ಎಚ್‌ಎಸ್‌ಬಿಸಿ ಇಂಡಿಯಾ ಬ್ರಾಂಡ್‌ ರಾಯಭಾರಿಯಾಗಿ ಕೊಹ್ಲಿ ನೇಮಕ
ಬೆಂಗಳೂರು:ಕ್ರಿಕೆಟ್‌ ತಾರೆ ವಿರಾಟ್‌ ಕೊಹ್ಲಿ ಅವರು ಎಚ್‌ಎಸ್‌ಬಿಸಿ ಇಂಡಿಯಾ ಬ್ಯಾಂಕ್‌ ನ ಬ್ರಾಂಡ್‌ ರಾಯಭಾರಿಯಾಗಿ ನೇಮಕ ವಾಗಿದ್ದಾರೆ. ಎಚ್‌ಎಸ್‌ಬಿಸಿ ಇಂಡಿಯಾ ಸಂಸ್ಥೆಯು ಕೊಹ್ಲಿ ಜತೆಗೆ ಈ ಬಗ್ಗೆ ಒಪ್ಪಂದ ಮಾಡಿಕೊಂಡಿದೆ.
ಕೊಹ್ಲಿ ಅವರು ಕ್ರೀಡೆಯಲ್ಲಿ ಉತ್ಕೃಷ್ಟತೆ, ವಿಶ್ವಾಸಾರ್ಹತೆ ಮತ್ತು ನಂಬಿಕೆಗೆ ಹೆಸರುವಾಸಿ ಯಾಗಿದ್ದಾರೆ. ಎಚ್‌ಎಸ್‌ಬಿಸಿ ಇಂಡಿಯಾ ಕೂಡ ಈ ಎಲ್ಲ ಗುಣಗಳನ್ನು ಹೊಂದಿದೆ. ಆದ್ದರಿಂದ ಅವುಗಳನ್ನು ಬಿಂಬಿಸಲು ಕೊಹ್ಲಿ ಅವರು ಸಮರ್ಥ ರಾಯಭಾರಿಯಾಗಿದ್ದಾರೆ ಎಂದು ಎಚ್‌ಎಸ್‌ಬಿಸಿ ಇಂಡಿಯಾದ ಸಿಇಒ ಹಿತೇಂದ್ರ ದವೆ ಹೇಳಿದರು.
ಅಂತಾರಾಷ್ಟ್ರೀಯ ಮಟ್ಟದ ಹಣಕಾಸು ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿರುವ ಎಚ್‌ಎಸ್‌ ಬಿಸಿ ಜತೆಗೆ ಸಹಭಾಗಿತ್ವ ಮಾಡಿ ಕೊಳ್ಳುವುದಕ್ಕೆ ಸಂತಸವಾಗುತ್ತಿದೆ. ಎಚ್‌ಎಸ್‌ಬಿಸಿ ಸಂಸ್ಥೆ ಯು ಭಾರತದಲ್ಲಿ ಹಣಕಾಸು ಶಿಸ್ತು ಮತ್ತು ಬದ್ಧತೆಯನ್ನು ಒಳ ಗೊಂಡಿರುವ ಸಂಸ್ಥೆ ಯಾಗಿದೆ ಎಂದರು.
ಎಚ್‌ಎಸ್‌ಬಿಸಿ ಇಂಡಿಯಾದ ಪರ್ಸನಲ್‌ ಬ್ಯಾಂಕಿಂಗ್ ವಿಭಾಗದ ಸಂದೀಪ್‌ ಬಾತ್ರಾ ಅವರು ಮಾತನಾಡಿ, ಕ್ರಿಕೆಟ್‌ ಇಡಿ ದೇಶವನ್ನು ಒಗ್ಗೂಡಿಸುತ್ತದೆ. ಭಾವನಾತ್ಮಕವಾಗಿಯೂ ಜಗತ್ತಿನಾದ್ಯಂತ ಭಾರತೀಯರನ್ನು ಒಂದುಗೂ ಡಿಸುತ್ತದೆ. ವಿರಾಟ್‌ ಕೊಹ್ಲಿ ಜತೆಗೆ ನಮ್ಮ ಸಹಭಾಗಿತ್ವ ಕೂಡ ಶಿಸ್ತು ಮತ್ತು ಬದ್ಧತೆಯನ್ನು ಬಿಂಬಿಸಿದೆ ಎಂದರು.
ಎಚ್‌ಎಸ್‌ಬಿಸಿ ವಿದೇಶಿ ಮೂಲದ ಬ್ಯಾಂಕ್‌ ಆಗಿದ್ದು, 1983ರಿಂದ ಭಾರತದಲ್ಲೂ ಕಾರ್ಯನಿರ್ವಹಿಸುತ್ತಿದೆ. 2018 ಜೂನ್‌ ವೇಳೆಗೆ 36,000 ಉದ್ಯೋಗಿಗಳನ್ನು ಒಳಗೊಂಡಿತ್ತು.