 : ‘ಕಾಂತಾರ 2’ ಶೂಟಿಂಗ್‌ ನಡುವೆ ರಿಲ್ಯಾಕ್ಸ್‌ ಮೂಡಿಗೆ ಜಾರಿದ ರಿಷಬ್‌ ಶೆಟ್ಟಿ; ಪತ್ನಿಯೊಂದಿಗೆ ಕಯಾಕಿಂಗ್
ಉಡುಪಿ:ಬಾರತೀಯ ಚಿತ್ರರಂಗದಲ್ಲೇ ಸಂಚಲನ ಸೃಷ್ಟಿಸಿದ ʼಕಾಂತಾರʼ () ಸಿನಿಮಾದಲ್ಲಿನ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ( ) ಸದ್ಯ ಕೊಂಚ ಬ್ರೇಕ್‌ ಪಡೆದುಕೊಂಡಿದ್ದಾರೆ. ಬಹು ನಿರೀಕ್ಷಿತ ʼಕಾಂತಾರ 2ʼ  ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಅವರು ರಿಲ್ಯಾಕ್ಸ್‌ ಮೂಡಿಗೆ ಜಾರಿದ್ದಾರೆ. ಭಾನುವಾರ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಕಯಾಕಿಂಗ್ ಪಾಯಿಂಟ್‌ನಲ್ಲಿ ಅವರು ತಮ್ಮ ಕುಟುಂಬದವರ ಜತೆ ಸಮಯ ಕಳೆದಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ ( ).
‘ಕಾಂತಾರ 2’ ಎನ್ನುವುದು ‘ಕಾಂತಾರ’ ಚಿತ್ರದ ಪ್ರೀಕ್ವೆಲ್‌. ಅಂದರೆ ಈ ಸಿನಿಮಾದಲ್ಲಿ ‘ಕಾಂತಾರ’ದ ಕಥೆ ನಡೆಯುವುದಕ್ಕೆ ಮುನ್ನ ಏನಾಗಿತ್ತು ಎನ್ನುವುದನ್ನು ರಿಷಬ್‌ ಹೇಳಲು ಹೊರಟಿದ್ದಾರೆ. ಈ ಚಿತ್ರಕ್ಕಾಗಿ ಕುಂದಾಪುರದ ಹಳ್ಳಿಯೊಂದರಲ್ಲಿ ಸೆಟ್‌ ಹಾಕಿ ಶೂಟಿಂಗ್‌ ನಡೆಸುತ್ತಿದ್ದಾರೆ. ಬ್ಯುಸಿ ಶೆಡ್ಯೂಲ್ ಜತೆಗೆ ತಮ್ಮ ಕುಟುಂಬಕ್ಕೂ ಸಾಕಷ್ಟು ಸಮಯ ನೀಡುವ ರಿಷಬ್‌ ಶೆಟ್ಟಿ ಇದೀಗ ಸಾಲಿಗ್ರಾಮ ಕಯಾಕಿಂಗ್ ಪಾಯಿಂಟ್‌ಗೆ ಭೇಟಿ ನೀಡಿದ್ದಾರೆ.
      (@)
ಭಾನುವಾರ ಪತ್ನಿ ಪ್ರಗತಿ, ಮಗ, ಮಗಳು ಮತ್ತು ಅತ್ತೆಯ ಜತೆಗೆ ಭೇಟಿ ನೀಡಿದ ರಿಷಭ್‌ ಶೆಟ್ಟಿ ಅವರುಅಪರಾಹ್ನ 2 ಗಂಟೆಯಿಂದ ಸಂಜೆಯವರೆಗೂ ಕಯಾಕಿಂಗ್ ಪಾಯಿಂಟ್‌ನಲ್ಲಿ ಸಮಯ ಕಳೆದರು.ಕಯಾಕಿಂಗ್ ಸೆಂಟರ್‌ನಲ್ಲಿ ಕಯಾಕಿಂಗ್ ಮಾಡುತ್ತ ಅವರು ಕಾಡ್ಲಾವನದ ನೋಟ ಸವಿದರು.
