ಕಣ್ಸನ್ನೆ ಬೆಡಗಿ ಪ್ರಿಯಾ ಅಭಿನಯದ ’ವಿಷ್ಣುಪ್ರಿಯ’ ಚಿತ್ರದ ಟ್ರೇಲರ್‌ ಮಾ.29ರಂದು ರಿಲೀಸ್
ಬೆಂಗಳೂರು:ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್‌ ಅಭಿನಯದ “ವಿಷ್ಣು ಪ್ರಿಯ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಮಾ. 29ರಂದು ಚಿತ್ರದ ಟ್ರೇಲರ್‌ ರಿಲೀಸ್‌ ಆಗಲಿದೆ.
ಇಂಟೆನ್ಸ್‌ ಲವ್‌ ಸ್ಟೋರಿಯಾಗಿದ್ದು, ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್‌ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಟಿಸಿದಂತಾಗಿದೆ. ನಿರ್ಮಾಪಕ ಕೆ.ಮಂಜು ಡಾ.ವಿಷ್ಣುವರ್ಧನ್‌ ಅವರ ಅಭಿಮಾನಿ.
ಅದೇ ಕಾರಣದಿಂದ ಮಗನ ಮೊದಲ ಚಿತ್ರ “ಪಡ್ಡೆಹುಲಿ’ ಯಲ್ಲೂ ವಿಷ್ಣುವರ್ಧನ್‌ ಅವರ ಸ್ಮರಣೆ ಮಾಡಿದ್ದರು. 25ಕ್ಕೂ ಹೆಚ್ಚು ಚಿತ್ರಗಳನ್ನು, ಹಲವು ಜಾಹೀರಾತುಗಳನ್ನು ನಿರ್ದೇಶಿಸಿರುವ ಮಲಯಾಳಂ ಮೂಲದ ನಿರ್ದೇಶಕ ವಿ.ಕೆ ಪ್ರಕಾಶ್‌, “ವಿಷ್ಣುಪ್ರಿಯ’ ಚಿತ್ರಕ್ಕೆ ಆಕ್ಷನ್‌-ಕಟ್‌ ಹೇಳಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ
://../
