ತನಿಖೆ ನಡೆಯುತ್ತಿರುವುದರಿಂದ ಏನನ್ನೂ ಹೇಳಲ್ಲ: ಹ್ಯಾಟ್ರಿಕ್ ಹೀರೋ ಶಿವಣ್ಣ
ಬೆಂಗಳೂರು:ರಾಗಿಣಿ, ಸಂಜನಾ ಅರೆಸ್‌ಟ್‌ ಬಗ್ಗೆೆ ಏನೂ ಹೇಳಲ್ಲ. ಡ್ರಗ್‌ಸ್‌ ಕನ್ನಡ ಚಿತ್ರರಂಗದಲ್ಲಿ ಮಾತ್ರವೇ ಅಲ್ಲ. ಎಲ್ಲ ಕ್ಷೇತ್ರದಲ್ಲೂ ಡ್ರಗ್ ಜಾಲ ಇದೆ. ಇಡೀ ದೇಶ, ಇಡೀ ಜಗತ್ತಿಗೇ ಡ್ರಗ್‌ಸ್‌ ಮಾರಕ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬುಧವಾರ ಹೇಳಿದರು.
ಕೊರೊನಾದಿಂದಾಗಿ ಕನ್ನಡ ಚಿತ್ರರಂಗ ಸಂಕಷ್ಟದಲ್ಲಿದ್ದು, ವಿಶೇಷ ಪ್ಯಾಕೇಜ್ ಘೋಷಿಸುವಂತೆ ನಟ ಶಿವರಾಜ್ ಕುಮಾರ್ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿತು.
ಇದೇ ವೇಳೆ, ಮಾಧ್ಯಮವನ್ನುದ್ದೇಶಿ ಮಾತನಾಡಿ, ಪ್ರಶ್ನೆೆಯೊಂದಕ್ಕೆೆ ಉತ್ತರಿಸುತ್ತ, ಡ್ರಗ್‌ಸ್‌ ನಮ್ಮ ದೇಶಕ್ಕೆೆ ಮಾರಕವಾದ ಪಿಡುಗು. ಯುವಕರು, ಯುವತಿಯರ ಮೇಲೆ ಪರಿಣಾಮ ಬೀರುತ್ತಿದೆ. ಎಲ್ಲಕ್ಕೂ ದೇವರಿದ್ದಾನೆ, ಏನಾಗುತ್ತೋ ನೋಡೋಣ ಎಂದು ಹೇಳಿದರು. ನಿಯೋಗದಲ್ಲಿದ್ದ ರಾಕಿಂಗ್ ಸ್ಟಾರ್ ಯಶ್, ದುಶ್ಚಟಗಳನ್ನು ಬಿಡಲು ಯುವಕರಿಗೆ ಕರೆ ನೀಡಿದರು.