ನಾಳೆ ’ತೇರಿ ಆಂಖೋ ಮೆ’ ಟೀಸರ್‌ ರಿಲೀಸ್
ಮುಂಬೈ:ನಟಿ ದಿವ್ಯಾ ಖೋಸ್ಲಾ ಕುಮಾರ್‌ ಅವರ ಟಿ-ಸಿರೀಸ್ ತೇರಿ ಆಂಖೋ ಮೇ ಟೀಸರ್‌ ಅ.7ರಂದು ರಿಲೀಸ್ ಆಗುತ್ತಿದೆ.
ಉತ್ತಮ ಮೆಲೋಡಿಯಸ್‌ ಟ್ರ‍್ಯಾಕ್, ಹದಿಹರೆಯದ ಹೃದಯಕ್ಕೆ ತಟ್ಟುವ ಲಿರಿಕ್ಸ್‌ ಮತ್ತು ಎಮೋಷನ್‌ ಗಳು ಈ ಹಾಡಿನಲ್ಲಿದೆ. ದರ್ಶನ್‌ ರಾವಲ್ ಮತ್ತು ಕೆಜಿಎಫ್ ಖ್ಯಾತಿಯ ನೇಹಾ ಕಕ್ಕರ್‌ ಈ ಹಾಡಿಗೆ ದನಿ ನೀಡಿದ್ದಾರೆ. ದಿವ್ಯಾ ಖೋಸ್ಲಾ ಕುಮಾರ್‌ ನಟಿಸಿ ದ್ದಾರೆ.
ಭಾರೀ ಮಳೆಯ ಸನ್ನಿವೇಶವೊಂದರಲ್ಲಿ ಹುಡುಗ ಓರ್ವ ಹುಡುಗಿಯನ್ನು ರಾತ್ರಿ ವೇಳೆ ಭೇಟಿಯಾಗುವ ದೃಶ್ಯವಿದೆ. ಬಳಿಕ ನಡೆ ಯುವ ಘಟನೆ ಯೊಂದರಿಂದ ಇಬ್ಬರಲ್ಲೂ ಮನಸ್ತಾಪ ಬೆಳೆಯುತ್ತದೆ. ಮುಂದೆ ಏನು ನಡೆಯುತ್ತದೆ ಎಂಬುದನ್ನು ತಿಳಿಯಲು ಟೀಸರ್‌ ಅನ್ನು ಸಂಪೂರ್ಣವಾಗಿ ವೀಕ್ಷಿಸಬೇಕು.
ಕಳೆದ ಬಾರಿ ಯಾದ್‌ ಪಿಯಾ ಕಿ ಆನೆ ಲಗಿ ಹಾಡನಲ್ಲಿ ದಿವ್ಯಾ ನಟಿಸಿದ್ದರು. ಕಾಸ್ಟೂಮ್ಸ್ ಡಿಫರೆಂಟ್ ಆಗಿದೆ ದಿವ್ಯಾರದ್ದು. ಮನನ್‌ ಭಾರದ್ವಾಜ್‌ ಸಂಗೀತ ನೀಡಿದ್ದು, ಹಾಡನ್ನು ಕುಮಾರ್‌ ಬರೆದಿದ್ದಾರೆ. ರಾಧಿಕಾ ರಾವ್ ಮತ್ತು ವಿನಯ್‌ ಸಪ್ರು ನಿರ್ದೇಶನ ನೀಡಿದ್ದಾರೆ.