 : ಕೆಲಸದವನ ಮೇಲೆ ಹಲ್ಲೆ: ನಟಿ ಪಾರ್ವತಿ ನಾಯರ್ ವಿರುದ್ಧ ಎಫ್‌ಐಆರ್
ಮನೆ ಕೆಲಸದವನ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ತಮಿಳು ನಟಿ ( ) ಪಾರ್ವತಿ ನಾಯರ್ ( ) ವಿರುದ್ಧ ಚೆನ್ನೈನ () ತೆನಾಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದಳಪತಿ ವಿಜಯ್ (  ) ಜೊತೆ ತಮಿಳಿನ ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ (    ) ಚಿತ್ರದಲ್ಲಿ  ಪಾರ್ವತಿ ನಾಯರ್ ನಟಿಸಿದ್ದರು.
ಮನೆಯಲ್ಲಿ ಸಹಾಯಕನಾಗಿದ್ದ ಸುಭಾಷ್ ಚಂದ್ರ ಬೋಸ್ ಮೇಲೆ ನಟಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಸುಭಾಷ್ ನೀಡಿದ ದೂರಿನ ಮೇರೆಗೆ ನಟಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 296 (ಬಿ), 115 (2), ಮತ್ತು 351 (2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೆಜೆಆರ್ ಸ್ಟುಡಿಯೋದಲ್ಲಿ ಸಹಾಯಕನಾಗಿದ್ದ ಸುಭಾಷ್ ಬಳಿ 2022ರಲ್ಲಿ ನಟಿ ಪಾರ್ವತಿ ಅವರ ಮನೆಕೆಲಸಗಳನ್ನು ಮಾಡಲು ಒಪ್ಪಿಕೊಂಡಿದ್ದರು. ಆದರೆ ಅವರು ನಟಿಯ ಮನೆಯಲ್ಲಿ ಇದ್ದಾಗ ಹಲವು ಬಾರಿ ಕಳ್ಳತನದ ಆರೋಪಗಳನ್ನು ಮಾಡಲಾಗಿತ್ತು.
ನಟಿ ತನ್ನ ಲ್ಯಾಪ್‌ಟಾಪ್, ವಾಚ್, ಕೆಮರಾ ಮತ್ತು ಮೊಬೈಲ್ ಫೋನ್ ಮನೆಯಿಂದ ಕಳವಾಗಿದೆ ಎಂದು ಪೊಲೀಸ್ ದೂರು ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಸುಭಾಷ್ ಅವರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಲಾಗಿತ್ತು.
ಅನಂತರ ಕೆಜೆಆರ್ ಸ್ಟುಡಿಯೋದಲ್ಲಿ ಮತ್ತೆ ಸುಭಾಷ್ ಕೆಲಸಕ್ಕೆ ಸೇರಿದ್ದರು. ಐವರು ಸಹಚರರೊಂದಿಗೆ ಸ್ಟುಡಿಯೋಗೆ ಬಂದ ಪಾರ್ವತಿ ಅವರು ಸುಭಾಷ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.
 : ಬದುಕಿನ ಆಳವನ್ನು ಶೋಧಿಸುವ ನವಿರಾದ ಪ್ರೇಮಕಥೆ ʼಸಂಜುʼ; ಸೆ. 27ರಂದು ಚಿತ್ರ ಬಿಡುಗಡೆ
ತಮ್ಮ ದೂರಿನ ಬಳಿಕವೂ ಪೊಲೀಸರು ನಟಿ ಪಾರ್ವತಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸೈದಾನೆಟ್ 19ನೇ ಎಂಎಂ ನ್ಯಾಯಾಲಯಕ್ಕೆ ದೂರು ನೀಡಲಾಗಿದೆ. ಬಳಿಕ ಮ್ಯಾಜಿಸ್ಟ್ರೇಟ್ ಆದೇಶದ ಬಳಿಕ ಪಾರ್ವತಿ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸಂತ್ರಸ್ತ ಸುಭಾಷ್ ತಿಳಿಸಿದ್ದಾರೆ.ಈ ಬಗ್ಗೆ ನಟಿ ಪಾರ್ವತಿ ಅವರು ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.