 2   : ಬಾಲಿವುಡ್‌ನಲ್ಲಿ ದಾಖಲೆ ಬರೆದ ʼಸ್ತ್ರೀ 2ʼ; 600 ಕೋಟಿ ರೂ. ಗಳಿಸಿದ ಮೊದಲ ಹಿಂದಿ ಚಿತ್ರ
ಮುಂಬೈ:ಬಾಲಿವುಡ್‌ನ ಶ್ರದ್ಧಾ ಕಪೂರ್ ( ) ಮತ್ತು ರಾಜ್‌ಕುಮಾರ್ ರಾವ್ ( ) ಅಭಿನಯದ ಹಾರರ್‌, ಕಾಮಿಡಿ ಚಿತ್ರ ʼಸ್ತ್ರೀ 2ʼ ( 2) ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ ( 2   ). ಆಗಸ್ಟ್ 15ರಂದು ರಿಲೀಸ್ ಆದ ಈ ಚಿತ್ರ ಈಗಲೂ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದ್ದು, 40 ದಿನಗಳಲ್ಲಿ ಬರೋಬ್ಬರಿ 600 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿದೆ. ಆ ಮೂಲಕ 600 ಕೋಟಿ ರೂ. ಗಳಿಸಿದ ಮೊದಲ ಹಿಂದಿ ಸಿನಿಮಾ ಎನಿಸಿಕೊಂಡಿದೆ.
ಸಿನಿಮಾ ತೆರೆಕಂಡ 40ನೇ ದಿನವಾರ ಸೆಪ್ಟೆಂಬರ್‌ 23ರಂದು ʼಸ್ತ್ರೀ 2ʼ ಒಟ್ಟು 1.50 ಕೋಟಿ ರೂ. ಗಳಿಸುವ ಮೂಲಕ 600 ಕೋಟಿ ರೂ.ಯ ಗಡಿ ದಾಟಿತು. ಶನಿವಾರ, ಭಾನುವಾರ ಚಿತ್ರ ಕ್ರಮವಾಗಿ 3.80 ಕೋಟಿ ರೂ. ಮತ್ತು 5.32 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಆ ಮೂಲಕ ಇದುವರೆಗೆ 605.72 ಕೋಟಿ ರೂ. ಬಾಚಿಕೊಂಡಿದೆ.
' 600 …#Stree2creates    *#*    …    -,          ,#Stree2is      .      …../
ಶಾರೂಖ್‌, ರಣಬೀರ್‌ ದಾಖಲೆ ಉಡೀಸ್‌
ಈ ಮೊದಲು ರಿಲೀಸ್ ಆದ ಶಾರುಖ್ ಖಾನ್ ನಟನೆಯ ‘ಪಠಾಣ್’, ಸನ್ನಿ ಡಿಯೋಲ್ ನಟನೆಯ ‘ಗಧರ್ 2’, ರಣಬೀರ್‌ ಕಪೂರ್‌ ಅಭಿನಯದ ʼಅನಿಮಲ್‌ʼ ಮೊದಲಾದ ಚಿತ್ರಗಳು 500 ಕೋಟಿ ರೂಪಾಯಿ ಕ್ಲಬ್ ಸೇರಿವೆ. ಆದರೆ ಇದೇ ಮೊದಲ ಬಾರಿ ʼಸ್ತ್ರೀ 2′ 600 ಕೋಟಿ ರೂ. ಮೈಲಿಗಲ್ಲು ದಾಟಿದೆ. ಸುಮಾರು 60 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಇದು ಸುಮಾರು 10 ಪಟ್ಟು ಅಧಿಕ ಕಲೆಕ್ಷನ್‌ ಮಾಡುವ ಮೂಲಕ ಅತೀ ಹೆಚ್ಚು ಲಾಭ ಗಳಿಸಿದ ಚಿತ್ರಗಳ ಸಾಲಿನಲ್ಲಿಯೂ ಗುರುತಿಸಿಕೊಂಡಿದೆ. ಅಲ್ಲದೆ ಇದು 2024ರ ಅತ್ಯಂತ ಲಾಭದಾಯಕ ಚಿತ್ರ ಮತ್ತು 500 ಕೋಟಿ ರೂ. ಗಿಂತ ಹೆಚ್ಚು ಆದಾಯ ಪಡೆದ ಏಕೈಕ ಹಿಂದಿ ಚಲನಚಿತ್ರವಾಗಿ ಹೊರಹೊಮ್ಮಿದೆ.
ಅಮರ್‌ ಕೌಶಿಕ್‌ ನಿರ್ದೇಶನದ ಈ ಚಿತ್ರದಲ್ಲಿ ಕಾಮಿಡಿ, ಹಾರರ್‌ ಹದವಾಗಿ ಬೆರೆತಿದ್ದು ನೋಡುಗರ ಗಮನ ಸೆಳೆಯುತ್ತಿದೆ. 2018ರಲ್ಲಿ ತೆರೆಕಂಡ ʼಸ್ತ್ರೀʼ ಚಿತ್ರದ ಮೂಲಕ ಅಮರ್‌ ಕೌಶಿಕ್‌ ಬಾಲಿವುಡ್‌ ಪ್ರವೇಶಿಸಿದ್ದರು. ಇದರಲ್ಲಿಯೂ ರಾಜ್‌ ಕುಮಾರ್‌ ರಾವ್‌ ಮತ್ತು ಶ್ರದ್ಧಾ ಕಪೂರ್‌ ಅಭಿನಯಿಸಿದ್ದರು. ಸುಮಾರು 25 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ 180 ಕೋಟಿ ರೂ. ಗಳಿಸಿತ್ತು. ಇದು ಕೂಡ ಹಾರರ್‌-ಕಾಮಿಡಿ ಕಥಾ ಹಂದರವನ್ನು ಒಳಗೊಂಡಿತ್ತು. ಬಳಿಕ ʼಬಾಲʼ, ʼಭೇಡಿಯಾʼ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ಅವರು ʼಸ್ತ್ರೀʼ ಸಿನಿಮಾದ ಮುಂದುವರಿದ ಭಾಗವಾದ ʼಸ್ತ್ರೀ 2ʼಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಪಂಕಜ್‌ ತ್ರಿಪಾಠಿ, ಅಭಿಷೇಕ್‌ ಬ್ಯಾನರ್ಜಿ, ಸುನೀತಾ ರಾಜ್ವಾರ್‌ ಮತ್ತಿತರರು ಇದರ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ʼಸ್ತ್ರೀ  3ʼ ಚಿತ್ರದ ಘೋಷಣೆಯಾಗಿದೆ.
ಈ ಸುದ್ದಿಯನ್ನೂ ಓದಿ: 2: ಕೆಜಿಎಫ್ ದಾಖಲೆ ಮುರಿದ ಸ್ತ್ರೀ 2: 32 ನೇ ದಿನ ದಿನದ ಕಲೆಕ್ಷನ್ ಎಷ್ಟು ಗೊತ್ತೇ?