ಸೈನಾ ನೆಹ್ವಾಲ್‌ರ ಜೀವನಗಾಥೆ ’ಸೈನಾ’ ಸಿನೆಮಾ ಇಂದು ರಿಲೀಸ್‌
ಮುಂಬೈ :ಖ್ಯಾತ ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೇಹ್ವಾಲ್ ಅವರ ಜೀವನಗಾಥೆ ‘ಸೈನಾ’ ಶುಕ್ರವಾರ ಬಿಡುಗಡೆಗೊಂಡಿದೆ.
ನಟಿ ಪರಿಣೀತಿ ಚೋಪ್ರಾ ಅವರನ್ನು ಮುಖ್ಯ ಪಾತ್ರದಲ್ಲಿ ನೋಡಬಹುದು.
‘ತಾರೆ ಜಮೀನ್ ಪರ್​’, ‘ಹವಾ ಹವಾಯಿ’ ಚಿತ್ರ ಖ್ಯಾತಿಯ ಅಮೋಲ್ ಗುಪ್ತೆ ಈ ಚಿತ್ರಕ್ಕೆ ಚಿತ್ರಕಥೆ ಒದಗಿಸಿ, ನಿರ್ದೇಶನ ನೀಡಿದ್ದಾರೆ. ಈ ಚಿತ್ರದಲ್ಲಿ ಮಾನವ್​ ಕೌಲ್ ಸೈನಾರ ಕೋಚ್ ಪಾತ್ರ ವಹಿಸಿದ್ದಾರೆ. ಈಶಾನ್ ನಖ್ವಿ ಮತ್ತು ಮೇಘನಾ ಮಲಿಕ್ ಕೂಡ ನಟಿಸಿ ದ್ದಾರೆ.
ಜಿಲ್ಲಾ ಮಟ್ಟದ ಬಾಡ್ಮಿಂಟನ್ ಆಟಗಾರ್ತಿಯಾಗಿದ್ದ ಸೈನಾರ ತಾಯಿ ಉಷಾರಾಣಿ ಅವರ ಪಾತ್ರಕ್ಕೆ ಹೆಚ್ಚಿನ ಮನ್ನಣೆ ಸಿಕ್ಕಿದೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ
://../