 : ಪ್ಯಾರಿಸ್‌ ಫ್ಯಾಷನ್‌ ವೀಕ್‌ನಲ್ಲೂ ಭಾರತೀಯ ಸಂಸ್ಕೃತಿ ಮೆರೆದ ಐಶ್‌; ವಿಶ್ವ ಸುಂದರಿಯ ನಮಸ್ತೆಗೆ ಮನಸೋತ ನೆಟ್ಟಿಗರು
ಪ್ಯಾರಿಸ್‌:ಮಾಜಿ ವಿಶ್ವ ಸುಂದರಿ, ಬಾಲಿವುಡ್‌ ನಟಿ ಐಶ್ವರ್ಯಾ ರೈ ( ) ಅವರಿಗೆ ಈಗ ಭರ್ತಿ 50 ವರ್ಷ. ಆದರೂ 30ರ ಹರೆಯದವರೂ ನಾಚುವಂತೆ ಫಿಟ್‌ ಆಗಿದ್ದಾರೆ. ಅದೇ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಈ ಕಾರಣಕ್ಕೆ ಚಿತ್ರರಂಗ ಪ್ರವೇಶಿಸಿ ಸುಮಾರು 27 ವರ್ಷ ಕಳೆದರೂ ಅದೇ ಬೇಡಿಕೆ ಉಳಿಸಿಕೊಂಡು ಬಂದಿದ್ದಾರೆ. ಸಿನಿಮಾ, ಮಾಡೆಲಿಂಗ್‌, ಜಾಹೀರಾತು ಹೀಗೆ ವಿವಿಧ ಕ್ಷೇತ್ರಗಳಲ್ಲಿ ಐಶ್ವರ್ಯಾ ಈಗಲೂ ಮಿಂಚು ಹರಿಸುತ್ತಿದ್ದಾರೆ. ಅದಕ್ಕೆ ಉದಾಹರಣೆ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಪ್ಯಾರಿಸ್‌ ಫ್ಯಾಷನ್‌ ವೀಕ್‌ 2024 (   2024). ಅಲ್ಲಿ ಅವರು ರೆಡ್‌ ಗೌನ್‌ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.
ಈ ಬಾರಿಯ ಪ್ಯಾರಿಸ್‌ ಫ್ಯಾಷನ್‌ ವೀಕ್‌ ಸೆಪ್ಟೆಂಬರ್‌ 23ಕ್ಕೆ ಆರಂಭವಾಗಿದ್ದು, ಅಕ್ಟೋಬರ್‌ 1ರ ತನಕ ನಡೆಯಲಿದೆ. ಶೋ ಆರಂಭದ ದಿನವಾದ ಸೋಮವಾರ ಐಶ್ವರ್ಯಾ ರೈ ಅವರು ಉದ್ದನೆಯ ರೆಡ್‌ ಗೌನ್‌ ಧರಿಸಿ ರೆಡ್‌ ಕಾರ್ಪೆಟ್‌ ಮೇಲೆ ರ‍್ಯಾಂಪ್‌ ವಾಕ್‌ ಮಾಡಿದ್ದು ಫ್ಯಾಷನ್‌ ಪ್ರಿಯರನ್ನು ಆಕರ್ಷಿಸಿದೆ. ಜತೆಗೆ ಫೋಟೊ, ವಿಡಿಯೊ ವೈರಲ್‌ ಆಗಿದೆ.
