ಚಿನ್ನದ ಪದಕ ಗೆದ್ದ ಎಚ್ ಎಸ್ ಪ್ರಣಯ್
ಮಲೇಷ್ಯಾ:ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್’ನಲ್ಲಿ ಭಾರತದ ಸ್ಟಾರ್ ಷಟ್ಲರ್ ಎಚ್ ಎಸ್ ಪ್ರಣಯ್ ಅಬ್ಬರಿಸಿದ್ದು, ಚೀನಾದ ಹಾಂಗ್ ಯಾಂಗ್ ವೆಂಗ್ ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ.
ಕೌಲಾಲಂಪುರದಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಅವರು ತಮ್ಮ ಪ್ರತಿಸ್ಪರ್ಧಿಯನ್ನು 21-19, 13-21, 21-18 ಅಂತರದಿಂದ ಸೋಲಿಸಿ ದರು.
ಇನ್ನು ಕಳೆದ ವರ್ಷ ಜೊನಾಟಾನ್ ಕ್ರಿಸ್ಟಿ ವಿರುದ್ಧ 2022ರ ಸ್ವಿಸ್ ಓಪನ್ನಲ್ಲಿ ಸೋತ ನಂತರ ಪ್ರಣಯ್ ಅವರ ಮೊದಲ ಫೈನಲ್ ಪಂದ್ಯ ಇದಾಗಿದೆ.
ವಿಶ್ವದ 9ನೇ ಶ್ರೇಯಾಂಕಿತ ಆಟಗಾರ ಪ್ರಣಯ್ ಮೊದಲ ಗೇಮ್ನ ಕೊನೆ ಯಲ್ಲಿ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹಿಂದೆ ಸರಿದಿದ್ದರು.