   11 : ಬಾಳೆ ಎಲೆ ಕಟ್ಟಿಕೊಂಡು ಬಿಗ್‌ ಬಾಸ್‌ ಶೋ ನಡೆಸ್ತಾರಾ ಕಿಚ್ಚ ಸುದೀಪ್‌?
ಬೆಂಗಳೂರು :ಬಿಗ್‌ ಬಾಸ್‌ ಕನ್ನಡ ಸೀಸನ್‌ 11ಕ್ಕೆ (   11) ಕ್ಷಣಗಣನೆ ಆರಂಭವಾಗಿದೆ. ಹಾಲಿ ಆವೃತ್ತಿ ಪ್ರೋಮೋಗಳ ಮೂಲಕವೇ ಕುತೂಹಲ ಮೂಡಿಸಿವೆ.  ಅಂತೆಯೇ ಬಿಗ್‌ ಬಾಸ್‌ ಹೊಸ ಕಾನ್ಸೆಪ್ಟ್‌ ನೊಂದಿಗೆ ಬರಲಿದೆ ಎಂಬುದಾಗಿ  ಹೇಳಲಾಗುತ್ತಿದೆ. ಬಿಗ್‌ಬಾಸ್‌ ನಿರೂಪಕ ಕಿಚ್ಚ ಸುದೀಪ್‌ ಸೇರಿದಂತೆ ಕಲರ್ಸ್ ಕನ್ನಡದ ಪ್ರಮುಖರು ಸೋಮವಾರ ಮಾಧ್ಯಮ ಗೋಷ್ಠಿ ನಡೆಸಿದರು. ಈ ವೇಳೆ ಅವರಿಗೆ ಈ ಸೀಸನ್‌ಗೆ ಅವರ ಕಾಸ್ಟ್ಯೂಮ್ ಬಗ್ಗೆ ಕೇಳಲಾಯಿತು. ಈ ವೇಳೆ ಅವರು ಬಾಳೆ ಎಲೆ ಕಟ್ಟಿಕೊಂಡು ಬರುತ್ತೇನೆ ಎಂಬುದಾಗಿ ಹೇಳಿದ್ದು ಸ್ಥಳದಲ್ಲಿದ್ದವರ ಗಮನ ಸೆಳೆಯಿತು.
ಕೆಲವು ಅದ್ಭುತ ಕ್ಷಣಗಳು !📸ಬಿಗ್ ಬಾಸ್ ಸೀಸನ್ 11ಕ್ಕೆ ಇನ್ನಷ್ಟು ಕ್ಷಣಗಳು ಮುಂದೆ!ಬಿಗ್ ಬಾಸ್ ಸೀಸನ್ 11 ಗ್ರಾಂಡ್ ಓಪನಿಂಗ್ ಸೆಪ್ಟೆಂಬರ್ 29 | ಪ್ರತಿದಿನ ರಾತ್ರಿ 9.30#BiggBossKannada11#BBK11####@@../gjTY5LUiKz
ಅಂದ ಹಾಗೆ ಅವರು ಬಾಳೆ ಎಲೆಯ ಬಗ್ಗೆ ಹೇಳಿದ್ದು ತಮಾಷೆಗಾಗಿ. ಪ್ರತಿ ಸೀಸನ್‌ನಲ್ಲೂ ವಿಭಿನ್ನ ಡ್ರೆಸ್‌ಕೋಡ್‌ನಲ್ಲಿ ಕಾಣಿಸಿಕೊಳ್ಳುವ ಸುದೀಪ್ ಅವರು ಈ ಬಾರಿ ಯಾವ ಕಾಸ್ಟ್ಯೂಮ್‌ನಲ್ಲಿ ಕಾಣಿಸಿಕೊಳ್ಳಬಹುದು ಎಂಬ ಕುತೂಹಲ ಸೃಷ್ಟಿಯಾಗಿದೆ. ಈ ಕುರಿತು ಸುದೀಪ್‌ ಅವರಿಗೆ ಈ ಬಗ್ಗೆ ಪ್ರಶ್ನೆಯೊಂದು ಎದುರಾಯಿತು. ಆ ವೇಳೆ ಅವರು  ನಾನು ಬಾಳೆ ಎಲೆ ಕಟ್ಟಿಕೊಂಡು ಬರುತ್ತೇನೆ ಎಂದು ಹೇಳಿದರು. ಈ ವೇಳೆ ಅಲ್ಲಿದ್ದವರು ಗೊಳ್ಳೆಂದು ನಕ್ಕರು. ಅವರು ಕೊಟ್ಟ ಈ ಉತ್ತರ ಪದೇ ಪದೇ ತಮಾಷೆ ರೂಪದಲ್ಲಿ ಪುನರಾವರ್ತನೆಯಾಯಿತು.
