ಆಸೀಸ್‌ಗೆ ಆಘಾತ: ಮೂರನೇ ಟೆಸ್ಟ್’ನಿಂದ ಕಮಿನ್ಸ್ ಹೊರಕ್ಕೆ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ – ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದಿಂದ ಆಸಿಸ್ ನಾಯಕ ಪ್ಯಾಟ್ ಕಮಿನ್ಸ್ ಹೊರಗುಳಿಯಲಿದ್ದಾರೆ. 3ನೇ ಪಂದ್ಯವು ಇಂಧೋರ್ ನಲ್ಲಿ ಮಾರ್ಚ್ 1ರಿಂದ ನಡೆಯಲಿದೆ.
ಎರಡನೇ ಟೆಸ್ಟ್ ಪಂದ್ಯ ಮುಗಿದ ಬಳಿಕ ಕಮಿನ್ಸ್ ಅವರು ಕೌಟುಂಬಿಕ ಕಾರಣದಿಂದ ತವರು ಸಿಡ್ನಿಗೆ ಮರಳಿದ್ದರು. ತಾಯಿಯ ಅನಾರೋಗ್ಯದ ಕಾರಣದಿಂದ ಕಮಿನ್ಸ್ ಅವರಿನ್ನೂ ಸಿಡ್ನಿಯಲ್ಲೇ ಇದ್ದಾರೆ. ಹೀಗಾಗಿ ಮೂರನೇ ಪಂದ್ಯಕ್ಕೆ ಲಭ್ಯವಿರುವುದಿಲ್ಲ ಎಂದು ಆಸಿಸ್ ತಂಡದ ಮೂಲಗಳು ತಿಳಿಸಿವೆ. ನನ್ನ ಕುಟುಂಬದೊಂದಿಗೆ ನಾನು ಇಲ್ಲಿರಬೇಕಿದೆ” ಎಂದು ಕಮಿನ್ಸ್ ಹೇಳಿದ್ದಾರೆ.