 : ಕುಚ್ ಕುಚ್ ಹೋತಾ ಹೈ ಚಿತ್ರದ ಪುಟ್ಟ ಅಂಜಲಿ ಈಗ ಎಲ್ಲಿದ್ದಾರೆ? ಇಲ್ಲಿದೆ ಅವರ ಮಾಹಿತಿ
ಶಾರುಖ್, ಕಾಜೋಲ್, ರಾಣಿ ಮುಖರ್ಜಿ ಅಭಿನಯದಕುಚ್ ಕುಚ್ ಹೋತಾ ಹೈ(   ) ಚಿತ್ರ ನೆನಪಿದೆಯೇ? ಹಾಗಿದ್ದರೆ ಇದರಲ್ಲಿ ಬಾಲ ನಟಿಯಾಗಿ ( ) ಅಭಿನಯಿಸಿರುವ ಅಂಜಲಿ ಪಾತ್ರವಂತೂ ಖಂಡಿತಾ ನೆನಪಿರುತ್ತದೆ. ಈ ಅಂಜಲಿಯಾಗಿ ಅಭಿನಯಿಸಿರುವ ಸನಾ ಸಯೀದ್ ( ) ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಗೊತ್ತೇ?
ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಸನಾ, ಚಲನಚಿತ್ರಗಳ ಜೊತೆಗೆ ದೂರದರ್ಶನದಲ್ಲೂ ಕಾಣಿಸಿಕೊಂಡರು. ಜಾಹೀರಾತುಗಳು, ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದರು. ನೃತ್ಯ, ಸಾಹಸ ಸೇರಿದಂತೆ ಹಾಸ್ಯದ ಮೂಲಕವೂ ಮನೆ ಮಾತಾದ ಸನಾ ಈಗ ಎಲ್ಲಿ, ಏನು ಮಾಡುತ್ತಿದ್ದಾರೆ ಮತ್ತೆ ಅವರು ಚಿತ್ರರಂಗದಲ್ಲಿ ಕಾಣಿಸುತ್ತಾರೆಯೇ ಮೊದಲಾದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಸಾಗಿದಾಗ ಸಿಕ್ಕಿದ ಮಾಹಿತಿ ಇಷ್ಟು.
ಸೆಪ್ಟೆಂಬರ್ 22ರಂದು 36ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಕುಚ್ ಕುಚ್ ಹೋತಾ ಹೈ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದಾಗ ಅವರ ವಯಸ್ಸು ಕೇವಲ ಹತ್ತು ವರ್ಷ. ಈ ಚಿತ್ರದಲ್ಲಿ ಬಾಲನಟಿ ಅಂಜಲಿಯಾಗಿ ಎಲ್ಲರ ಹೃದಯ ಗೆದ್ದ ಸನಾ, ಅನಂತರಹರ್ ದಿಲ್ ಜೋ ಪ್ಯಾರ್ ಕರೇಗಾಸೇರಿದಂತೆ ಇನ್ನೂ ಕೆಲವು ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು.
2012ರಲ್ಲಿ ತೆರೆಗೆ ಬಂದ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದಲ್ಲಿ ಮತ್ತೆ ಸುದ್ದಿ ಮಾಡಿದರು. ವರುಣ್ ಧವನ್, ಆಲಿಯಾ ಭಟ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಚೊಚ್ಚಲ ಚಿತ್ರದಲ್ಲಿ ಇವರ ತಾನ್ಯಾ ಇಸ್ರಾನಿ ಪಾತ್ರವೂ ಹಿಟ್ ಆಯಿತು. ಅನೇಕರು ಈ ಚಿತ್ರದಲ್ಲಿ ಸನಾ ಅವರನ್ನು “ಗ್ಲಾಮರ್ ಗೊಂಬೆ” ಎಂದು ಉಲ್ಲೇಖಿಸಿದ್ದಾರೆ.
ಬಳಿಕ ಕಿರುಚಿತ್ರವೊಂದರಲ್ಲಿ ನಟಿಸುತ್ತಿರುವ ಸುದ್ದಿ ಹೊರಬಿದ್ದರೂ ಆ ಬಳಿಕ ಸನಾ ಏನು ಮಾಡುತ್ತಿದ್ದಾರೆ ಎನ್ನುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಲಿಲ್ಲ.
ದೂರದರ್ಶನಕ್ಕೆ 2001ರಲ್ಲಿ ಪಾದಾರ್ಪಣೆ ಮಾಡಿದ್ದ ಸನಾ ಫಾಕ್ಸ್ ಕಿಡ್ಸ್ ಎಂಬ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಬಳಿಕ ಕುಂಕುಮ್, ಸಾತ್ ಫೇರೆ ಮತ್ತು ಸಸುರಲ್ ಗೆಂಡಾ ಫೂಲ್ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ಕೆಲಸ ಮಾಡಿದರು.
2012ರಲ್ಲಿ ಬಿಗ್ ಬಾಸ್, 2013 ರಲ್ಲಿ ಸ್ಪ್ಲಿಟ್ಸ್ ವಿಲ್ಲಾ ಮತ್ತು ಝಲಕ್ ದಿಖ್ಲಾ ಜಾ, 2015ರಲ್ಲಿ ನಚ್ ಬಲಿಯೇ, 2016 ರಲ್ಲಿ ಖತ್ರೋನ್ ಕೆ ಖಿಲಾಡಿ, ಝಲಕ್ ದಿಖ್ಲಾ ಜಾ 9 ಸೇರಿದಂತೆ ಹಲವಾರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. 2017, 2018 ರಲ್ಲಿ ಕಾಮಿಡಿ ಸರ್ಕಸ್, 2022ರಲ್ಲಿ ದಿ ಖತ್ರಾ ಖತ್ರಾ ಶೋದಲ್ಲೂ ಕಾಣಿಸಿಕೊಂಡರು.
2021ರಲ್ಲಿ ಸನಾ ಮುಂಬಯಿನಿಂದ ಲಾಸ್ ಏಂಜಲೀಸ್ ಗೆ ತೆರಳಿದರು. ಅಲ್ಲಿ ಅವರು ತಮ್ಮ ನಟನಾ ವೃತ್ತಿಯನ್ನು ಮುಂದುವರೆಸಿದರು. ಪ್ರಸ್ತುತ ಇವರ ಬಳಿ ಯಾವುದೇ ಪ್ರಾಜೆಕ್ಟ್‌ಗಳಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದು, ತಮ್ಮ ಅಭಿಮಾನಿಗಳನ್ನು ರಂಜಿಸಲು ಆಗಾಗ್ಗೆ ಮನಮೋಹಕ ಚಿತ್ರಗಳನ್ನು ಪೋಸ್ಟ್ ಮಾಡುತ್ತಾರೆ.
 2025: ಆಸ್ಕರ್‌ಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದ ʼಲಾಪತಾ ಲೇಡೀಸ್‌ʼ ಚಿತ್ರ
ಪ್ರಸ್ತುತ ಲಾಸ್ ಏಂಜಲೀಸ್ ಮೂಲದ ಸೌಂಡ್ ಡಿಸೈನರ್ ಮೇಲ್ವಿಚಾರಕ ಮತ್ತು ಸ್ವೀಟ್ ಜಸ್ಟೀಸ್ ಸೌಂಡ್ ಇಂಕ್‌ ಕಂಪನಿಯ ನಿರ್ದೇಶಕರಾದ ಸಿಸಾಬಾ ವ್ಯಾಗ್ನರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ.