ಎಲ್ಲದರ ನಡುವೆಯೂ ಸುದೀಪ್ ಅವರು ತಮ್ಮ ಕಾಸ್ಟ್ಯೂಮ್‌ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು. ತಮಗಾಗಿ ಅಂಥ ಪೋಷಾಕುಗಳನ್ನು ಸಿದ್ಧಪಡಿಸುವ ತಂಡದ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದರು. ಹಾಲಿ ಆವೃತ್ತಿಯಲ್ಲೂ ಅವರ ವಿಭಿನ್ನ ಕಾಸ್ಟ್ಯೂಮ್ ಕಾನ್ಸೆಫ್ಟ್‌ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:   8: ತೆಲುಗು ಬಿಗ್‌ಬಾಸ್‌ನಲ್ಲಿ ಕನ್ನಡಿಗರದ್ದೇ ಹವಾ
ಸೆ. 29ರ ಸಂಜೆ 6 ಗಂಟೆಗೆ ಕಲರ್ಸ್‌ ಕನ್ನಡದಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶುರುವಾಗಲಿದೆ. ಸ್ವರ್ಗ ಮತ್ತು ನರಕ ಎಂಬ ವಿಭಾಗದೊಂದಿಗೆ ಈ ಸಲದ ಶೋ ನಡೆಯಲಿದೆ ಎಂಬುದನ್ನೂ ಖಾತರಿಪಡಿಸಲಾಗಿದೆ.  ಸ್ವರ್ಗದಲ್ಲಿರುವ ಸ್ಪರ್ಧಿಗಳಿಗೆ ಸಕಲ ಸೌಕರ್ಯ ಹಾಗೂ  ನರಕದಲ್ಲಿರುವವರೆಗೆ ಕಷ್ಟಗಳು ನಿರೀಕ್ಷೆಯಂತೆ ಆಗಲಿದೆ.
ಪ್ರತಿ ಆವೃತ್ತಿಯಲ್ಲಿ ಶೋ ಆರಂಭಕ್ಕೆ ಮೊದಲಿನ ಟಾಕ್ ಶೋದಲ್ಲಿ ಸ್ಪರ್ಧಿಗಳ ಹೆಸರು ಬಹಿರಂಗಗೊಳ್ಳುತ್ತಿತ್ತು. ಅದಕ್ಕಿಂತ ಮೊದಲು  ಸ್ಪರ್ಧಿಗಳು ಯಾರು ಎಂಬ ವಿಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿತ್ತು. ಅವರು ಬರ್ತಾರೆ, ಇವರು ಬರ್ತಾರೆ ಎಂದು ಕೆಲ ಹೆಸರುಗಳು ಓಡಾಡುತ್ತಲೇ  ಇರುತ್ತಿದ್ದವು.  ಈ ಸಲ ಮೊದಲ ದಿನವೇ ಶೋನಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ಕೌತುಕ ತಣಿಯಲಿದೆ.
ಸೆಪ್ಟೆಂಬರ್‌ 28ರಂದು ಕಲರ್ಸ್‌ ಕನ್ನಡದ ರಾಜಾ ರಾಣಿ ಶೋನ ಗ್ರ್ಯಾಂಡ್‌ ಫಿನಾಲೆ ನಡೆಯಲಿದೆ. ಈ ಶೋನಲ್ಲಿ ಆಯ್ದ ಒಂದಷ್ಟು ಸ್ಪರ್ಧಿಗಳನ್ನು ರಿವೀಲ್‌ ಮಾಡಲಿದೆ. ಅಷ್ಟೇ ಅಲ್ಲ ಅವರು ಬಿಗ್‌ ಬಾಸ್‌ ಮನೆ ಪ್ರವೇಶಿಸಬೇಕೋ ಬೇಡವೋ ಎಂಬ ಆಯ್ಕೆಯನ್ನೂ ಇಡಲಿದೆ.  ಆಡಿಯೆನ್ಸ್‌ ಮೂಲಕ ಯಾರಿಗೆ ಹೆಚ್ಚು ವೋಟ್‌ಗಳು ಬೀಳುತ್ತವೋ ಅವರು ಬಿಗ್‌ ಬಾಸ್‌ ಮನೆ ಪ್ರವೇಶಿಸಲಿದ್ದಾರೆ. ಇನ್ನುಳಿದಂತೆ ಮುಖ್ಯ ಸ್ಪರ್ಧಿಗಳನ್ನು ಮರು ದಿನದ ಗ್ರ್ಯಾಂಡ್‌ ಫಿನಾಲೆಯಲ್ಲಿಯೇ ಗೊತ್ತಾಗಲಿದೆ.