ದೇಶದ ಗಮನ ಸೆಳೆದ ʼಕಾಂತಾರ: ಚಾಪ್ಟರ್‌  1ʼ
ʼಕಾಂತಾರʼ ಪ್ರೀಕ್ವೆಲ್‌ಗೆ ʼಕಾಂತಾರ: ಚಾಪ್ಟರ್‌  1ʼ ಎಂದು ಹೆಸರಿಡಲಾಗಿದೆ. ಸದ್ಯ ಈ ಸಿನಿಮಾಕ್ಕಾಗಿ ಕನ್ನಡ ಪ್ರೇಕ್ಷಕರು ಮಾತ್ರವಲ್ಲ ಇಡೀ ದೇಶದ ಚಿತ್ರ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. 2022ರಲ್ಲಿ ತೆರೆಕಂಡು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ʼಕಾಂತಾರʼ ಇನ್ನಿಲ್ಲದಂತೆ ಸದ್ದು ಮಾಡಿದ್ದ ಕಾರಣ ಪ್ರೀಕ್ವೆಲ್‌ ಮೇಲೆ ಬೆಟ್ಟದಷ್ಟು ನಿರೀಕ್ಷೆ ಮೂಡಿದೆ. ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ʼಕಾಂತಾರʼ ಸಿನಿಮಾದಲ್ಲಿ ರಿಷಬ್‌ ಶೆಟ್ಟಿ ನಾಯಕನಾಗಿ ಮಿಂಚಿದ್ದರು. ಜತೆಗೆ ನಿರ್ದೇಶಕನಾಗಿಯೂ ಗಮನ ಸೆಳೆದಿದ್ದರು. ʼಕಾಂತಾರ: ಚಾಪ್ಟರ್ 1’ನಲ್ಲಿಯೂ ಅವರು ನಟಿಸುವ ಜತೆಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಇದೀಗ ಚಿತ್ರತಂಡ ಶೂಟಿಂಗ್‌ಗಾಗಿ ಕುಂದಾಪುರದಲ್ಲಿ ಬೀಡು ಬಿಟ್ಟಿದೆ.
ʼಕಾಂತಾರʼ ಕಥೆ ನಡೆಯುವುದಕ್ಕೆ ಮುನ್ನ ಏನಾಗಿತ್ತು ಎನ್ನುವುದನ್ನು ರಿಷಬ್‌ ಶೆಟ್ಟಿ ಈ ಭಾಗದಲ್ಲಿ ವಿವರಿಸಲಿದ್ದಾರೆ. ಕ್ರಿ.ಶ. 301-400ರ ಕಾಲಘಟ್ಟದ ಕಥೆ ತೆರೆ ಮೇಲೆ ಅನಾವರಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಿನಿಮಾ ಪಂಜುರ್ಲಿ ದೈವ ಮತ್ತು ಗುಳಿಗ ದೈವಗಳ ಮೂಲದ ಕಥೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. ಸದ್ಯ ಚಿತ್ರತಂಡ ಯಾವುದೇ ಗುಟ್ಟನ್ನು ಬಿಟ್ಟು ಕೊಟ್ಟಿಲ್ಲ. ಜತೆಗೆ ಸಿನಿಮಾದಲ್ಲಿ ರಿಷಬ್‌ ಬಿಟ್ಟರೆ ಬೇರೆ ಯಾರೆಲ್ಲ ಅಭಿನಯಿಸುತ್ತಿದ್ದಾರೆ ಎನ್ನುವುದೂ ತಿಳಿದು ಬಂದಿಲ್ಲ. ಮಲಯಾಳಂ ಹಿರಿಯ ನಟ ಜಯರಾಂ ʼಕಾಂತಾರ 2ʼರಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದ್ದು, ಇನ್ನೂ ಅಧಿಕೃತವಾಗಿಲ್ಲ.
ಈ ಸುದ್ದಿಯನ್ನೂ ಓದಿ: : ‘ಕೆಜಿಎಫ್‌’ ಬೆಡಗಿ ಶ್ರೀನಿಧಿ ಶೆಟ್ಟಿಯ ಎಸ್‌ಎಸ್‌ಎಲ್‌ಸಿ ಮಾರ್ಕ್ಸ್‌ ಕಾರ್ಡ್‌ ವೈರಲ್‌; ಕನ್ನಡದಲ್ಲಿ ಪಡೆದ ಅಂಕ ಎಷ್ಟು?