 2025: ಧೋನಿ ಅಭಿಮಾನಿಗಳಿಗೆ ಬೇಸರ ತರಿಸಿದ ಅನ್‌ಕ್ಯಾಪ್ಡ್ ನಿಯಮ
ಮುಂಬಯಿ:18ನೇ ಆವೃತ್ತಿಯ ಐಪಿಎಲ್‌( 2025) ಆಟಗಾರರ ಹರಾಜು ವಿಷಯಕ್ಕೆ ಸಂಬಂಧಿಸಿದ ಎಲ್ಲ ಗೊಂದಲವನ್ನು ಬಿಸಿಸಿಐ ಶನಿವಾರ ಇತ್ಯರ್ಥಗೊಳಿಸಿತ್ತು. ಫ್ರಾಂಚೈಸಿಗಳ ಆಗ್ರಹದಂತೆ ಬಿಸಿಸಿಐ () 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಿದೆ. ಜತೆಗೆ ಕಳೆದ ಐದು ವರ್ಷಗಳಿಂದ ಬಿಸಿಸಿಐ ಒಪ್ಪಂದವನ್ನು ಹೊಂದಿರದ ಭಾರತೀಯ ಆಟಗಾರರಿಗೆ ಅನ್‌ಕ್ಯಾಪ್ಡ್ ಆಟಗಾರನಾಗಿ ಆಡಲು ಅವಕಾಶ ನೀಡಲಾಗಿದೆ. ಹೀಗಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ಎಂ.ಎಸ್ ಧೋನಿಯವರನ್ನು( ) ಅನ್‌ ಕ್ಯಾಪ್ಡ್‌ ಕೋಟಾದಲ್ಲಿ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶವಿದೆ. ಆದರೆ ಈ ನಿಯಮ ಇದೀಗ ಧೋನಿ ಅಭಿಮಾನಿಗಳಿಗೆ(   ) ಬೇಸರ ತರಿಸಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿ 5 ವರ್ಷ ಕಳೆದಿದ್ದರೆ ಅಂಥ ಆಟಗಾರರನ್ನು ಅನ್‌ಕ್ಯಾಪ್ಡ್‌ ಆಟಗಾರ ಎಂದು ಪರಿಗಣಿಸುವ ನಿಯಮವನ್ನು ಬಿಸಿಸಿಐ 2008ರಲ್ಲಿ ಪರಿಚಯಿಸಿತ್ತು. ಆದರೆ, ಈ ಅವಕಾಶವನ್ನು ಈ ವರೆಗೂ ಯಾವ ತಂಡವೂ ಬಳಕೆ ಮಾಡಿಕೊಂಡಿಲ್ಲ. 2021ರಲ್ಲಿ ಈ ನಿಯಮವನ್ನು ಕೈಬಿಡಲಾಗಿತ್ತು. ಇದೀಗ ಮತ್ತೆ ಈ ನಿಯಮವನ್ನು ಜಾರಿಗೆ ತಂದಿದೆ. ಕೆಲವರು ಧೋನಿ ಐಪಿಎಲ್‌ ಆಡಲೆಂದೇ ಈ ನಿಯಮ ಜಾರಿ ಮಾಡಲಾಗಿದೆ ಎಂದು ಹೇಳಲಾರಂಭಿಸಿದ್ದಾರೆ. ಆದರೆ ಧೋನಿ ಅಭಿಮಾನಿಗಳು ಮಾತ್ರ ಈ ನಿಯದಿಂದ ಬೇಸರಗೊಂಡಿದ್ದಾರೆ. ದಿಗ್ಗಜ ಆಟಗಾರನನ್ನು ಅನ್‌ಕ್ಯಾಪ್ಡ್‌ ಆಟಗಾರನಾಗಿ ನೋಡುವುದು ಇಷ್ಟವಿಲ್ಲ ಎಂದಿದ್ದಾರೆ. ಇನ್ನೂ ಕೆಲವರು ಇದು  ಧೋನಿಗೆ ಅಪಮಾನ ಮಾಡಿದಂತಾಗುತ್ತದೆ ಎಂದು ಬೇಸರ ಹೊರಹಾಕಿದ್ದಾರೆ.