'    ! 🥀💞##../d1xBLUN5km
ಸೌಂದರ್ಯ ವರ್ಧಕ ಲೋರಿಯಲ್‌ ಪ್ಯಾರಿಸ್‌ (’ ) ಉತ್ಪನ್ನದ ರಾಯಭಾರಿಯಾಗಿರುವ ಐಶ್ವರ್ಯಾ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಿ ಮತ್ತೊಮ್ಮೆ ರ‍್ಯಾಂಪ್‌ನ ರಾಣಿ (  ) ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಎಂದು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ವಿಶೇಷ ಎಂದರೆ ರ‍್ಯಾಂಪ್‌ ವಾಕ್‌ ಮಾಡಿದ ಅವರು ಪ್ರೇಕ್ಷಕರಿಗೆ ಭಾರತೀಯ ಶೈಲಿಯಲ್ಲಿ ನಮಸ್ಕರಿಸಿದರು. ಜತೆಗೆ ಫ್ಲೈಯಿಂಗ್‌ ಕಿಸ್‌ ಮಾಡಿದರು.
             2024..👸👸👑👑❤️❤️##../
ನೆಟ್ಟಿಗರಿಂದ ಮೆಚ್ಚುಗೆ
ಸದ್ಯ ಐಶ್ವರ್ಯಾ ರೈ ಅವರ ರ‍್ಯಾಂಪ್‌ ವಾಕ್‌ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ʼʼರಾಣಿʼʼ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ʼʼಅವರ ಸೌಂದರ್ಯ ಇಂದಿಗೂ ಅ‍ದ್ಭುತವಾಗಿದೆʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼವಯಸ್ಸು ಎನ್ನುವುದು ಇವರ  ವಿಷಯದಲ್ಲಿ ಉಲ್ಟಾ ಚಲಿಸುತ್ತದೆʼʼ ಎಂದು ಮಗದೊಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ನಮ್ಮ ಕರುನಾಡ ಬ್ಯೂಟಿ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ. ಇವರ ಜತೆಗೆ ಬಾಲಿವುಡ್‌ ನಟಿ ಆಲಿಯಾ ಭಟ್‌ ಕೂಡ ಫ್ಯಾಷನ್‌ ವೀಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಉಡುಪು ತೊಟ್ಟು  ರ‍್ಯಾಂಪ್‌ ವಾಕ್‌ ಮಾಡಿದ ಅವರೂ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಶಿವಣ್ಣನ ಕಾಲಿಗೆ ಬಿದ್ದ ಆರಾಧ್ಯಾ ಬಚ್ಚನ್‌
ಕೆಲವು ದಿನಗಳ ಹಿಂದೆ ದುಬೈಯಲ್ಲಿ ಆಯೋಜಿಸಿದ್ದ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಐಶ್ವರ್ಯಾ ರೈ ತಮ್ಮ ಮಗಳು ಆರಾಧ್ಯಾ ಬಚ್ಚನ್‌ ಜತೆ ಭಾಗವಹಿಸಿದ್ದರು. ಈ ವೇಳೆ ಎದುರಾದ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ ಕುಮಾರ್‌ ಅವರನ್ನು ಐಶ್‌ ಪ್ರೀತಿಯಿಂದ ಮಾತನಾಡಿಸಿದ್ದರು. ಇದೇ ವೇಳೆ ಆರಾಧ್ಯಾ ಶಿವಣ್ಣನ ಕಾಲಿಗೆ ಎರಗಿ ಆಶೀರ್ವಾದ ಪಡೆದುಕೊಂಡಿದ್ದಳು. ಸೆಲೆಬ್ರಿಟಿ ಮಗಳಾಗಿದ್ದರೂ ಯಾವುದೇ ಅಹಂ ತೋರದೆ ವಿನಯದಿಂದ ನಡೆದುಕೊಂಡಿದ್ದು ಅನೇಕರುನ್ನು ಆಕರ್ಷಿಸಿತ್ತು. ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.
ಈ ಸುದ್ದಿಯನ್ನೂ ಓದಿ: : ಶಿವರಾಜ್‌ ಕುಮಾರ್‌ ಕಾಲಿಗೆ ನಮಸ್ಕರಿಸಿದ ಐಶ್ವರ್ಯಾ ರೈ ಪುತ್ರಿ ಆರಾಧ್ಯಾ ಬಚ್ಚನ್‌
