 : ಕಿರಣ್ ರಾಜ್ ಅಭಿನಯದ “ರಾನಿ” ಚಿತ್ರ 3ನೇ ವಾರವೂ ಯಶಸ್ವಿ ಪ್ರದರ್ಶನ
ಬೆಂಗಳೂರು:ಕನ್ನಡ ಸಿನಿಮಾಗಳು ( ) ಹೆಚ್ಚು ಓಡುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿರುವ ಈ ಸಮಯದಲ್ಲಿ “ರಾನಿ” ( ) 3ನೇ ವಾರಕ್ಕೆ ಕಾಲಿಟ್ಟಿದ್ದಾನೆ. ಗಟ್ಟಿ ಕತೆ ಹೊಸತನದ ಚಿತ್ರಕಥೆ ಅದ್ಭುತ ಮೇಕಿಂಗ್‌ನಿಂದ “ರಾನಿ” ಸದ್ದು ಮಾಡಿದ್ದಾನೆ, ಪ್ರೇಕ್ಷಕರ ಮನ ಗೆದ್ದಿದ್ದಾನೆ. ಯಶಸ್ವಿಯಾಗಿ 3ನೇ ವಾರಕ್ಕೆ ಪ್ರವೇಶಿಸಿದ್ದಾನೆ. 25 ದಿನ ಪೂರೈಸುವ ಸೂಚನೆಯನ್ನೂ ನೀಡಿದ್ದಾನೆ.
ಈ ಸುದ್ದಿಯನ್ನೂ ಓದಿ |   2024: ಇಂದು ವಿಶ್ವ ಪ್ರವಾಸೋದ್ಯಮ ದಿನ; ಮೊಬೈಲ್ ನೆಟ್‌‌ವರ್ಕ್ ಇಲ್ಲದ  ಅದ್ಭುತ ಪ್ರವಾಸಿ ಸ್ಥಳಗಳಿವು!
ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಕಿರಣ್ ರಾಜ್ ( ) ನಾಯಕನಾಗಿ ನಟಿಸಿರುವ, ಗುರುತೇಜ್ ಶೆಟ್ಟಿ ನಿರ್ದೇಶನದ ಹಾಗೂ ಸ್ಟಾರ್ ಕ್ರಿಯೇಷನ್ಸ್ ನಿರ್ಮಾಣದ ʼರಾನಿʼ ( ) ಸಿನಿಮಾ ಯಶಸ್ವಿ ಪ್ರದರ್ಶನವಾಗುತ್ತಿದೆ. ಮುಖ್ಯ ಚಿತ್ರ ಕೆ.ಜಿ ರಸ್ತೆಯ ಅನುಪಮ, ಮಲ್ಟಿಪ್ಲೆಕ್ಸ್ ಹಾಗೂ ರಾಜ್ಯಾದ್ಯಂತ ಬಿ.ಸಿ ಸೆಂಟರ್‌ಗಳಲ್ಲಿ 3ನೇ ವಾರವೂ ಅದ್ಭುತ ಪ್ರದರ್ಶನ ಕಾಣುತ್ತಿದೆ.
ಈ ಸುದ್ದಿಯನ್ನೂ ಓದಿ | : ಬೂಟ್‌ ಕಟ್‌ ಪ್ಯಾಂಟ್‌ ಕೋ ಆರ್ಡ್ ಸೆಟ್‌! ನಟಿ ಸಮಂತಾ ಧರಿಸಿದ್ದ ಈ ಡ್ರೆಸ್ ನೀವೂ ಧರಿಸಲು ಇಲ್ಲಿದೆ ಟಿಪ್ಸ್
ಇನ್ನು ಚಿತ್ರ ತಂಡವು ಚಿತ್ರ ಮಂದಿರಗಳಿಗೆ ಭೇಟಿ ನೀಡುತ್ತಿದೆ. ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ ಖುಷಿಯಾಗಿದೆ ಎಂದು “ರಾನಿ” ಚಿತ್ರತಂಡ ತಿಳಿಸಿದೆ.