   11: ಬಿಗ್ ಬಾಸ್ ಮನೆಗೆ ಹರಿಪ್ರಿಯಾ ಹೋಗ್ತಾರಾ? ನಟಿ ಹೇಳಿದ್ದೇನು?
ಬೆಂಗಳೂರು: ನಟಿ ಹರಿಪ್ರಿಯಾ ( ) ಈ ಬಾರಿಯ ಕನ್ನಡ ಬಿಗ್‌ಬಾಸ್‌ ಶೋದಲ್ಲಿ (   11) ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿಯಾಗ್ತಿದೆ. ಇದಕ್ಕೆ ಕಾರಣ ಕಲರ್ಸ್ ಕನ್ನಡ ವಾಹಿನಿ ( ) ನೀಡಿರುವ ಪ್ರೋಮೋದಲ್ಲಿರುವ ಅಸ್ಪಷ್ಟ ಇಮೇಜ್‌ಗಳು. ಇವುಗಳಲ್ಲಿ ಒಂದು ಹರಿಪ್ರಿಯಾ ಥರ ಕಾಣಿಸಿದ್ದು, ಆಕೆ ಬಿಗ್‌ಬಾಸ್‌ (    11) ಮನೆಗೆ ಹೋಗ್ತಾರೆ ಎಂದು ಸುದ್ದಿಯಾಗಿದೆ.
ಪ್ರತಿ ಬಾರಿಯೂ ‘ಬಿಗ್ ಬಾಸ್‌ ಕನ್ನಡ’ ರಿಯಾಲಿಟಿ ಶೋ ಆರಂಭವಾಗುವ ವೇಳೆಗೆ ಈ ವಿಚಾರವಾಗಿ ಸಾಕಷ್ಟು ಸುದ್ದಿ ಹರಿದಾಡುತ್ತದೆ. ಬಿಗ್ ಬಾಸ್ ಮನೆಗೆ ಈ ಸಲ ಯಾರೆಲ್ಲಾ ಹೋಗ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತವೆ. ಸೆ.29ರಂದು ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭವಾಗಲಿದೆ. ಅಂದು ಸ್ಪರ್ಧಿಗಳ ಹೆಸರು ಬಹಿರಂಗವಾಗಲಿದೆ. ಅದಕ್ಕೂ ಮುನ್ನವೇ ಹಲವು ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಹರಿದಾಡುತ್ತಿದೆ. ಅದರಲ್ಲಿ ನಟಿ ಹರಿಪ್ರಿಯಾ ಸಿಂಹ ಅವರ ಹೆಸರು ಕೂಡ ಇದೆ.
ಇಲ್ಲಪ್ಪಾ ಇಲ್ಲ ..!!ನನಗೆ ನಾನೆ ಬಾಸು, ನಾನು ನಮ್ಮ ಮನೆ ಬಿಟ್ಟು ಯಾವ್ ಮನೆಗು ಹೋಗ್ತಿಲ್ಲ..😌🙏🏻
ಆದರೆ ನಿಜಕ್ಕೂ ಹರಿಪ್ರಿಯಾ ಬಿಗ್ ಬಾಸ್‌ ಮನೆಗೆ ಹೋಗ್ತಾರಾ? ಸ್ವತಃ ಈ ವಿಚಾರದ ಬಗೆಗೆ ನಟಿ ಹರಿಪ್ರಿಯಾ ಅವರೇ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಹರಿಪ್ರಿಯಾ ಅವರು, “ಇಲ್ಲಪ್ಪಾ ಇಲ್ಲ .. ನನಗೆ ನಾನೇ ಬಾಸು, ನಾನು ನಮ್ಮ ಮನೆ ಬಿಟ್ಟು ಯಾವ್ ಮನೆಗೂ ಹೋಗ್ತಿಲ್ಲ..” ಎಂದು ಬರೆದುಕೊಂಡಿದ್ದಾರೆ. ಹೀಗೆ ಈ ಬಾರಿ ‘ಬಿಗ್ ಬಾಸ್’ ಶೋಗೆ ತಾನು ಹೋಗುತ್ತಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ.
