ʼತಾಂಡವ್‌ʼ ವೆಬ್‌ ಸೀರೀಸ್‌: ಕಂಗನಾ ಟ್ವೀಟ್‌ ಸದ್ದು
ನಬದೆಹಲಿ:ಬಾಲಿವುಡ್‌ ನಟಿ ಕಂಗನಾ ರಣಾವತ್‌ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ʼತಾಂಡವ್‌ʼ ವೆಬ್‌ ಸೀರೀಸ್‌ ಕುರಿತು ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಹಿಂಸೆಗೆ ಕರೆ ನೀಡಿದ ಕಂಗನಾ ಟ್ವೀಟ್‌ ಸದ್ದು ಮಾಡಿದೆ.
‘ಭಗವಾನ್‌ ಕೃಷ್ಣ ಶಿಶುಪಾಲ ಮಾಡಿದ್ದ 99 ಪಾಪಗಳನ್ನು ಕ್ಷಮಿಸಿದ್ದರೂ ಕೂಡಾ..ಮೊದಲು ಶಾಂತಿ ನಂತರ ಕ್ರಾಂತಿಯಾಗಬೇಕು. ಅವರ ತಲೆಗಳನ್ನು ಕತ್ತರಿಸುವ ಸಮಯವಾಗಿದೆ, ಜೈ ಶ್ರೀ ಕೃಷ್ಣ’ ಎಂದು ಅತುಲ್‌ ಮಿಶ್ರಾ ಎಂಬ ಟ್ವಿಟರ್‌ ಬಳಕೆದಾರನ ಟ್ವೀಟ್‌ ಗೆ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿ ಟ್ವೀಟ್‌ ಮಾಡಿದ್ದು, ಬಳಿಕ ಅದನ್ನು ಡಿಲೀಟ್‌ ಮಾಡಿದ್ದಾರೆ.
ಆನ್‌ ಲೈನ್‌ ಕಿರುಕುಳ, ನಿಂದನೆಗಳನ್ನು ತಡೆಯುವ ʼಟೀಮ್‌ ಸಾತ್‌ʼಸಂಘಟನೆಯು ಕಂಗನಾರ ಈ ಟ್ವೀಟ್‌ ಅನ್ನು ಸ್ಕ್ರೀನ್‌ ಶಾಟ್‌ ನೊಂದಿಗೆ ಹಂಚಿಕೊಂಡಿದೆ. ಇನ್ನು ಹಲವಾರು ಟ್ವಿಟರ್‌ ಬಳಕೆದಾರರು ಕೂಡಾ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.