ಇಂದಿನಿಂದ ದಕ್ಷಿಣ ಆಫ್ರಿಕಾ ಟಿ20 ಲೀಗ್‌
ಜೋಹಾನ್ಸ್’ಬರ್ಗ್:ದಕ್ಷಿಣ ಆಫ್ರಿಕಾ ಟಿ20 ( 20) ಲೀಗ್‌ಗೆ ಇಂದಿನಿಂದ ಅದ್ದೂರಿ ಚಾಲನೆ ಸಿಗಲಿದೆ.
ಆರು ಐಪಿಎಲ್ ಫ್ರಾಂಚೈಸಿಗಳು ಎಸ್‌ಎ20 ಲೀಗ್‌ನಲ್ಲಿ ಆರು ತಂಡಗಳ ಮಾಲಿಕತ್ವ ಹೊಂದಿವೆ. ಲೋಗೋ ಮತ್ತು ಆಟಗಾರರ ಜೆರ್ಸಿಗಳು ಐಪಿಎಲ್‌ನಂತೆಯೇ ವಿನ್ಯಾಸ ಮಾಡಲಾಗಿದೆ.
ಡೆಲ್ಲಿ ಕ್ಯಾಪಿಟಲ್ಸ್‌ನ ಮಾಲೀಕತ್ವ ಹೊಂದಿರುವ ಜೆಎಸ್‌ಡಬ್ಲ್ಯು ಗ್ರೂಪ್ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವನ್ನು ಹೊಂದಿದ್ದಾರೆ. ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಪರ್ಲ್‌ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಜೋಬರ್ಗ್ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ತಂಡದ ಎಂಐ ಕೇಪ್ ಟೌನ್, ಸನ್‌ರೈಸರ್ಸ್ ಹೈದರಾಬಾದ್ ತಂಡದ ಸನ್‌ ರೈಸರ್ಸ್ ಈಸ್ಟರ್ನ್‌ ಕೇಪ್, ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯ ಡರ್ಬನ್ ಸೂಪರ್ ಜೈಂಟ್ಸ್ ತಂಡಗಳು ಮೊದಲ ಆವೃತ್ತಿಯಲ್ಲಿ ಸೆಣೆಸಲಿವೆ.
ಫೆಬ್ರವರಿ 11 ರಂದು ಫೈನಲ್ ಪಂದ್ಯ ನಡೆಯಲಿದೆ.
ಉದ್ಘಾಟನಾ ಪಂದ್ಯದಲ್ಲಿ ಎಂಐ ಕೇಪ್‌ಟೌನ್‌ ಮತ್ತು ಪರ್ಲ್ ರಾಯಲ್ಸ್ ಮುಖಾಮುಖಿ ಯಾಗಲಿವೆ. ಭಾರತೀಯ ಕಾಲಮಾನ ರಾತ್ರಿ 9 ಗಂಟೆಗೆ ಪಂದ್ಯ ಆರಂಭವಾಗಲಿದೆ.
ತಂಡಗಳ ಮಾಹಿತಿ
ಪ್ರಿಟೋರಿಯಾ ಕ್ಯಾಪಿಟಲ್ಸ್ :ರಿಲೆ ರೊಸೊವ್ (ನಾಯಕ), ಮಾರ್ಕೊ ಮಾರೈಸ್, ಶೇನ್ ಡ್ಯಾಡ್ಸ್‌ವೆಲ್, ಕ್ಯಾಮರೂನ್ ಡೆಲ್ಪೋರ್ಟ್, ವಿಲ್ ಜ್ಯಾಕ್ಸ್, ಥ್ಯೂನಿಸ್ ಡಿ ಬ್ರುಯಿನ್, ಜೇಮ್ಸ್ ನೀಶಮ್, ಮಿಗೇಲ್ ಪ್ರಿಟೋರಿಯಸ್, ವೇಯ್ನ್ ಪಾರ್ನೆಲ್, ಶಾನ್ ವಾನ್ ಬರ್ಗ್, ಫಿಲಿಪ್ ಸಾಲ್ಟ್, ಕುಸಲ್ ಮೆಂಡಿಸ್, ಆನ್ರಿಚ್ ನೋಕಿಯಾ, ಅಡ್ಲಿವ್ ಲಿಡ್ಲ್, ಜೋಶುವಾ ಲಿಟಲ್, ಆದಿಲ್ ರಶೀದ್, ಡೇರಿನ್ ಡುಪಾವಿಲ್ಲನ್, ಈಥನ್ ಬಾಷ್.
ಜೋಬರ್ಗ್ ಸೂಪರ್ ಕಿಂಗ್ಸ್ :ಫಾಫ್ ಡು ಪ್ಲೆಸಿಸ್ (ನಾಯಕ), ರೀಜಾ ಹೆಂಡ್ರಿಕ್ಸ್, ಜಾನ್ನೆಮನ್ ಮಲನ್, ಹ್ಯಾರಿ ಬ್ರೂಕ್, ಲಿಯಸ್ ಡು ಪ್ಲೂಯ್, ಲೆವಿಸ್ ಗ್ರೆಗೊರಿ, ಮಾಲುಸಿ ಸಿಬೊಟೊ, ಕೈಲ್ ವೆರೆನ್ನೆ, ಡೊನಾವೊನ್ ಫೆರೇರಾ, ರೊಮಾರಿಯೊ ಶೆಫರ್ಡ್, ನಾಂದ್ರೆ ಬರ್ಗರ್, ಕ್ಯಾಲೆಬ್ ಸೆಲೆಕಾ, ಜೆರಾಲ್ಡ್ ಕೊಯೆಟ್ಜೀ, ವಿಲ್ ಜಾರ್ಜ್ ಗಾರ್ಟನ್, ಅಲ್ಜಾರ್ ಜಾರ್ಜ್ ಗಾರ್ಟನ್, ಮಹೇಶ್ ತೀಕ್ಷಣ.
