ಮಾದಕ ನಟಿ ಪೂನಂ ಪಾಂಡೆ ಪತಿ ಬಂಧನ
ಮುಂಬೈ:ಮಾದಕ ನಟಿ ಪೂನಂ ಪಾಂಡೆಯವರನ್ನು ಶೋಷಣೆ ಮಾಡಿದ,  ಮಾನಸಿಕ ಹಿಂಸೆ ನೀಡಿದ ಆರೋಪಕ್ಕಾಗಿ, ಪತಿ ಸ್ಯಾಮ್ ಬೊಂಬೆಯವರನ್ನು ಗೋವಾದಲ್ಲಿ ಬಂಧಿಸಲಾಗಿದೆ.
ದಕ್ಷಿಣ ಗೋವಾದ ಕಾಕಾನೋವಾ ಗ್ರಾಮದಲ್ಲಿ ಪೂನಂ ಪಾಂಡೆ ಶೂಟಿಂಗ್ ನಲ್ಲಿ ನಿರತರಾಗಿದ್ದ ಸಂದರ್ಭ, ಆಕೆಯ ಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪತಿ ತನಗೆ ನೀಡುತ್ತಿರುವ ಮಾನಸಿಕ ಕಿರುಕುಳದ ಕುರಿತು ಪೂನಂ ಕಳೆದ ಸೋಮವಾರ ರಾತ್ರಿಯೇ  ದೂರು ನೀಡಿದ್ದಳು. ಬಳಿಕ ಇನ್ಸ್’ಪೆಕ್ಟರ್ ತುಕಾರಾಮ್‍ ಚವನ್ ಸ್ಯಾಮ್ ರನ್ನುಬಂಧಿಸಿದ್ದಾರೆ.