 : ರಸ್ತೆ ಬದಿಯ ವಡಾಪಾವ್‌ಗೆ ಮನಸೋತ ಹಿರಿಯ ನಟಿ ಶಬಾನಾ ಅಜ್ಮಿ
ಮುಂಬೈ: ಬೀದಿ ಬದಿಯ ಆಹಾರ ( ) ಎಲ್ಲರನ್ನೂ ಸೆಳೆಯುತ್ತದೆ. ಸೆಲೆಬ್ರಿಟಿಗಳು ಎಷ್ಟೇ ಡಯಟ್ ಮಾಡಿದರೂ ಕೆಲವೊಮ್ಮೆ ಬೀದಿ ಬದಿ ಆಹಾರ ನೋಡಿ ಸೋಲುತ್ತಾರೆ. ಹಿರಿಯ ನಟಿ ( ) ಶಬಾನಾ ಅಜ್ಮಿ ( ) ಅವರು ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ () ಪೋಸ್ಟ್‌ನಲ್ಲಿ ಬೀದಿ ಬದಿಯ ಆಹಾರ ಸೇವಿಸುತ್ತಿರುವ ಫೋಟೋವೊಂದನ್ನು ( ) ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿದೆ.
ಪುಣೆಯಿಂದ ಹಿಂದಿರುಗುತ್ತಿದ್ದ ಅವರು ತಮ್ಮ ಸಂಗಡಿಗರೊಂದಿಗೆ ಫುಡ್ ಕೋರ್ಟ್‌ನಲ್ಲಿ ಬ್ರೇಕ್ ತೆಗೆದುಕೊಂಡು ವಡಾಪಾವ್ ಮತ್ತು ಚಹಾ ಸವಿದಿರುವುದಾಗಿ ಹೇಳಿಕೊಂಡಿದ್ದಾರೆ.
ಈ ಕುರಿತು ಇನ್‌ಸ್ಟಾಗ್ರಾಮ್ ಮಾಹಿತಿ ಹಂಚಿಕೊಂಡಿರುವ ಅವರು, ಪುಣೆಯಿಂದ ಮನೆಗೆ ಹೋಗುವ ದಾರಿಯಲ್ಲಿ ಜನಪ್ರಿಯ ಆಹಾರ ಮಳಿಗೆ ಬಳಿ ಕೊಂಚ ಬ್ರೇಕ್ ತಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ.
ʼʼಪ್ರಯಾಣ ಸ್ಮರಣೀಯವಾಗಲು ಇಂತಹ ಉತ್ತಮ ಆಹಾರ ಲಭ್ಯವಾಗುವ ಸ್ಥಳಗಳಲ್ಲಿ ನಿಲ್ಲುವ ಅಗತ್ಯವಿದೆ. ಅದು ಬೀದಿ ಬದಿಯ ಸ್ಟಾಲ್‌ ಆಗಿರಲಿ, ಕುಟುಂಬ ನಡೆಸುವ ಸಣ್ಣ ಕ್ಯಾಂಟೀನ್ ಆಗಿರಲಿ ಅಥವಾ ಜನಪ್ರಿಯ ರೆಸ್ಟೋರೆಂಟ್ ಆಗಿರಲಿ. ರಸ್ತೆ ಪ್ರಯಾಣದಿಂದ ವಿರಾಮ ಪಡೆಯಲು ಬಿಸಿ ಮತ್ತು ಫ್ರಶ್ ಆಗಿರುವ ಖಾದ್ಯ ಸವಿಯುವುದು ಯಾವಾಗಲೂ ಸಂತೋಷ ಕೊಡುತ್ತದೆʼʼ ಎಂದು ಅವರು ಹೇಳಿದ್ದಾರೆ.