        ://./Yq11YvkZeQ
2022ರ ಮೆಗಾ ಹರಾಜಿಗೂ ಮುನ್ನ ಧೋನಿಯನ್ನು 12 ಕೋಟಿ ಕೊಟ್ಟು ಸಿಎಸ್‌ಕೆ ತಂಡದಲ್ಲಿ ಉಳಿಸಿಕೊಂಡಿತ್ತು. 2020ರಲ್ಲಿ ನಿವೃತ್ತಿ ಪ್ರಕಟಿಸಿದ್ದ ಧೋನಿಯನ್ನು ಈಗ ಸಿಎಸ್‌ಕೆ 4 ಕೋಟಿಗೆ ಅನ್‌ಕ್ಯಾಪ್ಡ್‌ ಆಟಗಾರ ವಿಭಾಗದಲ್ಲಿ ಉಳಿಸಿಕೊಳ್ಳಬಹುದಾಗಿದೆ. ಆದರೆ ಇದು ಅವರ ಅಭಿಮಾನಿಗಳಿಗೆ ಇಷ್ಟವಿಲ್ಲ.
ಧೋನಿ( ) ಅವರು ಕಳೆದ ವರ್ಷವೇ ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಒಂದು ವರ್ಷದ ಮಟ್ಟಿಗೆ ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿ ಎಂದೇ ಹೇಳಲಾಗಿತ್ತು. ಆದ್ಯಾಗೂ ಧೋನಿ ತಮ್ಮ ನಿವೃತ್ತಿ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.
ಇದನ್ನೂ ಓದಿ 2025 : ಹರಾಜಿನಲ್ಲಿ ಪಾಲ್ಗೊಂಡು ಆಟಕ್ಕೆ ಬರದಿದ್ದರೆ ಬ್ಯಾನ್‌; ಐಪಿಎಲ್‌ನಲ್ಲಿ ಹೊಸ ರೂಲ್ಸ್‌
        ,         .             '           .     ,    .…../
ಈ ಬಾರಿ ಆಟಗಾರರಿಗೆ ಜಾಕ್‌ಪಾಟ್‌
ಈ ಬಾರಿಯ ಐಪಿಎಲ್‌ ಆಡುವ ಹೆಚ್ಚುವರಿ ವೇತನ ಸಿಗಲಿದೆ. ತಾವು ಆಡುವ ಪ್ರತಿ ಪಂದ್ಯಕ್ಕೆ 7.5 ಲಕ್ಷ ಪಡೆಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಘೋಷಿಸಿದ್ದಾರೆ. ಆಟಗಾರರು ಹರಾಜಾಗುವ ಮೊತ್ತವನ್ನು ಹೊರತುಪಡಿಸಿ ಈ ಹೆಚ್ಚಿವರಿ ಹಣ ಸಿಗಲಿದೆ. ಒಬ್ಬ ಆಟಗಾರ ಆವೃತ್ತಿಯ ಎಲ್ಲ 14 ಲೀಗ್‌ ಪಂದ್ಯಗಳನ್ನು ಆಡಿದರೆ ಆತನಿಗೆ ಒಟ್ಟು 1.05 ಕೋಟಿ ಹೆಚ್ಚುವರಿ ವೇತನ ಸಿಗಲಿದೆ. ಕಡಿಮೆ ಮೊತ್ತಕ್ಕೆ ಹರಾಜಾಗಿ, ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಆಟಗಾರರಿಗೆ ಈ ನಿಯಮದಿಂದ ಹೆಚ್ಚಿನ ಅನುಕೂಲ ಸಿಗಲಿದೆ.
   …–   ../6xbcwAsIk6