ಇದಕ್ಕೆ ಕೆಲವರು ಕಾಮೆಂಟ್‌ನಲ್ಲಿ “ಹೋಗೀಪಾ, ಮಜಾ ಇರುತ್ತೆ” “ನೀವು ಹೋಗ್ತೀನಿ ಅಂದ್ರೂ ಸಿಂಹದ ಗುಹೆಯಿಂದ ತಪ್ಪಿಸಿಕೊಂಡು ಹೋಗೋಕೆ ಆಗಲ್ವಲ್ಲಾ!” ಎಂದೆಲ್ಲ ಪ್ರತಿಕ್ರಿಯಿಸಿದ್ದಾರೆ.
‘ಬಿಗ್ ಬಾಸ್ ಕನ್ನಡ 11’ ಶೋಗೆ ಕೆಲವೇ ದಿನಗಳು ಬಾಕಿ ಇವೆ. ಆ ಹಿನ್ನೆಲೆಯಲ್ಲಿ ಬಿಗ್ ಬಾಸ್ ಕುರಿತ ಕೆಲವು ಪ್ರೋಮೋಗಳನ್ನು ಕಲರ್ಸ್ ಕನ್ನಡ ವಾಹಿನಿ ರಿಲೀಸ್ ಮಾಡಿದೆ. ಅದರಲ್ಲಿ ಒಂದು ಪ್ರೋಮೋ ಬಹಳ ಕುತೂಹಲ ಮೂಡಿಸಿದೆ. ಅದರಲ್ಲಿ ನಟ-ನಟಿಯರ ಫೋಟೋಗಳನ್ನು ಬಳಕೆ ಮಾಡಲಾಗಿದೆ. ಅಸ್ಪಷ್ಟವಾಗಿರುವ ಫೋಟೋಗಳನ್ನು ಮಾತ್ರ ಪ್ರೋಮೋದಲ್ಲಿ ತೋರಿಸಲಾಗಿದೆ. ಇದರಲ್ಲಿ ಒಂದು ಫೋಟೋ ನಟಿ ಹರಿಪ್ರಿಯಾ ಅವರಿಗೆ ಹೋಲಿಕೆ ಇದೆ ಎಂದು ಈ ಗಾಸಿಪ್‌ ಸೃಷ್ಟಿಯಾಗಿದೆ.
ಹರಿಪ್ರಿಯಾ ಜೊತೆಗೆ ನಭಾ ನಟೇಶ್, ಭಾವನಾ ಮೆನನ್, ಕಿರಣ್ ರಾಜ್, ಪ್ರೇಮಾ ಮುಂತಾದವರ ಹೆಸರುಗಳು ಕೂಡ ಈ ವದಂತಿಯಲ್ಲಿ ಇವೆ. ಇವು ನಿಜವೋ ಸುಳ್ಳೋ ಎಂಬುದು ಇಷ್ಟರಲ್ಲೇ ಗೊತ್ತಾಗಲಿದೆ. ಹರಿಪ್ರಿಯಾ ಈಗ ಹೀಗೆ ಹೇಳಿಕೊಂಡಿದ್ದರೂ, ನಾಡಿದು ಬಿಗ್‌ ಬಾಸ್‌ ಮನೆಯಲ್ಲಿ ಪ್ರತ್ಯಕ್ಷವಾಗುವ ಸಾಧ್ಯತೆ ಇಲ್ಲದಿಲ್ಲ.
ಇದನ್ನೂ ಓದಿ:ಸುದೀಪ್‌ ಮನೆಯಲ್ಲಿ ಬಿಗ್‌ಬಾಸ್‌ ಬಗ್ಗೆ ಮಾತಾಡಲ್ಲ ಯಾಕೆ? ಸಂಭಾವನೆ ಎಷ್ಟು? ಅಪರೂಪದ ಸೀಕ್ರೆಟ್‌ ರಿವೀಲ್‌