ಪರ್ಲ್ ರಾಯಲ್ಸ್ :ಡೇವಿಡ್ ಮಿಲ್ಲರ್ (ನಾಯಕ), ಜೋಸ್ ಬಟ್ಲರ್, ಡೇನ್ ವಿಲಾಸ್, ಓಬೆಡ್ ಮೆಕಾಯ್, ಕಾರ್ಬಿನ್ ಬಾಷ್, ಜೇಸನ್ ರಾಯ್, ಮಿಚೆಲ್ ವ್ಯಾನ್ ಬ್ಯೂರೆನ್, ಇವಾನ್ ಜೋನ್ಸ್, ಇಯಾನ್ ಮಾರ್ಗನ್, ವಿಹಾನ್ ಲುಬ್ಬೆ, ಫೆರಿಸ್ಕೊ ಆಡಮ್ಸ್, ಕೋಡಿ ಯೂಸುಫ್, ಜೋರ್ನ್ ಫೋರ್ಚುಯಿನ್, ಐ ಮನಕ್, ರಾಮನ್ ಸಿಮಂಡ್ಸ್, ಲುಂಗಿ ಎನ್‌ಗಿಡಿ, ತಬ್ರೈಜ್ ಶಮ್ಸಿ.
ಎಂಐ ಕೇಪ್‌ಟೌನ್:ರಶೀದ್ ಖಾನ್ (ನಾಯಕ), ಡೆವಾಲ್ಡ್ ಬ್ರೆವಿಸ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾರ್ಜ್ ಲಿಂಡೆ, ಡೆಲಾನೊ ಪಾಟ್‌ಗೀಟರ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ರಿಯಾನ್ ರಿಕೆಲ್ಟನ್, ಸ್ಯಾಮ್ ಕರ್ರಾನ್, ಕಗಿಸೊ ರಬಾಡಾ, ವಕಾರ್ ಸಲಾಮ್ಖೈಲ್, ವೆಸ್ಲಿ ಮಾರ್ಷಲ್, ಡುವಾನ್ ಜಾನ್ಸೆನ್, ಬ್ಯೂರಾನ್ ಹೆಂಡ್ರಿಕ್ಸ್, ಜಿಯಾದ್ ಅಬ್ರಹಾಮ್, ಗ್ರಾಂಟ್ ರೋಲೋಫ್ಸೆನ್, ಜೋಫ್ರಾ ಆರ್ಚರ್, ಓಡಿಯನ್ ಸ್ಮಿತ್, ಓಲಿ ಸ್ಟೋನ್.
ಸನ್‌ರೈಸರ್ಸ್ ಈಸ್ಟರ್ನ್ ಕೇಪ್:ಐಡೆನ್ ಮಾರ್ಕ್ರಾಮ್ (ನಾಯಕ), ಸರೆಲ್ ಎರ್ವೀ, ಜೋರ್ಡಾನ್ ಹರ್ಮನ್, ಮಾರ್ಕ್ವೆಸ್ ಅಕರ್ಮನ್, ಟ್ರಿಸ್ಟಾನ್ ಸ್ಟಬ್ಸ್, ಆಡಮ್ ರೋಸಿಂಗ್‌ಟನ್, ಜೋರ್ಡಾನ್ ಕಾಕ್ಸ್, ಟಾಮ್ ಅಬೆಲ್, ಜೇಮ್ಸ್ ಫುಲ್ಲರ್, ಅಯಬುಲೆಲಾ ಗ್ಕಮಾನೆ, ಮಾರ್ಕೊ ಜಾನ್ಸೆನ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಜೆಜೆ ಸ್ಮಟ್ಸ್, ಒಟ್ನೀಲ್ ಬಾರ್ಟ್‌ಮ್ಯಾನ್, ಸಿಸಂಡಾ ಮಗಲಾ, ಜುನೈದ್ ದಾವೂದ್, ಮೇಸನ್ ಕ್ರೇನ್, ಬ್ರೈಡನ್ ಕಾರ್ಸೆ.
ಡರ್ಬನ್ ಸೂಪರ್ ಜೈಂಟ್ಸ್:ಕ್ವಿಂಟನ್ ಡಿ ಕಾಕ್ (ನಾಯಕ), ಮ್ಯಾಥ್ಯೂ ಬ್ರೀಟ್‌ಝ್ಕೆ, ಕ್ರಿಸ್ಟಿಯಾನ್ ಜೋಂಕರ್, ಜಾನ್ಸನ್ ಚಾರ್ಲ್ಸ್, ಕೈಲ್ ಮೇಯರ್ಸ್, ವಿಯಾನ್ ಮುಲ್ಡರ್, ಅಕಿಲಾ ದನಂಜಯ, ಜೇಸನ್ ಹೋಲ್ಡರ್, ಕೀಮೋ ಪಾಲ್, ಡ್ವೈನ್ ಪ್ರಿಟೋರಿಯಸ್, ಪ್ರೆನೆಲನ್ ಸುಬ್ರಾಯೆನ್, ರೀಸ್ ಟೋಪ್ಲಿ, ದಿಲ್ಶನ್ ಮಧುಶಂಕ, ಜೂನಿಯರ್ ಡಾಲಾ, ಕೈಲ್ ಅಬಾಟ್, ಸೈಮನ್ ಹಾರ್ಮರ್, ಕೇಶವ್ ಮಹಾರಾಜ್.