3ನೇ ವಿಶ್ವ ಟೆಸ್ಟ್ ಚಾಂಪಿಯನ್​ ಶಿಪ್​ ವೇಳಾಪಟ್ಟಿ ​ಪ್ರಕಟ
ಬೆಂಗಳೂರು:16 ರಿಂದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ನಡುವೆ ನಡೆಯ ಲಿರುವ ಆಯಶಸ್​ ಸರಣಿಯಿಂದ ಪ್ರಾರಂಭ ವಾಗಲಿದೆ.
ನಾಲ್ಕು ದಿನಗಳ ಹಿಂದಷ್ಟೇ ವಿಶ್ವ ಟೆಸ್ಟ್​ ಚಾಂಪಿಯನ್ಸ್​ ಆಗಿ ಹೊರ ಹೊಮ್ಮಿದ್ದ ಕಾಂಗರೂ ಪಡೆ​ 3ನೇ  ಅಭಿಯಾನವನ್ನ ಇಂಗ್ಲೆಂಡ್​ ಜೊತೆ ಆರಂಭಿಸಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್​ ವಿಶ್ವ ಟೆಸ್ಟ್​​ ಚಾಂಪಿಯನ್​ ಶಿಪ್ 2023-25ರ ವೇಳಾ ಪಟ್ಟಿಯನ್ನು ಪ್ರಕಟಿಸಿದೆ.
ಈ ಬಾರಿಯ  2023 – 25ರಲ್ಲಿ ಭಾರತ ಒಟ್ಟು 19 ಟೆಸ್ಟ್​ ಪಂದ್ಯ ಗಳನ್ನು ಆಡಲಿದೆ. ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಐದು, ಬಾಂಗ್ಲಾದೇಶ ವಿರುದ್ಧ ಎರಡು ಮತ್ತು ನ್ಯೂಜಿಲ್ಯಾಂಡ್​​ ವಿರುದ್ಧ ಮೂರು ಟೆಸ್ಟ್ ಪಂದ್ಯ ಗಳನ್ನು ಆಡಲಿದೆ. ವಿದೇಶ ಪ್ರವಾಸದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎರಡು, ದಕ್ಷಿಣ ಆಫ್ರಿಕ ವಿರುದ್ಧ ಎರಡು ಮತ್ತು ಆಸ್ಟ್ರೇಲಿಯಾ ವಿರುದ್ಧ ಐದು ಟೆಸ್ಟ್ ಪಂದ್ಯಗಳನ್ನು ಆಡಲಿದೆ.
ಇತ್ತೀಚೆಗೆ ಲಂಡನ್‌ನ ಓವಲ್‌ನಲ್ಲಿ ನಡೆದ ವಿಶ್ವ ಟೆಸ್ಟ್​​ ಚಾಂಪಿಯನ್​ ಶಿಪ್ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಟೀಮ್​ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲನುಭವಿಸಿತ್ತು. ಈ ಮೂಲಕ ಸತತ ಎರಡನೇ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್​() ಫೈನಲ್ ಪ್ರವೇಶಿಸಿ ನಿರಾಸೆ ಮೂಡಿಸಿತ್ತು. ಇದೀಗ ಇದೇ ಜುಲೈನಿಂದ ಟೀಮ್​ ಇಂಡಿಯಾ ವಿಶ್ವ ಟೆಸ್ಟ್​ ಚಾಂಪಿ ಯನ್​ ಶಿಪ್​ 2023-25 ಅಭಿಯಾನವನ್ನ ಪ್ರಾರಂಭಿಸಲಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಭಾರತದ ವಿಶ್ವ ಟೆಸ್ಟ್​ ಚಾಂಪಿಯನ್ಸ್​ ಪ್ರಯಾಣ ಪ್ರಾರಂಭವಾಗಲಿದೆ.
ಭಾರತ  ವೆಸ್ಟ್​ ಇಂಡೀಸ್​
ಜುಲೈ 12-16 ಮೊದಲ ಟೆಸ್ಟ್ (ಡೊಮಿನಿಕಾ)
ಜುಲೈ 20-24 ಎರಡನೇ ಟೆಸ್ಟ್ (ಟ್ರಿನಿಡಾಡ್)
ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ
ಡಿಸೆಂಬರ್ – ಮೊದಲ ಟೆಸ್ಟ್​​
ಜನವರಿ 2024 – ಎರಡನೇ ಟೆಸ್ಟ್‌
ಇಂಗ್ಲೆಂಡ್‌ನ ಭಾರತ ಪ್ರವಾಸ
ಜನವರಿ/ಫೆಬ್ರವರಿ 2024 – ಐದು ಟೆಸ್ಟ್‌ಗಳು
ಬಾಂಗ್ಲಾದೇಶದ ಭಾರತ ಪ್ರವಾಸ
ಸೆಪ್ಟೆಂಬರ್/ಅಕ್ಟೋಬರ್ 2024 – ಎರಡು ಟೆಸ್ಟ್‌ಗಳು
ಭಾರತಕ್ಕೆ ನ್ಯೂಜಿಲ್ಯಾಂಡ್ ತಂಡದ​ ಪ್ರವಾಸ
ಅಕ್ಟೋಬರ್/ನವೆಂಬರ್ 2024 – ಮೂರು ಟೆಸ್ಟ್‌ಗಳು
ಭಾರತ ಆಸ್ಟ್ರೇಲಿಯಾ ಪ್ರವಾಸ 2024-25 (ಬಾರ್ಡರ್-ಗವಾಸ್ಕರ್ ಟ್ರೋಫಿ)
ನವೆಂಬರ್ 2024-ಜನವರಿ 2025 – ಐದು ಟೆಸ್ಟ್‌ಗಳನ್ನು ಆಡಲಿದೆ.
ತಂಡಗಳು ಗೆಲುವಿಗೆ 12 ಅಂಕಗಳನ್ನು, ಟೈಗೆ 6 ಮತ್ತು ಡ್ರಾಕ್ಕೆ 4 ಅಂಕಗಳನ್ನು ಪಡೆಯುತ್ತವೆ. ಈ ಅಭಿಯಾನದಲ್ಲಿ ಒಂಬತ್ತು ತಂಡಗಳು, ಮೂರು ಸರಣಿಗಳನ್ನು ತವರಿನಲ್ಲಿ ಮತ್ತು ಮೂರು ವಿದೇಶದಲ್ಲಿ ಆಡಲಿವೆ.