಾ.ಮಾ.ಗಿರೀಶ್ ಎನ್.ಎಂ.ಸುರೇಶ್, ಎ.ಗಣೇಶ್, ಪ್ರಮೀಳಾ ಜೋಷಾಯ್, ಸುಂದರ್ ರಾಜ್, ಪ್ರವೀಣ್ ಕುಮಾರ್, ಜಯಸಿಂಹ ಮೂಸರಿ ನೇತೃತ್ವದಲ್ಲಿ ಸ್ಯಾಂಡಲ್‌ವುಡ್ ಕಪ್ 2024 ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಡೆಸಲಾಗುತ್ತದೆ.
ತಂಡದ ನಾಯಕರು ಮತ್ತು ತಂಡಗಳು
ಅಜಯ್ ರಾವ್ – ಗಂಧದಗುಡಿ ಗ್ಯಾಂಗ್ಮನುರಂಜನ್- ರಣಧೀರ ರೈಡರ್ಸ್ಸ್ಚೇತನ್ ಚಂದ್ರ -ಬುದ್ಧಿವಂತ ಬ್ಲಾಸ್ಟರ್ಸ್ವಶಿಷ್ಠ ಸಿಂಹ- ಅಂತ ಹಂಟರ್ಸ್ಸ್ವಿಕ್ರಮ್ ರವಿಚಂದ್ರನ್ – ಅಮೃತವರ್ಷಿಣಿ ಅವೆಂಜರ್ಸ್ಸ್ಮಯೂರ್ ಪಟೇಲ್ -ಟೈಗರ್ ಟೈಟಾನ್ಸ್ಶ್ರೀನಗರ ಕಿಟ್ಟಿ- ಸೂರ್ಯವಂಶ ಸ್ವ್ಯಾಡ್ಪೃಥ್ವಿ ಅಂಬಾರ್- ಸಾಂಗ್ಲಿಯಾನ ಸ್ಮ್ಯಾಷರ್ಸ್ಸ್ಪ್ರಮೋದ್ ಶೆಟ್ಟಿ – ಓಂ ವಾರಿಯರ್ಸ್ಸ್ಸೃಜನ್ ಲೋಕೇಶ್ – ಅಪ್ಪು ಫ್ಯಾಂಥರ್ಸ್ಸ್
ಉಪ ನಾಯಕರು
ಸಿಂಧು ಲೋಕನಾಥ್- ಗಂಧದಗುಡಿ ಗ್ಯಾಂಗ್ಶ್ರುತಿ ಹರಿಹರನ್- ರಣಧೀರ ರೈಡರ್ಸ್ಸ್ಜಾಹ್ನವಿ- ಬುದ್ಧಿವಂತ ಬ್ಲಾಸ್ಟರ್ಸ್ದಿವ್ಯಾ ಸುರೇಶ್- ಅಂತ ಹಂಟರ್ಸ್ಸ್ಕರುಣ್ಯಾ ರಾಮ್-ಅಮೃತವರ್ಷಿಣಿ ಅವೆಂಜರ್ಸ್ಸ್ಸಂಜನಾ ಗಲ್ರಾನಿ -ಟೈಗರ್ ಟೈಟಾನ್ಸ್ತನಿಷಾ ಕುಪ್ಪಂಡ- ಸೂರ್ಯವಂಶ ಸ್ವ್ಯಾಡ್ಶ್ಯಾವ್ಯಾ ಶೆಟ್ಟಿ – ಸಾಂಗ್ಲಿಯಾನ ಸ್ಮ್ಯಾಷರ್ಸ್ಸ್ಸುಕೃತಾ ವಾಗ್ಲೆ – ಓಂ ವಾರಿಯರ್ಸ್ಸ್ಮೇಘನಾ ರಾಜ್ – ಅಪ್ಪು ಫ್ಯಾಂಥರ್ಸ್ಸ್
ಮೆಂಟರ್ಸ್ ಪಟ್ಟಿ
ಜೋಗಿ- ಗಂಧದಗುಡಿ ಗ್ಯಾಂಗ್ರಂಗನಾಥ್ ಭಾರದ್ವಾಜ್- ರಣಧೀರ ರೈಡರ್ಸ್ಸ್ಸದಾಶಿವ ಶೆಣೈ- ಬುದ್ಧಿವಂತ ಬ್ಲಾಸ್ಟರ್ಸ್ಯಮುನಾ ಶ್ರೀನಿಧಿ- ಅಂತ ಹಂಟರ್ಸ್ಸ್ಕವಿತಾ ಲಂಕೇಶ್-ಅಮೃತವರ್ಷಿಣಿ ಅವೆಂಜರ್ಸ್ಸ್ಆರೂರು ಜಗದೀಶ್ -ಟೈಗರ್ ಟೈಟಾನ್ಸ್ಟಿ.ಪಿ.ಸಿದ್ದರಾಜು- ಸೂರ್ಯವಂಶ ಸ್ವ್ಯಾಡ್ತಾರಾ ಅನುರಾಧಾ- ಸಾಂಗ್ಲಿಯಾನ ಸ್ಮ್ಯಾಷರ್ಸ್ಸ್ರಾಜೇಶ್ ರಾಮನಾಥ್ – ಓಂ ವಾರಿಯರ್ಸ್ಸ್ಇಂದ್ರಜಿತ್ ಲಂಕೇಶ್ – ಅಪ್ಪು ಫ್ಯಾಂಥರ್ಸ್ಸ್
ಈ ಸುದ್ದಿಯನ್ನು ಓದಿ: : ತಾಯಿಯಾಗುವ ಸಂಭ್ರಮದಲ್ಲಿರುವ ಹರ್ಷಿಕಾಗೆ ಅದ್ಧೂರಿ ಬೇಬಿ ಶವರ್ ಆಯೋಜಿಸಿದ ಗಣೇಶ್ ದಂಪತಿ