  : ಮಡೆನೂರ್ ಮನು ಅಭಿನಯದ “ಕೇದಾರ್ ನಾಥ್ ಕುರಿಫಾರಂ” ಚಿತ್ರ ಈ ವಾರ ತೆರೆಗೆ
ಬೆಂಗಳೂರು:ಜೆ.ಕೆ. ಮೂವೀಸ್ ಲಾಂಛನದಲ್ಲಿ ಕೆ.ಎಂ. ನಟರಾಜ್ ಅವರು ನಿರ್ಮಿಸಿರುವ, ಶೀನು ಸಾಗರ್ ನಿರ್ದೇಶನದಲ್ಲಿ “ಕಾಮಿಡಿ ಕಿಲಾಡಿಗಳು” ಖ್ಯಾತಿಯ ಮಡೆನೂರ್ ಮನು ( ) ನಾಯಕನಾಗಿ ನಟಿಸಿರುವ “ಕೇದಾರ್ ನಾಥ್ ಕುರಿಫಾರಂ” ಚಿತ್ರ (   ) ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಟ್ರೇಲರ್ ಹಾಗೂ ಹಾಡುಗಳ ಮೂಲಕ ಈ ಚಿತ್ರ (  ) ಈಗಾಗಲೇ ಜನಪ್ರಿಯವಾಗಿದೆ.
ಗ್ರಾಮೀಣ ಸೊಗಡಿನ ಹಾಗೂ ಕಾಮಿಡಿ ಜಾನರ್ ನ ಈ ಚಿತ್ರಕ್ಕೆ ರಾಜೇಶ್ ಸಾಲುಂಡಿ ಕಥೆ, ಸಂಭಾಷಣೆ ಬರೆದಿದ್ದು, ಚಿತ್ರಕಥೆಯನ್ನು ನಿರ್ದೇಶಕ ಶೀನು ಸಾಗರ್ ಅವರೆ ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ | : ರಾಜ್ಯದ ಅಭಿವೃದ್ಧಿಯೇ ಕ್ವಿನ್ ಸಿಟಿ ಯೋಜನೆಯ ಮೂಲ ಆಶಯ: ಡಿಸಿಎಂ ಡಿ.ಕೆ.ಶಿವಕುಮಾರ್
ರಾಕೇಶ್ ತಿಲಕ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ಸನ್ನಿ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಮಡೆನೂರ್ ಮನು, ಶಿವಾನಿ, ಕರಿಸುಬ್ಬು, ಟೆನ್ನಿಸ್ ಕೃಷ್ಣ, ಮುತ್ತು ಮುಂತಾದವರಿದ್ದಾರೆ.