ಅಲ್ಲದೇ ಇದು ಸ್ಥಳೀಯ ಖಾದ್ಯಗಳನ್ನು ಅನ್ವೇಷಿಸಲು ಉತ್ತಮ ಅವಕಾಶಕೊಡುತ್ತದೆ ಎಂದು ತಿಳಿಸಿದ್ದಾರೆ. ಪುಣೆಯಿಂದ ಹಿಂದಿರುಗುವಾಗ ತಾವು ಬೀದಿ ಬದಿಯಲ್ಲಿ ಸಿಗುವ ಮೆಚ್ಚಿನ ವಡಾಪಾವ್ ಸವಿದಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ಕಮೆಂಟ್‌ಗಳೂ ಬಂದಿವೆ.
ನೆಟ್ಟಿಗರ ಮೆಚ್ಚುಗೆ
ಕಮೆಂಟ್ ವಿಭಾಗದಲ್ಲಿ ಒಬ್ಬರು, ತಮಗೆ ತಿಳಿದಿರುವಂತೆ ಈ ತಾಣವು ಮಹಾರಾಷ್ಟ್ರದ ಅತ್ಯುತ್ತಮ ಆಹಾರ ಆಯ್ಕೆಗಳನ್ನು ಹೊಂದಿದೆ. ಹೀಗಾಗಿ ಶಬಾನಾ ಅಜ್ಮಿ ಸರಿಯಾದ ಆಯ್ಕೆ ಮಾಡಿದಂತಿದೆ ಎಂದು ಹೇಳಿದ್ದಾರೆ.
      (@azmishabana18)
ಶಬಾನಾ ಅವರ ಜತೆಗೆ ‘ಕೈಫಿ ಔರ್ ಮೈನ್’ ತಂಡದ ಕೆಲವರು ಇರುವುದನ್ನು ಫೋಟೋದಲ್ಲಿ ಕಾಣಬಹುದು. ಇದಕ್ಕೂ ಮೊದಲು ಶಬಾನಾ ಅಜ್ಮಿ ತಮ್ಮ ನ್ಯೂಯಾರ್ಕ್ ಪ್ರವಾಸದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದರು. ಅಲ್ಲಿ ಅವರು ಭಾರತೀಯ ಬಾಣಸಿಗ ವಿಕಾಸ್ ಖನ್ನಾ ಅವರ ರೆಸ್ಟೋರೆಂಟ್, ಬಂಗಲೆಗೆ ಭೇಟಿ ನೀಡಿದ್ದಾಗಿ ಹೇಳಿಕೊಂಡಿದ್ದರು.
 : ಹೊಲದಲ್ಲಿ ಭತ್ತ ನಾಟಿ ಮಾಡುತ್ತಿರುವ ರೊಬೊಟ್‌; ವೈರಲ್ ಆದ ವಿಡಿಯೊದಲ್ಲೇನಿದೆ?
ವಿಕಾಸ್ ಸಹ ಈ ಕುರಿತು ವಿಡಿಯೋ ಹಂಚಿಕೊಂಡಿದ್ದರು. ಶಬಾನಾ ಅಜ್ಮಿ ಅವರು ನಗರದಲ್ಲಿ ತಮ್ಮ ಹುಟ್ಟುಹಬ್ಬ ಆಚರಣೆ ನಡೆಸಿದರು. ವಿಡಿಯೋದಲ್ಲಿ ಶಬಾನಾ ಅಜ್ಮಿ ಅವರು ರೆಸ್ಟೋರೆಂಟ್ ನಲ್ಲಿ ಸಾಮಾನ್ಯ ಕೇಕ್ ಬದಲಿಗೆ ರುಚಿಕರವಾಗಿ ಕಾಣುವ ಭಕ್ಷ್ಯವನ್ನು ಕತ್ತರಿಸುವುದನ್ನು ಕಾಣಬಹುದು. ಅವರ ಸಂಗಡಿಗರು “ಹ್ಯಾಪಿ ಬರ್ತ್‌ಡೇ” ಎಂದು ಹಾಡಿರುವುದನ್ನು ಕೇಳಬಹುದು.